ಶಿಶು ಮತ್ತು ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ

varthajala
0


*ರೈನ್‌ಬೋ ಚಿಲ್ಡ್ರನ್ಸ್ ಹಾಸ್ಪಿಟಲ್‌ನಿಂದ ಸ್ಪೆಷಾಲಿಟಿ ಪೀಡಿಯಾಟ್ರಿಕ್ಸ್ (CUSP) ಅಪ್‌ಡೇಟ್‌ಗಳ ಕುರಿತಾದ ವಿಶೇಷ ಸಮ್ಮೇಳನವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ* 

ಶಿಶು ಮರಣ ಪ್ರಮಾಣವನ್ನು (IMR) ತಗ್ಗಿಸಲು ಕರ್ನಾಟಕ ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ರೇನ್‌ಬೋ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶೇಷ ಶಿಶುವೈದ್ಯಶಾಸ್ತ್ರದ (ಸಿಯುಎಸ್‌ಪಿ) ವಿಶೇಷ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

“ಕರ್ನಾಟಕದಲ್ಲಿ ಐಎಂಆರ್ ಅನ್ನು ಕಡಿಮೆ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ನಾವು ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.‌ ತಾಯಂದಿರ ಮರಣ ಪ್ರಮಾಣ (MMR) ತಗ್ಗಿಸಲು ಸಹ ಯೋಗ್ಯ ವಿಧಾನ ಅನುಸರಿಸುತ್ತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು, ನಾವು ವಿಶಿಷ್ಟ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ, ನಾವು ಕೆಲವು ನಿಯತಾಂಕಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದ್ದು, ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಜಾರಿಗೊಳಿಸಲು ಕೆಲವು ತಾಲ್ಲೂಕುಗಳನ್ನು ಗುರುತಿಸಿದ್ದೇವೆ ಎಂದರು. 

ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಪ್ರಮಾಣದ ಆಧಾರದ ಮೇಲೆ ವಿವಿಧ ಕ್ರಮಗಳನ್ನು ಕೈಗೊಳ್ಳುವ ಮೂಲಕ, ನಾವು ರಾಜ್ಯದಲ್ಲಿ IMR ಮತ್ತು MMR ದರಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಈ ಪ್ರಯತ್ನದಲ್ಲಿ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳ ಮುಕ್ತ  ಬೆಂಬಲವನ್ನು ನಿರೀಕ್ಷಿಸುತ್ತೇವೆ ಎಂದರು. 

*ಅಪೌಷ್ಟಿಕತೆ ಕಡಿಮೆಮಾಡಲು ವಿಶೇಷ ಕ್ರಮಗಳು* 

‘ರಾಜ್ಯ ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದು, ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಅಂಗನವಾಡಿ ಹಾಗೂ ಕಾರ್ಮಿಕ ಶಿಬಿರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಗಮನ ಹರಿಸಲಾಗಿದೆ ಎಂದರು. ರೈನ್‌ಬೋ ಆಸ್ಪತ್ರೆ ಆಯೋಜಿಸಿರುವ ಸಮ್ಮೇಳನದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಶ್ರೀ ಬೊಮ್ಮಾಯಿ ಹೇಳಿದರು. 

"ಎಲ್ಲಾ ಸಂಬಂಧಗಳು ಜನ್ಮಾಂತರದ ನಂತರ ಹುಟ್ಟಿಕೊಳ್ಳುತ್ತವೆ, ಆದರೆ ತಾಯಿ-ಮಗುವಿನ ಸಂಬಂಧವು ಪೂರ್ವ ಜನ್ಮದಿಂದಲೇ ರೂಪುಗೊಂಡಿರುತ್ತದೆ. ಯಾರಾದರೂ ನನ್ನನ್ನು ತಾಯಿ ಮತ್ತು ದೇವರಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಿದರೆ, ನಾನು ಯಾವಾಗಲೂ ತಾಯಿಯನ್ನು ಆಯ್ಕೆ ಮಾಡುತ್ತೇನೆ. ತಾಯಿಯ ಪ್ರೀತಿ ಬೇಷರತ್ ಮತ್ತು ನಿಷ್ಕಲ್ಮಶ. ಶಿಶುವೈದ್ಯಶಾಸ್ತ್ರದ ಪಾತ್ರ ಕೇವಲ  ಪರಿಕಲ್ಪನೆ ಎಂದು ಭಾವಿಸುತ್ತಾರೆ. ಆದರೆ ಗರ್ಭಧರಿಸುವ ಸಮಯದಲ್ಲಿ ಏನಾಗುತ್ತದೆಯೋ ಅದು ಬಾಲ್ಯ ಮತ್ತು ಪ್ರೌಢಾವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಎಂ‌ ನುಡಿದರು. 

