ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನ

varthajala
0

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನದ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡಲೇ  ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಾಯಿತು, ಪಿಎಸ್ಐ  ನೇಮಕಾತಿಹಗರಣದಿಂದ   ಸಾವಿರಾರು ಪ್ರಾಮಾಣಿಕ ಅಭ್ಯರ್ಥಿಗಳು ಇಂದು ತೀವ್ರ ಸಂಕಷ್ಟದಲ್ಲಿ ಇದ್ದಾರೆ ಪ್ರಾಮಾಣಿಕರಿಗೆ ಸಹಕರಿಸುವ ಮನೋಭವ ಬಿಜೆಪಿ ಸರ್ಕಾರದಿಂದ ತೋರುತ್ತಿಲ್ಲ ಆದ್ದರಿಂದ ಈ ಪ್ರಕರಣದ ಆರೋಪಿಗಳನ್ನು  ರಕ್ಷಿಸುವ ಕಾರ್ಯ ಬಿಜೆಪಿ ಸರ್ಕಾರದಿಂದ ನಡೆಯುತ್ತಿದೆ  ದಿವ್ಯಾ ಹಾಗರಗಿ  ಮಾಲೀಕತ್ವದ ವಿದ್ಯಾಸಂಸ್ಥೆಯ ಮೂಲಕ ಭ್ರಷ್ಟಾಚಾರ ನಡೆದಿರುವುದು ಬಹಿರಂಗವಾಗಿದೆ ಆದರೂ ಕೇವಲ ಭಾವಚಿತ್ರದ ಮೂಲಕ ಬಿಜೆಪಿ ಪಕ್ಷ ರಾಜಕೀಯ ಲಾಭ ಪಡೆಯಲು ಹಾಗೂ ತನಿಖೆಯ ವಿಧಾನವನ್ನು ಬದಲಾಯಿಸಲು  ಮುಂದಾಗಿದೆ ಬಿಜೆಪಿ ಭ್ರಷ್ಟರನ್ನು ರಕ್ಷಿಸುವ ಕಾರ್ಯ ದಲ್ಲಿ ಮುಳುಗಿದೆ. 

ಪ್ರತಿನಿತ್ಯ ಒಂದಲ್ಲ 1ಹಗರಣ ಭ್ರಷ್ಟಾಚಾರ ಬಹಿರಂಗವಾಗುತ್ತಿದೆ ಎಲ್ಲ ಇಲಾಖೆಯಲ್ಲೂ ನೇಮಕಾತಿ ಭ್ರಷ್ಟಾಚಾರವಾಗಿದೆ ಆದ್ದರಿಂದ ಈ ಹಗರಣದ ನ್ಯಾಯಯುತ ತನಿಖೆಗೆ ನ್ಯಾಯಮೂರ್ತಿಗಳಿಂದ ತನಿಖಾ ತಂಡವನ್ನು ರಚಿಸಿ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪಕ್ಷ ಈಗಾಗಲೇ ಆಗ್ರಹಪಡಿಸಿ. ಈ ಹಿನ್ನಲೆಯಲ್ಲಿ ಕೂಡಲೇ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಲು ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಹಾಗೂ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಸರ್ಕಾರ ಕೂಡಲೇ ಅವರ ರಕ್ಷಣೆಗೆ ಧಾವಿಸಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರವನ್ನು  ಆಗ್ರಹಪಡಿಸಲಾಯಿತು. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಇಂದ  ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ  ಎಸ್.ಮನೋಹರ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.

Tags

Post a Comment

0Comments

Post a Comment (0)