ವಾರ ಭವಿಷ್ಯ 25.06.2022 ರಿಂದ 01.07.2022 ರ ವರೆಗೆ* - SHIKSHANA RATNA

Breaking

Post Top Ad

Responsive Ads Here

Saturday, 25 June 2022

ವಾರ ಭವಿಷ್ಯ 25.06.2022 ರಿಂದ 01.07.2022 ರ ವರೆಗೆ*

 *25.06.2022 ರಿಂದ 01.07.2022 ರ ವರೆಗೆ*

*ವೇ||ಬ್ರ||ಶ್ರೀ ವಿದ್ವಾನ್ ಜಗದೀಶ ಭಟ್ಟರು, ಶೃಂಗೇರಿ.*

ಸಂಪರ್ಕಿಸಿ: 6363522681,   6364222158


*ಮೇಷ*

ಜ್ವರ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಅಗ್ನಿಯಿಂದ ಅಪಾಯವಾಗುವ ಸಂಭವವಿದೆ.


ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ತೊಂದರೆಯಾಗುತ್ತದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಎಂತಹಾ ಪರಿಸ್ಥಿತಿಯನ್ನು ಕೂಡ ಧೈರ್ಯವಾಗಿ ನಿರ್ವಹಿಸುವ ನಿಮ್ಮ ಗುಣಕ್ಕೆ ಪ್ರಶಂಸೆ ದೊರಕುತ್ತದೆ. ಒಳಿತಿಗಾಗಿ ಸುಬ್ರಹ್ಮಣ್ಯನನ್ನು ಆರಾಧಿಸಿ. 

*ವೃಷಭ*

ನಿಮ್ಮ ಸಂಗಾತಿಯು ನಿಮ್ಮ ಮಾತನ್ನು ಅಪಾರ್ಥವಾಗಿ ತಿಳಿದುಕೊಳ್ಳುವುದರಿಂದ ಕಲಹವಾಗುತ್ತದೆ. ಕಾಲಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ನೀವು ಅತಿಯಾಗಿ ನಂಬಿದವರೇ ಶತ್ರುಗಳಂತೆ ವರ್ತಿಸುತ್ತಾರೆ. ಆದರೆ ಬಹಳ ದಿನಗಳ ಮನೆ ಮಾಡಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಲು ಇದು ಒಳ್ಳೆಯ ಕಾಲ. ನಿಮ್ಮ ಆಕರ್ಷಕವಾದ ಮಾತಿನಿಂದ ಕಷ್ಟದ ಪರಿಸ್ಥಿತಿಗಳನ್ನು ದಾಟುವಲ್ಲಿ ಯಶಸ್ವಿಯಾಗುವಿರಿ. ಒಳಿತಿಗಾಗಿ ಸುಬ್ರಹ್ಮಣ್ಯ ಅಷ್ಟೋತ್ತರವನ್ನು ಪಠಿಸಿ. 

*ಮಿಥುನ*

ಅನೇಕ ದಿನಗಳಿಂದ ಕಾಡುತ್ತಿರುವ ರೋಗಗಳು ಶಮನವಾಗುತ್ತವೆ. ಗಣ್ಯವ್ಯಕ್ತಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಮಕ್ಕಳ ಉದ್ಯೋಗ ಕ್ಷೇತ್ರದಲ್ಲಿನ ಪ್ರಗತಿಯಿಂದ ಸಂತೋಷ ಹೊಂದುವಿರಿ. ಇತ್ತೀಚಿಗೆ ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಸೋಮಾರಿತನ ಕಾಡುತ್ತಿದೆ, ಅದನ್ನು ನಿವಾರಿಸಿಕೊಳ್ಳಿ. ಶತ್ರುಗಳ ವಿಚಾರದಲ್ಲಿ ಜಾಗರೂಕರಾಗಿರಿ. ಒಳಿತಿಗಾಗಿ ಆಂಜನೇಯನನ್ನು ಆರಾಧಿಸಿ. 

*ಕರ್ಕಾಟಕ:*

ಯಾವ ಉದ್ಯೋಗವು ನನಗೆ ಲಾಭದಾಯಕವಾಗುತ್ತದೆ ಎಂದು ಬಹಳ ದಿನಗಳಿಂದ ಚಿಂತಿತರಾಗಿರುವ ನೀವು ಈ ವಾರವನ್ನು ಕೂಡ ಅದೇ ಚಿಂತೆಯಲ್ಲೇ ಕಳೆಯುವಿರಿ. ಅಮೂಲ್ಯವಾದ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ, ಕಳ್ಳತನವಾಗುವ ಸಂಭವವಿದೆ. ನೀವು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆದರೆ ಎಷ್ಟೇ ಕಷ್ಟ ಬಂದರೂ ನಿಮ್ಮ ಒಳ್ಳೆಯತನವನ್ನು ಅರಿತಿರುವ ಸ್ನೇಹಿತರು ನಿಮ್ಮನ್ನು ಕೈಬಿಡುವುದಿಲ್ಲ. ಒಳಿತಿಗಾಗಿ ವೆಂಕಟೇಶ್ವರನನ್ನು ಆರಾಧಿಸಿ.