ರೈನ್‌ಬೋ ಮಕ್ಕಳ ಆಸ್ಪತ್ರೆಯ ಡಾ. ಅರವಿಂದ್ ಶೆಣೈ, ಕ್ಲಿನಿಕಲ್ ನಿರ್ದೇಶಕ ಮತ್ತು ಮುಖ್ಯಸ್ಥ ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್, ರೈನ್‌ಬೋ ಮಕ್ಕಳ ಆಸ್ಪತ್ರೆ, ಮಾರತಹಳ್ಳಿ, ಅವರ ಸೇವೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಮುಕ್ತ ಕಂಠದಿಂದ ಶ್ಲಾಘಿಸಿದರು. ದೃಷ್ಟಿ ದಾಖಲಾತಿಯಲ್ಲಿ  ವೈದ್ಯರು ಜನನದ ನ್ಯೂನತೆಗಳನ್ನು ಉಲ್ಲೇಖಿಸುತ್ತಾರೆ.  "ಮಗುವಿನ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಆಳವಾದ ಆನುವಂಶಿಕ ಅಧ್ಯಯನವು ಅತ್ಯಗತ್ಯವಾಗಿದೆ. ಶಿಶುವೈದ್ಯಕೀಯದಲ್ಲಿ ಜನನ ಪೂರ್ವ ಬೆಳವಣಿಗೆಯ ವಿವರ ಸೇರಿಸಲು ನಾನು ಪೀಡಿಯಾಟ್ರಿಕ್ ಕೌನ್ಸಿಲ್ ಅನ್ನು ವಿನಂತಿಸುತ್ತೇನೆ" ಎಂದು ಸಿಎಂ ಹೇಳಿದರು. 

ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ತೋಟಗಾರಿಕೆ ಸಚಿವ ಮುನಿರತ್ನ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಉಪಸ್ಥಿತರಿದ್ದರು. 
*ಫಲಪೂರ್ಣ ಸಮ್ಮೇಳನ* 
ರೈನ್‌ಬೋ ಮಕ್ಕಳ ಆಸ್ಪತ್ರೆ ಆಯೋಜಿಸಿದ್ದ ವಿಶೇಷ ಮಕ್ಕಳ ವೈದ್ಯಕೀಯ (CUSP) ವ್ಯವಸ್ಥೆಯಲ್ಲಿನ ನವೀಕರಣಗಳ ಸಮ್ಮೇಳನದಲ್ಲಿ ಉನ್ನತ ಶಿಶುವೈದ್ಯರಿಂದ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವಿಚಾರ ಸಂಕೀರ್ಣ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ‌ಆಸ್ಪತ್ರೆಯ ಉನ್ನತ ಶಿಶುವೈದ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.ಅನಾರೋಗ್ಯ ಪೀಡಿತ ನವಜಾತ ಶಿಶುಗಳು ಮತ್ತು ಎಳೆಯ ಮಕ್ಕಳ ಆರೋಗ್ಯ ನಿರ್ವಹಣೆ ಹಾಗೂ ದೈಹಿಕವಾಗಿ ಸಶಕ್ತಗೊಳಿಸುವ ಪರಿಣಿತ ಶಿಶ್ರೋಷೆ ನೀಡುವ ಕುರಿತಾಗಿ ಶಿಶುವೈದ್ಯರು ಮತ್ತು ಮಕ್ಕಳ ನಿಗಾ ನೋಡಿಕೊಳ್ಳುವ ಸಿಬ್ಬಂದಿಗಳ ಕಾರ್ಯಾಗಾರ ನಡೆಸಲಾಯಿತು. ವಿಶೇಷವೆಂದರೆ ಸಭೆಗೆ ಮುನ್ನ ನವಜಾತ ಶಿಶುಗಳ ವೆಂಟಿಲೇಷನ್,  ಪಾಯಿಂಟ್ ಆಫ್ ಕೇರ್ ಅಲ್ಟ್ರಾಸೌಂಡ್ ಮತ್ತು ಮಕ್ಕಳಲ್ಲಿ ನ್ಯೂರೋ ಕ್ರಿಟಿಕಲ್ ಕೇರ್‌ ಕಾರ್ಯಾಗಾರಗಳು ನಡೆದವು; ಈ ಕಾರ್ಯಾಗಾರದಲ್ಲಿ 350 ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದರು. 


