*ರಾಷ್ಟ್ರಪ್ರೇಮದ ಮಹಾಘೋಷ: ಗೋವಿಂದರಾಜನಗರದಲ್ಲಿ ಐತಿಹಾಸಿಕ ಹಿಂದೂ ಸಮಾಜೋತ್ಸವ*

varthajala
0


ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಸಾವಿರಾರು ಮಹಿಳೆಯರು ಕಳಸ ಹೊತ್ತು
ಭರತಾರಿಣಿ ಆಶ್ರಮ ಮಾತಾಜಿ ವಿವೇಕಮಯಿರವರ ಜೊತೆಯಲ್ಲಿ ಗೋವಿಂದರಾಜನಗರದಲ್ಲಿ
ಜರುಗಿದ ಭವ್ಯ ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು : ಯುವಜನರ ಮನಸ್ಸಿನಲ್ಲಿ ಪ್ರತಿದಿನ, ಪ್ರತಿಯೊಂದು ಉಸಿರಿನಲ್ಲೂ ರಾಷ್ಟ್ರಪ್ರೇಮ ಬೆಳಸುವ ಕಾರ್ಯವನ್ನು ಆರ್‌ಎಸ್‌ಎಸ್ ನಿರಂತರವಾಗಿ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು. ಬಿಜಿಎಸ್ ಆಟದ ಮೈದಾನದಲ್ಲಿ ಹಿಂದು ಸಮಾಜೋತ್ಸವ ಆಯೋಜನ ಸಮಿತಿ ಗೋವಿಂದರಾಜನಗರ ವತಿಯಿಂದ ಹಿಂದು ಸಮಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಹಿಂದು ರಾಷ್ಟ್ರ ಎಂಬ ಸತ್ಯವನ್ನು ಡಾ. ಹೆಡ್ಗೆವಾರ್ ಅವರು ದಶಕಗಳ ಹಿಂದೆಯೇ ಸಾರಿದ್ದರು. ಯುವಜನತೆಯ ಪ್ರತಿ ಉಸಿರಿನಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿರಂತರವಾಗಿ ಶ್ರಮಿಸುತ್ತಿದೆ. ಹಿಂದು ಧರ್ಮವು ರಾಮ ಮತ್ತು ಕೃಷ್ಣರ ಕಾಲಕ್ಕಿಂತಲೂ ಪುರಾತನವಾದುದು ಎಂದರು. ಪ್ರಶಾಂತನಗರ ವೃತ್ತದಿಂದ ಆರಂಭವಾದ ಬೃಹತ್ ಶೋಭಾಯಾತ್ರೆಗೆ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರು, ಭವತಾರಿಣಿ ಆಶ್ರಮದ ಪೂಜ್ಯ ಮಾತಾಜಿ ವಿವೇಕಮಯಿರವರು, ಜಾಂಭವ ಮಠದ ಶಿವಮುನಿ ಸ್ವಾಮೀಜಿರವರು, ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಬಿ.ಎಲ್. ಸಂತೋಷ್ ಜೀರವರು, ದಕ್ಷಿಣ ಜಿಲ್ಲಾ ಉಪಾಧ್ಯಕ್ಷರಾದ ಕೆ. ಉಮೇಶ್ ಶೆಟ್ಟಿರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರು ಹಾಗೂ ಗುರುರಾಜ್ ರವರು ಗೋಪೂಜೆ ಮತ್ತು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು. ಸಂಸದರಾದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು. ಕರ್ನಾಟಕದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಸಮಾಜೋತ್ಸವಗಳು ನಡೆಯುತ್ತಿದ್ದು, ಇದು ಹಿಂದೂ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ನಮಗೆ ಸತ್ಯ ಮಾತ್ರ ಹೇಳಿ ತಿಳಿದಿದೆಯೇ ಹೊರತು, ಅದರ ವಿರುದ್ಧ ಮಾತನಾಡಿ ಗೊತ್ತಿಲ್ಲ.



