ನವೆಂಬರ್ ಒಳಗೆ ರಾಜ್ಯದಲ್ಲಿನ ಗ್ರಾಮಗಳ ಚರಿತ್ರೆ ಕೋಶ ಪ್ರಕಟ : ಉಮಾ ಮಹದೇವನ್

varthajala
0

ಬೆಂಗಳೂರು, ಜೂನ್ 23 (ಕರ್ನಾಟಕ ವಾರ್ತೆ) : ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮಗಳ ಚರಿತ್ರೆ ಕೋಶವನ್ನು ಇದೇ ನವೆಂಬರ್ ತಿಂಗಳೊಳಗಾಗಿ ಪ್ರಕಟಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವನ್ ಅವರು ತಿಳಿಸಿದರು.

ಇಂದು ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ “ಕರ್ನಾಟಕ ಗ್ರಾಮ ಚರಿತ್ರೆ ಕೋಶ ಯೋಜನೆ” ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾನಾಡಿದರು.

ಈ ಯೋಜನೆಯಡಿ ಎಲ್ಲಾ ಜಿಲ್ಲೆಗಳ ಎಲ್ಲಾ ಗ್ರಾಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕøತಿಕ, ಐತಿಹಾಸಿಕ ಹಾಗೂ ಇನ್ನಿತರ ವಿಷಯಗಳನ್ನು ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಈಗಾಗಲೇ 17 ಜಿಲ್ಲೆಗಳ ಚರಿತ್ರೆ ಕೋಶ ಪ್ರಕಟಣೆಗೊಂಡಿದ್ದು, ಇನ್ನೂ 13 ಜಿಲ್ಲೆಗಳದ್ದು ಬಾಕಿಯಿದೆ. ಎಲ್ಲಾ ಕೋಶಗಳನ್ನು ಡಿಜಿಟಲ್ ಮೂಲಕ ಸಹ ಲಭ್ಯವಿರುವಂತೆ ಕ್ರಮ ವಹಿಸಲಾಗುವುದು. ಈ ಮಾಹಿತಿ ಕೋಶ ಪ್ರಮುಖ ಸರ್ಕಾರ ಗ್ರಂಥಾಲಯಗಳಲ್ಲೂ ಲಭ್ಯವಿರುತ್ತದೆ. ಗ್ರಾಮಗಳ ಅಸ್ತಿತ್ವವನ್ನು ಭದ್ರವಾಗಿಸಿ ಸಾಂಸ್ಕøತಿಕವಾಗಿ ಇವುಗಳ ವಿಶೇಷತೆಗಳನ್ನು ಈ ಗ್ರಂಥಗಳಲ್ಲಿ ದಾಖಲಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪಂಚಾಯತ್‍ರಾಜ್ ಸಲಹೆಗಾರರಾದ ಎಂ. ಕೆ. ಕೆಂಪೇಗೌಡ, ಗ್ರಾಮ

