ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ದಿಂದ ವಾಸವಿ ಅಕಾಡೆಮಿ ಆರಂಭ.. ಅರ್ಹ ವಿದ್ಯರ್ಥಿಗಳಿಗೆ ಉಚಿತ ಯುಪಿಎಸ್‌ಸಿ ತರಬೇತಿ

varthajala
0

ಬೆಂಗಳೂರು : ಎಲ್ಲಾ ವರ್ಗದ ಮಧ್ಯಮ ಹಾಗೂ ಬಡ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು  ಐ.ಎ.ಎಸ್ ಹಾಗೂ ಸಮಾನಾಂತರ ಪರೀಕ್ಷೆಗಳನ್ನು ಬರೆಯಬಹುದು. ಅಂತಹ ಪ್ರತಿಭಾವಂತ ಮಕ್ಕಳಿಗಾಗಿ ನಮ್ಮ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಡಿಯಲ್ಲಿ ವಾಸವಿ ಅಕಾಡೆಮಿ ಎನ್ನುವ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರದ ಲಾಭವನ್ನು  ಎಲ್ಲಾ ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ರಾ. ಪ. ರವಿಶಂಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಸಂಸ್ಥೆಯು ಕಳೆದ ೧೧೪ ವರ್ಷಗಳಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು ವಿವಿಧ 20 ಕ್ಕೂ ಹೆಚ್ಚು ಯೋಜನೆಗಳ ಮೂಲಕ ಪ್ರತಿ ತಿಂಗಳು ಸರಿ ಸುಮಾರು ೧೬೦೦ ಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ ಸವಲತ್ತುಗಳನ್ನು ನೀಡುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ  ನಮ್ಮ ಸಂಘವು ವಾಸವಿ ಅಕಾಡೆಮಿ ಎನ್ನುವ ಹೆಸರಿನಲ್ಲಿ ನೂತನವಾದ ಸೇವಾ ಕೇಂದ್ರವನ್ನು ಸ್ಥಾಪನೆ ಮಾಡಿದೆ. ಈ ಅಕಾಡಮಿಯ ಮೂಲಕ ಲೋಕ ಸೇವಾ ಆಯೋಗದ  ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಐಆರ್‌ಎಸ್‌ ಸೇರಿದಂತೆ ಇತರ ಪರೀಕ್ಷೆಗಳು ಹಾಗೂ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ  ಆಡಳಿತಾತ್ಮಕ ಪರೀಕ್ಷೆಗೆ ಭಾಗವಹಿಸಲು ಇಚ್ಛಿಸುವ ವಿದದ್ಯಾರ್ಥಿಗಳಿಗೆ ಊಟ, ವಸತಿ ಸೌಲಭ್ಯಗಳ ಜೊತೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.

 ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ವಾಸವಿ ವಿದ್ಯಾಪೀಠದ ಶಾಲೆಯಲ್ಲಿ ನಡೆಸಲಾಗುತ್ತದೆ. ವಾಸವಿ ಅಕಾಡಮಿಯು ರಾಷ್ಟ್ರ ಮಟ್ಟದಲ್ಲಿ ೨-೩ ದಶಕಗಳಿಂದ ತರಬೇತಿ ನೀಡುತ್ತಿರುವ ಅನುಭವಿ ತರಬೆತಿದಾರರನ್ನು ಹೊಂದಿದೆ. ಜೊತೆಗೆ ಹಲವಾರು ಮಾಜಿ ಹಾಗೂ ಹಾಲಿ ಐ.ಎ.ಎಸ್‌ ಅಧಿಕಾರಿಗಗಳಿಂದ ವಿಶೇಷ ತರಬೇತಿಯನ್ನು ಆಯೋಜಿಸಲಾಗುತ್ತಿದೆ.. ಉಚಿತ ಲೈಬ್ರರಿಯ ವ್ಯವಸ್ಥೆ ಇದ್ದು ಈ ತರಬೇಯ ಅವಧಿ ಕೇವಲ ೬ ತಿಂಗಳುಗಳು ಮಾತ್ರವಾಗಿರುತ್ತದೆ.

ಯು.ಪಿ.ಎಸ್.ಸಿ  ತರಗತಿಗಳಿಗೆ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಹಾಕಲು ಅವಕಾಶಕಲ್ಪಿಸಲಾಗಿದೆ. ೨೦೨೩ರಲ್ಲಿ ನಡೆಯುವ ಯು.ಪಿ.ಎಸ್.ಸಿ ಪರೀಕ್ಷೆಗೆ ಮಾತ್ರ  ತರಬೇತಿ ನೀಡಲಾಗುವುದು. ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಸಂಸ್ಥೆಯ ನಿಯಮಾನುಸಾರ ಪ್ರವೇಶಕ್ಕೆ ಅವಕಾಶವಿದೆ. ಅಭ್ಯರ್ಥಿಗಳು ವಾಸವಿ ಅಕಾಡೆಮಿಯು ನಡೆಸುವ ಸಾಮಾನ್ಯ ಪ್ರರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ: ೮೦೭೩೪೯೯೨೧೭,  ಟೆಲಿಗ್ರಾಂ ಗ್ರೂಪ್: https://t.me/vasaviacademy2020 , https://forms.gle/rwnMsvV1NhAfL3c8   ಸಂಪರ್ಕಿಸಲು ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ  ಅದ್ಯಕ್ಷರಾದ ರಾ ಪ ರವಿಶಂಕರ ಕೋರಿದ್ದಾರೆ.


Tags

Post a Comment

0Comments

Post a Comment (0)