ನವಜಾತ ಶಿಶುಗಳ ವೆಂಟಿಲೇಷನ್  ಕಾರ್ಯಾಗಾರಗಳ ಜೊತೆಗೆ, ವೈದ್ಯರಿಗೆ ಪ್ರಾಯೋಗಿಕ ತರಬೇತಿ, ಪಾಯಿಂಟ್ ಆಫ್ ಕೇರ್ ಅಲ್ಟ್ರಾಸೌಂಡ್ ಮತ್ತು ನ್ಯೂರೋ ಕ್ರಿಟಿಕಲ್ ಕೇರ್ ಅಳವಡಿಕೆ ಕುರಿತು ತಿಳಿಸಲಾಯಿತು. ಮಕ್ಕಳ ಆರೋಗ್ಯ ನಿರ್ವಹಣೆಯ ಪ್ರಮುಖ ಆಧಾರ ಸ್ತಂಭಗಳೆಂದು ಪರಿಗಣಿಸಲ್ಪಟ್ಟಿರುವ ಶಿಶುವೈದ್ಯರು, ಮಕ್ಕಳಲ್ಲಿನ ಸಂಕೀರ್ಣ ಅಸ್ವಸ್ಥತೆಗಳನ್ನು ಆತ್ಮವಿಶ್ವಾಸದಿಂದ ನಿರ್ಣಯಿಸಬಹುದು ಮತ್ತು ಮೌಲ್ಯಮಾಪನ ಮಾಡಬಹುದು ಎನ್ನುವ ಭರವಸೆ ಮೂಡಿಸಲಾಯಿತು ಎಂದು ಶ್ರೀ ನಿತ್ಯಾನಂದ ಪಿ, ಉಪಾಧ್ಯಕ್ಷರು, ರೈನ್ ಬೋ ಮಕ್ಕಳ ಆಸ್ಪತ್ರೆ ಇವರು ಹೇಳಿದರು.
ವೆಂಟಿಲೇಷನ್ ಕಾರ್ಯಾಗಾರ: 
ತರಬೇತಿ ಕಾರ್ಯಾಗಾರದ ಒಂದು ಅವಧಿಯನ್ನು ನವಜಾತ ಶಿಶುವಿನ ವೆಂಟಿಲೇಷನ್ ಗಾಗಿ  ಮೀಸಲಿಡಲಾಗಿತ್ತು. ವಾಸ್ತವವಾಗಿ, ನವಜಾತ ಶಿಶುವಿನ ವೆಂಟಿಲೇಷನ್ ಮಕ್ಕಳ ಅಥವಾ ವಯಸ್ಕರ ವೆಂಟಿಲೇಷನ್ ವ್ಯವಸ್ಥೆಗಿಂತ ಸಾಕಷ್ಟು ಭಿನ್ನವಾಗಿದೆ. 

