ಶ್ರೀಬ್ರಹ್ಮಣ್ಯತೀರ್ಥ ಶ್ರೀಪಾದಂಗಳವರು

varthajala
0

"ಕಂಸಧ್ವಂಸಿ ಪದಾಂಭೋಜ ಸಂಸಕ್ತೋ

  ಹಂಸಪುಂಗವ:/

  ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ

  ಮಳೆ ಮಾನಸೇ//

  *****************************

ಶ್ರೀ ಬ್ರಹ್ಮಣ್ಯ ತೀರ್ಥ ಗುರುಗಳು ವೈರಾಗ್ಯದಲ್ಲಿ ಸನಕಾದಿಗಳಂತೆ, ವಿವೇಕದಲ್ಲಿ ಬೃಹಸ್ಪತಿ ಗಳಂತೆ,ಭಕ್ತಿಯ ಲ್ಲಿ ಶುಕಮುನಿಯಂತೆ,ಮಾತೃ ವಾತ್ಸಲ್ಯ ದಲ್ಲಿವ್ಯಾ ಸರಾಯರನ್ನು ಪೊರೆದವರೆಂದು ಭಕ್ತ ಕೋಟಿಯಿಂದ ಕೊಂಡಾಡಿಸಿ ಕೊಂಡವರು.

ಶ್ರೀಬ್ರಹ್ಮಣ್ಯತೀರ್ಥ ಗುರುಗಳ ಪೂರ್ವಾಶ್ರಮದ ಹೆಸರು ನರಸಿಂಹಾಚಾರ್ಯರು ಎಂದು.ಇವರು ಹುಟ್ಟಿದ್ದು ಅಬ್ಬೂರು ಎನ್ನುವ ಗ್ರಾಮದಲ್ಲಿ. ಶ್ರೀನರಸಿಂಹದೇವರ ವರ ಪ್ರಸಾದದಿಂದ ಹುಟ್ಟಿದ ಇವರಿಗೆ ನರಸಿಂಹ ದೇವರ ಹೆಸರನ್ನೇ ಇಟ್ಟಿದ್ದರು.ಬಾಲಕ ನರಸಿಂಹನಿಗೆ ಎಂಟನೇ ವರ್ಷದಲ್ಲಿ

ಉಪನಯನವಾಗಿ ಹೆಚ್ಚಿನ ವೇದಾಧ್ಯಯನಕ್ಕಾಗಿ

ಶ್ರೀಪುರುಷೋತ್ತಮತೀರ್ಥ ಗುರುಗಳಲ್ಲಿ ಕಳಿಸುತ್ತಾರೆ.

ಶ್ರೀಪುರುಷೋತ್ತಮ ತೀರ್ಥರಲ್ಲಿ ತರ್ಕ, ಮೀಮಾಂಸಾ,ಶ್ರೀ ಮನ್ಯಾಯ ಸುಧಾ ಮುಂತಾದ ಗ್ರಂಥಗಳಲ್ಲಿ ಪಾರಂಗತರಾಗುತ್ತಾರೆ. ಶ್ರೀ ಪುರುಷೋತ್ತಮತೀರ್ಥರಿಗೆತ ಮ್ಮ ಉತ್ತರಾಧಿಕಾರಿಯಾಗಲು ನರಸಿಂಹಾಚಾರ್ಯನೇ ಸೂಕ್ತ ವ್ಯಕ್ತಿ ಎಂದು ನಿರ್ಧರಿಸುತ್ತಾರೆ.ಅಲ್ಲದೆ ಇವರು ನಿರ್ಧಾರ ಮಾಡಿದಂತೆ ಅಂದಿನ ರಾತ್ರಿಯ ಸ್ವಪ್ನದಲ್ಲಿ ಅವರ ಆರಾಧ್ಯದೇವರಿಂದಲೂ ನರಸಿಂಹಾಚಾರ್ಯರಿಗೆ ಸಂಸ್ಥಾನ ವಹಿಸಿಕೊಡಲು ಸೂಚನೆಯಾಗುತ್ತದೆ.

ಅದರಂತೆ ಶುಭಮುಹೂರ್ತದಲ್ಲಿ ನರಸಿಂಹಾಚಾರ್ಯರಿಗೆ ಸನ್ಯಾಸಾಶ್ರಮ ದೀಕ್ಷೆ ಬೋಧಿಸಿ "ಶ್ರೀಬ್ರಹ್ಮಣ್ಯತೀರ್ಥ"ರು ಎಂದು ನಾಮಕರಣ ಮಾಡುತ್ತಾರೆ.

ಬ್ರಹ್ಮಣ್ಯತೀರ್ಥರು ಪ್ರತಿದಿನ ಕಣ್ವನದಿಯಲ್ಲಿ ಸ್ನಾನಮಾ ಡಿ ಪ್ರಣವಮಂತ್ರಜಪ,ಶಿಷ್ಯರಿಗೆ ಪಾಠ ಪ್ರವಚನ ನಡೆಸುತ್ತಿದ್ದರು.

