ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಾಗೂ ಬಡ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉಪವಾಸ ಸತ್ಯಾಗ್ರಹ

varthajala
0

ಶಿಕ್ಷಣ ಎಂಬುದು ಭವಿಷ್ಯವನ್ನು ರೂಪಿಸುವ ಒಂದು ಅತ್ಯಮೂಲ್ಯವಾದ ಮಾರ್ಗ, ಪ್ರತಿಯೊಂದು ಮಕ್ಕಳು ಶಿಕ್ಷಣ ಪಡೆಯುವುದರ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು ಹಾಗೂ ಅವರ ಬದುಕನ್ನು ಕಟ್ಟಿಕೊಳ್ಳಬಹುದು. ಆದರೆ ಇಂದಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎಲ್ಲವೂ ಅದಕ್ಕೆ ತದ್ವಿರುದ್ಧವಾಗಿದೆ, 

ಏಕೆಂದರೆ ಖಾಸಗಿ ಶಾಲೆಗಳ ಅಟ್ಟಹಾಸದಿಂದ ಎಷ್ಟೋ ಬಡ ಮಕ್ಕಳು ಶಿಕ್ಷಣ ವಂಚಿತರಾಗಿದ್ದು ಅವರ ಭವಿಷ್ಯವು ಕತ್ತಲಲ್ಲಿ ಕಮರಿ ಹೋಗುತ್ತಿದೆ. ಇದಕ್ಕೆ ಒಂದು ನಿದರ್ಶನ ಎಂಬಂತೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸುಂಕೇನಹಳ್ಳಿ ವಾರ್ಡಿನ ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಮೂರು ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದು ಉಳಿದಿರುವ ಇನ್ನೊಂದು ಶಾಲೆಯು ಮುಚ್ಚುವ ಹಂತದಲ್ಲಿದೆ. ಇದಕ್ಕೆಲ್ಲಾ ಕಾರಣ ಇಂದಿನ ಸ್ವಾರ್ಥ ರಾಜಕಾರಣಿಗಳು ಹಾಗೂ ಅವರೇ ಉತ್ತೇಜನ ನೀಡುತ್ತಿರುವಂತಹ ಖಾಸಗಿ ವಿದ್ಯಾಸಂಸ್ಥೆಗಳು.

ಶಿಕ್ಷಣ ಎನ್ನುವುದು ಎಲ್ಲರ ಮೂಲಭೂತ ಹಕ್ಕು, ಅದನ್ನು‌ ಸರ್ವರಿಗೂ ದೊರಕುವಂತೆ ಮಾಡುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ, ಸರ್ಕಾರಿ ಶಾಲೆಗಳ ಉಳಿಸುವುದರ ಮೂಲಕ ಅದನ್ನು ನಾವು ಸಾಧ್ಯಗೊಳಿಸಬಹುದು.

ನಮ್ಮ ಬೇಡಿಕೆಗಳು:

1. ಸರ್ಕಾರಿ ಶಾಲೆಗಳ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು

2. ಈಗಾಗಲೇ ಮುಚ್ಚಿರುವ ಶಾಲೆಗಳನ್ನು ತೆರೆಯ ಬೇಕು 

3. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆಯ ಶಿಕ್ಷಕರನ್ನು ನೇಮಿಸಬೇಕು

4. ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಖಾಯಂಗೊಳಿಸಬೇಕು

5. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವಂತಹ ಅಭಿಯಾನ ನಡೆಸ ಬೇಕು

ಸ್ಥಳ: ಮುಚ್ಚಿ ಹೋಗಿರುವ ಸರ್ಕಾರಿ ಬಾಲಕರ ಫ್ರೌಡಶಾಲೆಯ ಮುಂಭಾಗ
ಕೆಂಪೇಗೌಡ ನಗರ ಮುಖ್ಯರಸ್ತೆ
ಗವಿಪುರಂ ಗುಟ್ಟಳ್ಳಿ
ಬೆಂಗಳೂರು - 560019.

ದಿನಾಂಕ: 20/05/2022 ರ ಬೆಳಿಗ್ಗೆ 11 ರಿಂದ 21/05/2022 ರ ಬೆಳಿಗ್ಗೆ 11 ರ ವರೆಗೆ

Post a Comment

0Comments

Post a Comment (0)