ನಾಯಕ ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆಅಹ್ವಾನ

varthajala
0

ತಿ.ನರಸೀಪುರ. ಜು.14:-ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ತಾಲ್ಲೂಕಿನ ನಾಯಕ ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ತಾಲ್ಲೂಕು ನಾಯಕ ಸಂಘ,  ನಾಯಕ  ನೌಕರರ  ಸಂಘ ಹಾಗೂ ನಾಯಕ ನೌಕರರ ಪ್ರಾಥಮಿಕ ಶಾಲಾ ಶಿಕ್ಷಕರ  ಸಂಘದ  ವತಿಯಿಂದ ಅರ್ಜಿ ಆಹ್ವಾನಿಸಿದೆ.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಿ.ನರಸೀಪುರ ತಾಲ್ಲೂಕಿನವರಾಗಿರಬೇಕು 2021- 22 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು  ದ್ವಿತೀಯ ಪಿ ಯು ಸಿ ಯಲ್ಲಿ ಶೇ.80% ಗಿಂತ ಹೆಚ್ಚು  ಅಂಕಗಳಿಸಿರುವ ನಾಯಕ ಜನಾಂಗದ  ವಿದ್ಯಾರ್ಥಿಗಳಾ ಗಿರಬೇಕು

ವಿಧ್ಯಾರ್ಥಿಗಳು ಅರ್ಜಿ ಜೊತೆಯಲ್ಲಿ ತಮ್ಮ ಸ್ವ ವಿಳಾಸ ದೊಂದಿಗೆ ಇತ್ತೀಚಿನ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ 

ಅಂಕಪಟ್ಟಿ ಹಾಗೂ ಜಾತಿ ಪ್ರಮಾಣ ಪತ್ರದ ದೃಡೀಕೃತ ನಕಲು ಪ್ರತಿ ದಾಖಲೆಗಳೊಂದಿಗೆ  ಮಹರ್ಷಿ ವಾಲ್ಮೀಕಿ ಶಾಲೆ( ಶ್ರೀ ರಾಮರೂಢ ಮಠ. ಶ್ರೀರಾಮಪುರದ ಬೀದಿ) ತಿ.ನರಸೀಪುರ ಟೌನ್ ಈ ವಿಳಾಸಕ್ಕೆ ದಿನಾಂಕ  30.07.2022 ರ ಒಳಗೆ  ಅರ್ಜಿ ಸಲ್ಲಿಸಬಹುದಾಗಿದೆ.

ಪ್ರತಿಭಾ ಪುರಸ್ಕಾರ  ಸಮಾರಂಭವು ದಿನಾಂಕ  07.08.2022 ರ ಭಾನುವಾರ ಬೆಳಿಗ್ಗೆ  10.30.ಕ್ಕೆ  ಸಂಘದ ಆವರಣದಲ್ಲಿ ಜರುಗಲಿದ್ದು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು  ನಾಯಕರ ಸಂಘದ  ಪ್ರಧಾನ ಕಾರ್ಯದರ್ಶಿ ಪಿ ಶಶಿಧರ ಮೊಬೈಲ್.ಸಂಖ್ಯೆ 

80500 18240 ಸಂಪರ್ಕ ಮಾಡುವಂತೆ ಸಂಘದವರು ತಿಳಿಸಿದ್ದಾರೆ.

Post a Comment

0Comments

Post a Comment (0)