ಸಾಧಕರಿಗೆ "ರತ್ನಶ್ರೀ" ಹಾಗೂ "ಓಬವ್ವ" ಪ್ರಶಸ್ತಿ ಪ್ರದಾನ

varthajala
0

ಬೆಂಗಳೂರು : ಪ್ರಜಾಹಿತ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಸಾಮಾಜಿಕ ಸೇವೆ ಮಾಡಿ ಗುರುತಿಸಿಕೊಳ್ಳದೆ ಇರುವಂತಹ ವ್ಯಕ್ತಿಗಳನ್ನು ಹುಡುಕಿ, ಅವರುಗಳನ್ನು ಗುರುತಿಸಿ ಅವರ ಸೇವೆಯನ್ನು ಗೌರವಿಸಿ  ಧಾರ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಪತ್ರಿಕೋದ್ಯಮ ಮುಂತಾದ ರಂಗಗಳಲ್ಲಿ ಸೇವಾನಿರತ ಸಾಧಕರಿಗೆ *"ರತ್ನಶ್ರೀ"* ಹಾಗೂ ಮಹಿಳಾ ಸಾಧಕಿಯರಿಗೆ ವಿಶೇಷವಾಗಿ *"ಓಬವ್ವ"* ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ಟ್ರಸ್ಟಿನ ಅಧ್ಯಕ್ಷ ಎಲ್.ಮಂಜುನಾಥ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಎಸ್.ಮಂಜುನಾಥ್, ದಾಸರಹಳ್ಳಿಯ ಚರಣ್ ಗೌಡ, ದಾಸರಹಳ್ಳಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಪ್ರಜಾಪಿತ ಈಶ್ವರಿ ಬ್ರಹ್ಮ ಕುಮಾರಿಸ್ ನ ಲಿಂಗರಾಜು, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತಕರಾದ ಬಿ.ಆರ್. ಗೋವರ್ಧನ್ ಪಾಣಿ, ರೂಪದರ್ಶಿ  ಚೇತನ್ ಗೌಡ, ಖ್ಯಾತ ನಿರೂಪಕ ಹಿರೇಮಗಳೂರು ಕಣ್ಣನ್ ರವರ ಶಿಷ್ಯರಾದ  ವೇಣುಗೋಪಾಲ್ ಆಚಾರ್ಯ ಮುಂತಾದ  ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದರಿ ಟ್ರಸ್ಟ್ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ  ತೊಡಗಿದ್ದು, ಕಳೆದೆರಡು ವರ್ಷಗಳಿಂದ ಕರೋನಾ ಸಂದರ್ಭದಲ್ಲಿಯೂ ಹಲವಾರು ಅನಾಥ ಮತ್ತು ಬಡ ಮಕ್ಕಳಿಗೆ ಉಚಿತವಾಗಿ ಆಹಾರವನ್ನು ಪೂರೈಸಿರುತ್ತಾರೆ.  ಸರ್ಕಾರಿ ಶಾಲಾ ಮಕ್ಕಳಿಗೆ ಟ್ರಸ್ಟ್ ನ ವತಿಯಿಂದ ಉಚಿತವಾಗಿ ಪುಸ್ತಕಗಳ ವಿತರಣೆಯನ್ನು ಅನೇಕ ವರ್ಷಗಳಿಂದ ಮಾಡಲಾಗುತ್ತಿರುವುದರ ಬಗ್ಗೆ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತವಾಯಿತು.


Tags

Post a Comment

0Comments

Post a Comment (0)