*ಸಿಂಹ:*

ಏನು ಮಾಡಿದರೂ ನಡೆಯುತ್ತದೆ ಎಂಬ ನಿಮ್ಮ ಧೋರಣೆ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅವನತಿಗೆ ಕಾರಣವಾಗಲಿದೆ. ಜ್ವರಾದಿ ರೋಗಗಳಿಂದ ದೇಹವು ಬಾಧಿಸಲ್ಪಡುತ್ತದೆ. ಎಂದಿನಂತೆ ಈ ವಾರವೂ ಕೂಡ ಜನಗಳು ಕೇವಲ ನಿಮ್ಮ ಕಠಿಣವಾದ ಮಾತನ್ನು ಕೇಳಿ ನಿಮ್ಮನ್ನು ಕ್ರೂರಿಗಳೆಂದು ಪರಿಗಣಿಸುತ್ತಾರೆ, ಅದರ ಹಿಂದಿನ ಒಳ್ಳೆಯ ಉದ್ದೇಶವನ್ನು ತಿಳಿಯುವುದಿಲ್ಲ. ನಿಮ್ಮ ಸಂಗಾತಿಯು ನಿಮ್ಮ ಮೇಲೆ ಇಟ್ಟಿರುವ ಅಮೂಲ್ಯವಾದ ಪ್ರೀತಿಯು ಈ ವಾರ ಬೆಳಕಿಗೆ ಬರಲಿದೆ. ಒಳಿತಿಗಾಗಿ ಸುಬ್ರಹ್ಮಣ್ಯ ಸ್ವಾಮಿಗೆ ಹಾಲಿನ ಅಭಿಷೇಕ ಮಾಡಿಸಿ. 

*ಕನ್ಯಾ:*

ಎಂದಿನಂತೆ ಈ ವಾರವೂ ಕೂಡ ನಿಮ್ಮ ಅತಿಯಾದ ಮೃದುತನವನ್ನು ಶತ್ರುಗಳು ಸರಿಯಾಗಿ ಬಳಸಿಕೊಳ್ಳುತ್ತಾರೆ. ಸ್ಥಳ ಬದಲಾವಣೆಯಾಗುವ ಸಂಭವವಿದೆ. ಉದ್ಯೋಗ ಕ್ಷೇತ್ರದಲ್ಲಿ ಜಟಿಲವಾದ ಸಮಸ್ಯೆಗಳು ಉಂಟಾಗುತ್ತವೆ. ಮನೆ ಮಾಡಬೇಕೆಂಬ ಬಯಕೆಯು ಈಡೇರುವ ಸಂಭವವಿದೆ. ಶತ್ರುಗಳಿಂದ ಏನೇ ತೊಂದರೆ ಉಂಟಾದರೂ ಅಂತಿಮವಾಗಿ ನೀವೇ ಗೆಲ್ಲುವಿರಿ. ಒಳಿತಿಗಾಗಿ ಸುಬ್ರಹ್ಮಣ್ಯ ಸ್ವಾಮಿಗೆ ಪುಷ್ಪಮಾಲೆಯನ್ನು ಅರ್ಪಿಸಿ. 

*ತುಲಾ:*

 ನಿಮ್ಮ ನೇರವಾದ ನಡೆ - ನುಡಿಗಳು ಬಂಧುಗಳಿಂದ ಮತ್ತು ಸ್ನೇಹಿತರಿಂದ ನಿಮ್ಮನ್ನು ಕೆಲವು ಕಾಲ ಬೇರೆಮಾಡುವ ಸಂಭವವಿದೆ. ಹೆಂಡತಿಯೊಂದಿಗಿನ ಕಲಹದಿಂದ ಸಂಸಾರವು ನರಕವಾಗಿ ಕಾಣುತ್ತದೆ. ಹಣಕಾಸಿನ ಸಮಸ್ಯೆಗಳು ಈ ವಾರವೂ ಕೂಡ ಮುಂದುವರೆಯುತ್ತವೆ. ಬಹಳ ದಿನಗಳಿಂದ ಪ್ರಯತ್ನಪಡುತ್ತಿರುವ ಒಂದು ಕಾರ್ಯವು ನೆರವೇರುತ್ತದೆ. ವಸ್ತ್ರ ವ್ಯಾಪಾರಿಗಳಿಗೆ ಈ ವಾರ ಉತ್ತಮವಾಗಿದೆ. ಒಳಿತಿಗಾಗಿ ಈಶ್ವರನನ್ನು ಆರಾಧಿಸಿ. 