ಸಮಾಜದ ಹಿರಿಯರ ಆಶೀರ್ವಾದ ಪಡೆದು ಹಿಂದು ಜೀವನ ಪದ್ದತಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು. ಹಿಂದು ಧರ್ಮವು ರಾಮ ಮತ್ತು ಕೃಷ್ಣರ ಕಾಲಕ್ಕಿಂತಲೂ ಪುರಾತನವಾದುದು. ರಾಜ-ಮಹಾರಾಜರು ಇಲ್ಲದ ಸಂದರ್ಭದಲ್ಲೂ ಈ ದೇಶವನ್ನು ಧರ್ಮವೇ ಸುಭದ್ರವಾಗಿ ಕಾಪಾಡಿಕೊಂಡು ಬಂದಿದೆ ಎಂದು ಹೇಳಿದರು. ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಹಿಂದು ಧರ್ಮವು ಭವ್ಯ ಹಾಗೂ ಶ್ರೇಷ್ಠವಾದುದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತವು ಸಾಧು-ಸಂತರು ಮತ್ತು ಪುಣ್ಯ ಕ್ಷೇತ್ರಗಳ ನೆಲೆಬೀಡಾಗಿದೆ. ಧರ್ಮ ರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದ್ದು, ಹಿಂದು ಧರ್ಮ ಎಂದರೆ ಅಭಿಮಾನ, ಸೇವಾ ಮನೋಭಾವನೆ ಇರಬೇಕು. ಸ್ವಾರ್ಥ ಇಲ್ಲದೇ, ಕ್ರಿಯಾಶೀಲವಾಗಿ ಶ್ರಮಿಸುತ್ತಿರುವ ಸ್ವಯಂ ಸೇವಕ ಸಂಘವನ್ನು ಸ್ಮರಣೆ ಮಾಡಬೇಕು ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮಕ್ಕೂ ಮೊದಲು ಪ್ರಶಾಂತನಗರ ವೃತ್ತದಿಂದ ಬಿಜಿಎಸ್ ಆಟದ ಮೈದಾನದವರೆ ಸಾವಿರಾರು ಹಿಂದೂ ಕಾರ್ಯಕರ್ತರುಗಳು ಭಾರತಾ ಮಾತೆ ಬಾವಚಿತ್ರ ಭವ್ಯ ಮೆರವಣಿಗೆಯಲ್ಲಿ ಸಾಗಿತು. ಬಾಲ ಶ್ರೀರಾಮ ವೇಷತೊಟ್ಟ ನೂರಾರು ಮಕ್ಕಳು.ಭಾಗವಹಿಸಿದರು.


ಈ ವೇಳೆ ಭವತಾರಿಣಿ ಆಶ್ರಮದ ಮಾತಾಜೀ ವಿವೇಕಮಯಿಯವರು, ಜಾಂಭವ ಮಠದ ಶಿವಮುನಿ ಸ್ವಾಮೀಜಿರವರು ಆಶೀರ್ವಚನ ನೀಡಿದರು. ಬಾಕ್ಸ್ : ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ : ಬಹುತ್ವದ ಮಾತು ಹೇಳಿಕೊಂಡು ನಮ್ಮ ಬದುಕನ್ನು ರೂಪಿಸುವವರು, ಅದೇ ಸಮಯದಲ್ಲಿ ಹಿಂದುತ್ವದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ, ಬಹುತ್ವ ಮತ್ತು ವೈವಿಧ್ಯತೆಯ ಬಗ್ಗೆ ಹಿಂದೂ ಸಮಾಜಕ್ಕೆ ಆಳವಾದ ನಂಬಿಕೆ ಇರಬೇಕಾಗಿದೆ ಹಾಗೂ ಅದನ್ನು ಗಟ್ಟಿಯಾಗಿ ಕಾಪಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಬಹುತ್ವವು ಇತರರಿಗೆ ಮಾತ್ರ ಸೀಮಿತವಾಗಿಬಿಡುತ್ತದೆ.

ನಾವು ಜೀವಪರರಾಗಿರಬೇಕು ಎಂದು ಹೇಳುವವರೇ ಕೆಲವೊಮ್ಮೆ ಪದೇಪದೇ ಅಕ್ರಮಣಗಳನ್ನು ನಡೆಸುತ್ತಾರೆ. ಹಿಂದೂ ಸಮಾಜದ ಮೇಲೆಯೇ ದಾಳಿ ಮಾಡುತ್ತಾರೆ. ಈ ಎಲ್ಲ ವಿಚಾರಗಳ ಬಗ್ಗೆ ನಾವು ಈಗ ಬಹಳ ದೊಡ್ಡ ಮಟ್ಟದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅಗತ್ಯ ಎಂದು ಬಿ. ಎಲ್. ಸಂತೋಷ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Post a Comment

0Comments

Post a Comment (0)