ಶ್ರೀಬ್ರಹ್ಮಣ್ಯತೀರ್ಥರು ಶ್ರೀಹರಿ ಪೂಜೆಗೂ ಮುನ್ನಕ ಲಶ ಪೂಜೆ ಮಾಡಲು ಅಲ್ಲಿ ಪ್ರತ್ಯಕ್ಷ ದೇವತಾ ಸನ್ನಿಧಾನ ಬರುತ್ತಿತ್ತು.ಅವರು ಪೂಜಿಸಿದ ಕಲಶವನ್ನುಶಿ ಷ್ಯರಿಗೆ ಎತ್ತಲೂ ಆಗುತ್ತಿರಲಿಲ್ಲ.

ಹೀಗೆಮುಂದೆ ದಿಗ್ವಿಜಯ ಸಂಚಾರ,ವಾದಿ ವಿಜಯ,ಸಜ್ಜನರ ಉದ್ಧಾರ,ಮಧ್ವತತ್ವಸಿದ್ಧಾಂತ ಪ್ರಚಾರ ಇವೇ ಮುಖ್ಯ ಕಾರ್ಯಗಳಾಗಿತ್ತು. ಶ್ರೀಗಳವರ ದಿನಚರಿ. ಹೀಗೆ ಒಮ್ಮೆ ಸಂಚಾರ ಮಾಡುತ್ತಾ ವಿಜಯನಗರಕ್ಕೆ ಬರುತ್ತಾರೆ.ಅಲ್ಲಿಯ ಜನರೆಲ್ಲರೂ ಬಂದು ಈ ಸ್ಥಳದಲ್ಲಿ ಹಲವಾರು ವರ್ಷಗಳಿಂದ ಅನಾವೃಷ್ಟಿಯಾಗಿದೆ.

ನಾವು ಆಚರಿಸಿದ ಜಪಹೋಮಾದಿಗಳೆಲ್ಲಾ ವ್ಯರ್ಥವಾಗಿದೆ.ತಾವು ಈ ಕ್ಷಾಮವನ್ನು ಪರಿಹರಿಸಿ ಆಶೀರ್ವದಿಸಬೇಕು ಎಂದುವಿನಂತಿಸುತ್ತಾರೆ. ಶ್ರೀಬ್ರಹ್ಮಣ್ಯತೀರ್ಥರು ಶ್ರೀ ಹರಿಯನ್ನುಪ್ರಾರ್ಥಿಸಿ ಪರ್ಜನ್ಯ ಜಪವನ್ನು ಮಾಡಿಸುತ್ತಾರೆ.ಎಲ್ಲರೂ ಅಚ್ಚರಿಪಡುವಂತೆ ಹಲವಾರು ವರ್ಷಗಳಿಂದ ನೀರಿನ ಕ್ಷಾಮದಿಂದ ಕಂಗೆಟ್ಟಿದ್ದ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದು ಬರ ಪ್ರದೇಶವು ಸುಭಿಕ್ಷವಾಗುತ್ತದೆ.

ಮುಂದೆ ಅಬ್ಬೂರಿನಲ್ಲಿ ಶ್ರೀಗಳವರ ಆಶೀರ್ವಾದದಿಂದ ಶ್ರೀವ್ಯಾಸರಾಯರು ಜನನ ತಾಳುತ್ತಾರೆ.

ಶ್ರೀ ಬ್ರಹ್ಮಣ್ಯ ತೀರ್ಥರು ಶ್ರೀವ್ಯಾಸರಾಯರಿಗೆ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿಶ್ರೀ ಗಳವರು ವೈಶಾಖ ಬಹುಳ ಏಕಾದಶಿಯಂದುಶ್ರೀ ಹರಿ ಪಾದವನ್ನು ಸೇರುತ್ತಾರೆ.ಇವರ ಮೂಲಬೃಂದಾವನ ಇರುವುದು ಅಬ್ಬೂರಿನಲ್ಲಿ.

ಶ್ರೀಗಳವರು ಸೂರ್ಯಾಂಶ ಸಂಭೂತರು.ಯತಿ ರೂಪ ದಿಂದ ಭೂಮಿಯಲ್ಲಿದ್ದು  ನರಸಿಂಹ ದೇವರ ಸೇವಾಸಕ್ತರಾಗಿ ಕಾಮಿತಾರ್ಥ ಫಲಗಳನ್ನು ಕರುಣಿಸುವಂತಹ ಚಿಂತಾಮಣಿ ಯಾಗಿರುತ್ತಾರೆ. ಶ್ರೀವ್ಯಾಸರಾಯರಂತಹ ಮಹಾ ಜ್ಞಾನಿಗಳನ್ನು ಲೋಕಕ್ಕೆ ದೊರಕಿಸಿಕೊಟ್ಟ ಕೀರ್ತಿ ಶ್ರೀಬ್ರಹ್ಮಣ್ಯತೀರ್ಥರಿಗೆ ಸಲ್ಲುತ್ತದೆ.

ವೈಶಾಖ ಬಹುಳ ಏಕಾದಶಿ ಇವರ ಆರಾಧನೆಯು ದಿನವಾಗಿರುತ್ತದೆ.ನಾವೂ ಶ್ರೀಗಳವರ ಆರಾಧನೆಯ ದಿನದಂದು ಭಕ್ತಿಯಿಂದ ಸ್ಮರಣೆ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

***************************************

ಲೇಖಕರು :

ಜಯಭೀಮ ಜೋಯಿಸ್, ಶಿವಮೊಗ್ಗ

Post a Comment

0Comments

Post a Comment (0)