ಡಾ. ರಕ್ಷಯ್ ಶೆಟ್ಟಿ, ಮುಖ್ಯರು, ಮಕ್ಕಳ ತೀವ್ರ ನಿಗಾ ಸೇವೆಗಳು , ರೈನ್‌ಬೋ ಮಕ್ಕಳ ಆಸ್ಪತ್ರೆ, ಮಾರತಹಳ್ಳಿ ಇವರು ಮಾತನಾಡಿ, "ಶರೀರವಿಜ್ಞಾನ ಮತ್ತು ವಿಶಿಷ್ಟ ಸವಾಲುಗಳ ಕುರಿತಾಗಿ ಸೂಕ್ತ ತಿಳುವಳಿಕೆ ಅತಿ ಮುಖ್ಯ. ವೆಂಟಿಲೇಷನ್  ಕಾರ್ಯಾಗಾರ, ನವಜಾತ ಶಿಶುಗಳ ಆರೋಗ್ಯ ನಿರ್ವಹಣೆಯಲ್ಲಿ ಕೆಲಸ ಮಾಡುವ ವೈದ್ಯರಿಗೆ ಮೂಲಭೂತ ಅರಿವು ಮತ್ತು ಹೊಸ ವೆಂಟಿಲೇಷನ್  ವಿಧಾನಗಳಲ್ಲಿ ತರಬೇತಿ ಪಡೆಯಲು ಸಹಾಯ ಮಾಡುತ್ತದೆ ಎಂದರು. ಕಳೆದ ಮೂರು ವರ್ಷಗಳಲ್ಲಿ ಇದು ಮೊದಲ ಪ್ರಾಯೋಗಿಕ ಕಾರ್ಯಾಗಾರವಾಗಿದೆ.  (ಕೋವಿಡ್ ಕಾರಣದಿಂದಾಗಿ ನಡೆಸಲಾಗಿರಲಿಲ್ಲ) ಸಾಂಕ್ರಾಮಿಕ ರೋಗದ ಕಾರಣದಿಂದ ಅಂತಹ ತರಬೇತಿಯ ಅವಕಾಶ ಕಳೆದುಕೊಂಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶ. ಕಳೆದೊಂದು ದಶಕದಿಂದ ಪೀಡಿಯಾಟ್ರಿಕ್ಸ್ ಕ್ಷೇತ್ರ ವಿಶಿಷ್ಟ ಸೇವೆಯಾಗಿ ಪರಿವರ್ತನೆ ಹೊಂದಿದ್ದು ಅತ್ಯಂತ ಗುರುತರ ಸಾಧನೆಗಳಾಗಿವೆ. ಹಲವಾರು ನವೀಕರಣಗಳೊಂದಿಗೆ, ಶಿಶುವೈದ್ಯರು ಅತ್ಯಂತ ಆತ್ಮವಿಶ್ವಾಸದಿಂದ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಇಂದಿನ ಸಭೆಯಲ್ಲಿ ಪ್ರಮುಖ ಹೊಸ ತಂತ್ರಜ್ಞಾನ ಅಳವಡಿಕೆಗಳ ಕುರಿತು ವಿಶೇಷ ತಿಳುವಳಿಕೆ ಮೂಡಿಸಲಾಗಿದೆ. ಮಕ್ಕಳ ಆರೋಗ್ಯ ಸುಧಾರಣೆಯ ಕುರಿತಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಣಿತರು ತಜ್ಞ ಅಭಿಪ್ರಾಯ ನೀಡಿ ಭವಿಷ್ಯದ ದೃಷ್ಟಿಕೋನವನ್ನು ಸಮಗ್ರವಾಗಿ ವಿವರಿಸಿದ್ದಾರೆ"  ಎಂದರು. 

*ನವಜಾತ ಶಿಶು ಔಷಧದ ಪ್ರಯೋಜನಗಳು*

ಡಾ.ಅರವಿಂದ್ ಶೆಣೈ, ಕ್ಲಿನಿಕಲ್ ನಿರ್ದೇಶಕ ಮತ್ತು ಮುಖ್ಯಸ್ಥರು, ನಿಯೋನಾಟಾಲಜಿ ಮತ್ತು  ಪೀಡಿಯಾಟ್ರಿಕ್ಸ್, ರೈನ್ ಬೋ ಮಕ್ಕಳ ಆಸ್ಪತ್ರೆ, ಮಾರತಹಳ್ಳಿ ಇವರು ಮಾತನಾಡಿದರು. 
"ನವಜಾತ ಶಿಶುಗಳ ಆರೋಗ್ಯ ನಿರ್ವಹಣೆಗೆ ಸಂಬಂಧಿಸಿದ ಔಷಧ ಪ್ರಯೋಗವು ಕ್ಷಿಪ್ರಗತಿಯ ಪ್ರಗತಿ ಕಾಣುತ್ತಿದೆ. ಎಲ್ಲಾ ವೈದ್ಯರು ಹೊಸ ಪರಿಕಲ್ಪನೆಗಳೊಂದಿಗೆ ತಮ್ಮನ್ನು ತಾವು ನವೀಕರಿಸಿಕೊಳ್ಳುವುದು ಮುಖ್ಯವಾಗಿದೆ. ಉದಾಹರಣೆಗೆ, ಶ್ವಾಸಕೋಶದ ರಕ್ಷಣಾತ್ಮಕ ವೆಂಟಿಲೇಷನ್ ಅಳವಡಿಕೆಯಿಂದ ಅವಧಿಗಿಂತ ಮೊದಲು ಜನಿಸಿದ ಶಿಶುಗಳಲ್ಲಿ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಸ ಉಪಕರಣಗಳ ಬಳಕೆಗೆ ಒಡ್ಡಿಕೊಳ್ಳುವುದರಿಂದ ವೈದ್ಯರು ತಮ್ಮ ಅರಿವು ಹೆಚ್ಚಿಸಿಕೊಂಡು ಹೊಸ ಪ್ರಯೋಗಗಳ ಮೂಲಕ ವಿಶ್ವಾಸಾರ್ಹ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

Post a Comment

0Comments

Post a Comment (0)