*ವೃಶ್ಚಿಕ:*

ಅನೇಕ ಮೂಲಗಳಿಂದ ಧನಲಾಭವಾಗುತ್ತದೆ. ಅನೇಕ ದಿನಗಳಿಂದ ಬರೀ ಕಷ್ಟವನ್ನೇ ಅನುಭವಿಸಿರುವ ನಿಮಗೆ ಈ ವಾರ ಅದೃಷ್ಟವನ್ನು ತಂದುಕೊಡಲಿದೆ. ಮನೆಗೆ ನೂತನ ವಸ್ತುಗಳ ಆಗಮನವಾಗುವ ಸಂಭವವಿದೆ. ಸ್ತ್ರೀಯರ ವಿಷಯದಲ್ಲಿ ಜಾಗರೂಕರಾಗಿರಿ, ಅಪವಾದ ಬರುವ ಸಂಭವವಿದೆ. ಜಾಗರೂಕರಾಗಿ ವಾಹನ ಚಲಾಯಿಸಿ. ಒಳಿತಿಗಾಗಿ ಲಕ್ಷ್ಮಿಯನ್ನು ಆರಾಧಿಸಿ.

*ಧನಸ್ಸು:*

ಹೊಟ್ಟೆಗೆ ಸಂಬಂಧಿಸಿದ ರೋಗಗಳು ನಿಮ್ಮನ್ನು ಅತಿಯಾಗಿ ಬಾಧಿಸುತ್ತವೆ. ನಿಮ್ಮ ಮಾತನ್ನು ಅನ್ಯರು ಅಪಾರ್ಥಮಾಡಿಕೊಳ್ಳುವ ಸಂಭವವಿದೆ. ಉದ್ಯೋಗಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸುವಿರಿ. ವಿದ್ಯಾರ್ಥಿಗಳಿಗೆ ಅನೇಕ ವಿಘ್ನಗಳು ಉಂಟಾಗುತ್ತವೆ. ಒಳಿತಿಗಾಗಿ ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ. 

*ಮಕರ:*

ಚಿಂತೆಗಳಿಗೆ ನೀವೇ ಆಶ್ರಯತಾಣರಾಗುವಿರಿ. ಆದರೆ ಎಷ್ಟೇ ಕಷ್ಟಬಂದರೂ ಹಿಡಿದ ದಾರಿಯನ್ನು ಬಿಡಬಾರದೆಂಬ ಛಲ ನಿಮ್ಮನ್ನು ಕಾಯುತ್ತದೆ. ವಾಹನವನ್ನು ಚಲಾಯಿಸುವಾಗ ಅತ್ಯಂತ ಜಾಗರೂಕರಾಗಿರಿ. ಸ್ಥಳ ಬದಲಾವಣೆಯಾಗುವ ಸಂಭವವಿದೆ. ಹೊಟ್ಟೆಗೆ ಸಂಬಂಧಿಸಿದ ರೋಗಗಳು ಕಾಡುತ್ತವೆ. ಆದರೆ ಗುರು - ಹಿರಿಯರು ನಿಮ್ಮ ಮೇಲೆ ಇಟ್ಟಿರುವ ಪ್ರೀತಿಯು ನಿಮ್ಮನ್ನು ಕಾಯುತ್ತದೆ. ಒಳಿತಿಗಾಗಿ ಈಶ್ವರನನ್ನು ಆರಾಧಿಸಿ. 

*ಕುಂಭ:*

ವಿವಾಹಾಪೆಕ್ಷಿಗಳಿಗೆ  ಈ ಸಮಯ ಉತ್ತಮವಾಗಿದೆ. ಕೃಷಿಕರಿಗೆ ಮತ್ತು ಭೂವ್ಯಾಪಾರಿಗಳಿಗೆ ಈ ವಾರ ಲಾಭದಾಯಕವಾಗಿರುತ್ತದೆ. ಆಧ್ಯಾತ್ಮಿಕ ಗ್ರಂಥಗಳ ಪಠಣೆಯಲ್ಲಿ ಆಸಕ್ತರಾಗುವಿರಿ. ಸ್ಥಳ ಬದಲಾವಣೆಯಾಗುವ ಸಂಭವವಿದೆ. ಪ್ರೀತಿಪಾತ್ರರಿಂದ ದೂರವಾಗುವ ಸಂಭವವಿದೆ. ಒಳಿತಿಗಾಗಿ ಆಂಜನೇಯನನ್ನು ಆರಾಧಿಸಿ.

*ಮೀನ:*

ಉದ್ಯೋಗ ಕ್ಷೇತ್ರದಲ್ಲಿನ ಕೆಲವೊಂದು ಚಿಂತೆಗಳಿಂದ ಬಾಧಿತರಾಗುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ದುರ್ಜನರರೊಂದಿಗಿನ ಸಂಪರ್ಕದಿಂದ ನಿಮಗೆ ಕೆಟ್ಟ ಹೆಸರು ಬರುವ ಸಂಭವವಿದೆ. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಸಮಾಜವು ನಿಮ್ಮನ್ನು ಉತ್ತಮ ಮಾರ್ಗದರ್ಶಕರೆಂದು ಅಂಗೀಕರಿಸುತ್ತದೆ. ಒಳಿತಿಗಾಗಿ ಆಂಜನೇಯನನ್ನು ಆರಾಧಿಸಿ.

No comments:

Post a Comment

Post Bottom Ad

Responsive Ads Here

Pages