ಪಂಚಾಯಿತಿಗಳನ್ನೊಳಗೊಂಡ ವಿಚಾರ, ಇತಿಹಾಸ, ಕರೆ ಅಭಿವೃದ್ಧಿ, ಆಹಾರ ಪದ್ದತಿ, ಜನಪದ ಕಲೆಗಳು, ಇತ್ಯಾದಿ ವಿಷಯಗಳನ್ನು ಈ ಗ್ರಾಮ ಚರಿತ್ರೆ ಕೋಶದಲ್ಲಿ ದಾಖಲಿಸಲಾಗುವುದು. ನಮ್ಮ ರಾಜ್ಯದ ಗ್ರಾಮೀಣ ಭಾಗದ 5400 ಗ್ರಂಥಾಲಯಗಳು ಅಭಿವೃದ್ಧಿಗೊಂಡಿವೆ. ಮುಂದಿನ 5 ವರ್ಷಗಳಲ್ಲಿ ಎಲ್ಲಾ ಗ್ರಾಮಸ್ಥರಿಗೂ ಆರೋಗ್ಯ ಕಾರ್ಡ್ ನೀಡಲು ಸಹ ಯೋಜನೆ ರೂಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಸಿ.ಟಿ.ಗುರುಪ್ರಸಾದ್ ಮಾತನಾಡಿ, ಜಾನಪದ ವಿಶ್ವವಿದ್ಯಾಲಯ ರಾಜ್ಯದಲ್ಲಿ ಸ್ಥಾಪನೆಗೊಂಡು 10 ವರ್ಷಗಳಾಗಿವೆ. ಇಲ್ಲಿ 150 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 800 ಜನ ಕುಳಿತುಕೊಳ್ಳುವ ಕಲಾಭವನ ನಿರ್ಮಾಣಗೊಳ್ಳುತ್ತಿದೆ. ವಿಶ್ವವಿದ್ಯಾಲಯ ಹಲವು ಪತ್ರಿಕೆಗಳನ್ನು ಪ್ರಕಟಿಸುತ್ತಿದೆ. ಗ್ರಾಮ ಚರಿತ್ರೆ ಕೋಶ ಯೋಜನೆಯಡಿ 59,00 ಹಳ್ಳಿಗಳ ಇತಿಹಾಸ ಇತರ ವಿವರಗಳು ದಾಖಲೆಗೊಳ್ಳುತ್ತದೆ. ಇದು ಒಳ್ಳೆಯ ಮಾಹಿತಿ ಗ್ರಂಥಾಲಯವಾಗಲಿದೆ. ವಿಶ್ವವಿದ್ಯಾಲಯದಲ್ಲಿ 186 ಎಕರೆಯಲ್ಲಿ ವಸ್ತು ಸಂಗ್ರಹಾಲಯ ಸಹ ತೆರೆಯುವ ಉದ್ದೇಶವಿದೆ ಎಂದರು.

ಕಾರ್ಯಾಗಾರದಲ್ಲಿ ಮಾತನಾಡಿದ, ರಾಜ್ಯ ವಿಕೇಂದ್ರೀಕರಣ ವಿಭಾಗದ ಉಪಾಧ್ಯಕ್ಷರಾದ ಪ್ರಮೋದ್ ಹೆಗಡೆ, ಹಳ್ಳಿಗಳ ಜೀವನವೇ ಸಾರ್ಥಕ ಜೀವನ. ಇವರು ಹೆಚ್ಚು ಸಂವೇದನಾಶೀಲರೂ, ಹೃದಯವಂತರೂ ಆಗಿರುತ್ತಾರೆ. ಕರ್ನಾಟಕ ಗ್ರಾಮ ಚರಿತ್ರೆ ಕೋಶ ಪ್ರಕಟಿಸುವುದರಿಂದ ಹಳ್ಳಿಗಳ ಶಕ್ತಿ ತುಂಬುವ ಕೆಲಸವಾಗುತ್ತದೆ. ನರೇಗಾದಲ್ಲಿ  ಇಡೀ ದೇಶಕ್ಕೆ ರಾಜ್ಯ ಪ್ರಥಮ ಸ್ಥಾನ ಬಂದಿರುವುದು ಪ್ರಶಂಸಾರ್ಹ. ರಾಜ್ಯದಲ್ಲಿ 6000 ಗ್ರಂಥಾಲಯಗಳು ಕಾರ್ಯನಿರ್ವಹಿಸಿ  ಡಿಜಟಲೀಕರಣಗೊಳ್ಳುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಪಂಚಾಯತ್‍ರಾಜ್ ಇಲಾಖೆಯ ಆಯುಕ್ತರಾದ ಶಿಲ್ಪಾ ಶರ್ಮಾ, ನಿರ್ದೇಶಕರಾದ ಕೆ.ಟಿ.ಆಂಜಿನಪ್ಪ, ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಸತೀಶ್‍ಕುಮಾರ್ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.


Tags

Post a Comment

0Comments

Post a Comment (0)