ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ "ಜ್ಞಾನ ವಿಕಾಸ-2022" ಕಾರ್ಯಕ್ರಮ ....

varthajala
0

ಬೆಂಗಳೂರು :ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಬೆಂಗಳೂರಿನ ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಲ್ಲಿನ ಭೋಧಕ ಹಾಗೂ ಭೋದಕೇತರ ಸಿಬ್ಬಂದಿಗಳಿಗಾಗಿ ಜ್ಞಾನವಿಕಾಸ- 2022 ಎಂಬ ವೃತ್ತಿಪರ ಅಭಿವೃದ್ಧಿ ಎಂಬ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿತ್ತು.ಈ

ಜ್ಞಾನ ವಿಕಾಸ ಕಾರ್ಯಕ್ರಮವು   ಮೇ 4 ರಿಂದ ಆರಂಭವಾಗಿ 10 ದಿನಗಳ ಕಾಲ ನಡೆಯಿತ್ತು.ಇವತ್ತು ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತ್ತು.

ಈ ಸಮಾರಂಭದ ಮುಖ್ಯ ಅತಿಥಿಯಾಗಿ ಬಿಇಎಲ್ ಎಚ್ ಆರ್ ವಿಭಾಗದ ಎಜಿಎಂ  ಸುರೇಶ್ ಮೈಕಲ್ ಆಗಮಿಸಿದ್ದರು.ಈ ವೇಳೆ ಜ್ಞಾನ ವಿಕಾಸ ಎಂಬ ಪುಸ್ತಕವನ್ನು ಸಹ ಲೋಕಾರ್ಪಣೆಗೊಳಿಸಿದ್ರು‌.ಈ ವೇಳೆ ಮಾತನಾಡಿದ ಸುರೇಶ್ ಮೈಕೆಲ್,ಈ ತರಬೇತಿಯು ಶಿಕ್ಷಕರು ಜ್ಞಾನವನ್ನು ವೃದ್ದಿಸಿಕೊಳ್ಳಲು ಒಳ್ಳೆಯ ಅವಕಾಶ ನೀಡಿದೆ.ಶಿಕ್ಷಕರು ಸಮಾಜದ ನಿರ್ಮಾತೃಗಳು.ಶಾಲೆಯಲ್ಲಿ ಶೈಕ್ಷಣಿಕ ಕಲಿಕೆಯ ಜೊತೆ ದೈಹಿಕ ಶಿಕ್ಷಣ ಇರಬೇಕೆಂದ್ರು.






ಈ ಸಮಾರಂಭದಲ್ಲಿ ಬಿಇಇಐ ಕಾರ್ಯದರ್ಶಿ‌ ಎಸ್.ವಿ. ನರಸಿಂಹ ‌ಕುಮಾರ್,ಕೋ ಆರ್ಡಿನೇಟರ್ ಎಚ್.ಎಲ್. ಗೋಪಾಲಕೃಷ್ಣ,ಆಡಳಿತಾಧಿಕಾರಿ ಎಮ್. ರಘುಪತಿ ಸೇರಿದಂತೆ ಬಿಇಇಐನ ಏಳು ಶಿಕ್ಷಣ ಸಂಸ್ಥೆಯ ಪ್ರಾಶುಂಪಾಲರು,70 ರಿಂದ 80 ಜನ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿದ್ದರು.  

ಈ 10 ದಿನಗಳ ಕಾಲ ನಡೆದ ಜ್ಞಾನ ವಿಕಾಸ ತರಬೇತಿಯಲ್ಲಿ ಪ್ರಮುಖವಾಗಿ ಗಣಿತ,ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳ ತರಗತಿಗಳನ್ನು ಯಾವ ರೀತಿ ಆಸಕ್ತಿದಾಯಕವಾಗಿ ಹೇಗೆ ನಡೆಸಬೇಕು..?,ತರಗತಿಗಳಲ್ಲಿ ಶಿಕ್ಷಕರು ಹಾಗೂ ಮಕ್ಕಳ ಚಟುವಟಿಕೆಗಳು ಹೇಗಿರಬೇಕು...? ಮಕ್ಕಳನ್ನು ಶಿಸ್ತು ಬದ್ದವಾಗಿ ಬೆಳೆಸೋದು ಹೇಗೆ...? ಶಾಲೆಯತ್ತ ಆಕರ್ಷಿಸುವ ಕಲೆ ಹೀಗೆ ಅನೇಕ ತರಬೇತಿಗಳನ್ನು ನೀಡಲಾಯಿತು.ಒಟ್ನಲ್ಲಿ ಈ ಕಾರ್ಯಕ್ರಮವು ಶಿಕ್ಷಕರಿಗೆ ಸ್ಪೂರ್ತಿದಾಯಕವಾಗಿತ್ತು.

Tags

Post a Comment

0Comments

Post a Comment (0)