ಎಸ್.ಎಲ್.ಎಸ್. ಶಾಲೆಯ 17 ಮಕ್ಕಳಿಗೆ 17 ಚಿನ್ನದ ಪದಕ

varthajala
0

ವಾರ್ತಾ ಜಾಲ ದೇವನಹಳ್ಳಿ : ತಾಲ್ಲೂಕು ಮಟ್ಟದ ಕರಾಟೆ, ಯೋಗ  ಮತ್ತು ಕುಸ್ತಿ ಸ್ರ‍್ಧೆಯಲ್ಲಿ ಗೆದ್ದಂತಹ  ಎಸ್ಎಲ್ ಎಸ್ ಶಾಲೆಯ ಮಕ್ಕಳಿಗೆ 17 ಚಿನ್ನದ ಪದಕ 7 ಬೆಳ್ಳಿ  ಪದಕವನ್ನು  ಪಡೆದು  ಗೆದ್ದಂತಹ ಶಾಲಾ ಮಕ್ಕಳಿಗೆ ಅಭಿನಂದನೆ ಸಲ್ಲಿಸಲಾಯಿತು.

 ಸಾರ್ವಜನಿಕ ಶಿಕ್ಷಣಇಲಾಖೆ ವತಿಯಿಂದ ತಾಲ್ಲೂಕು ಮಟ್ಟದ  ಯೋಗ, ಕುಸ್ತಿ,  ಕರಾಟೆ ,ಸ್ರ‍್ಧೆಯಲ್ಲಿ ದೇವನಹಳ್ಳಿ ಪಟ್ಟಣದ ಎಸ್ಎಲ್‌ಎಸ್ ಶಾಲೆಯ ಮಕ್ಕಳು ಪಾಲ್ಗೊಂಡು 17 ಚಿನ್ನ 7 ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ಶಾಲೆಯ ಕಾರ್ಯದರ್ಶಿ ಡಿ.ಎಸ್.ಧನಂಜಯ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಎಸ್.ಎನ್.ಎಸ್ ಶಾಲೆಯ ಮಕ್ಕಳು ತಾಲ್ಲೂಕು ಮಟ್ಟದಲ್ಲಿ  ಕರಾಟೆ,  ಯೋಗ ,ಕುಸ್ತಿಯಲ್ಲಿ ವಿಜೇತರಾದ ಮಕ್ಕಳಿಗೆ ಎಸ್ ಎಲ್ ಎಸ್ ಶಾಲಾ ಆವರಣದಲ್ಲಿ ಪ್ರಶಸ್ತಿ ಪತ್ರ ಮತ್ತು ಪದಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿ ನಮ್ಮ ಶಾಲೆಯ ಮಕ್ಕಳು ಕರಾಟೆ, ಯೋಗ ಮತ್ತು ಕುಸ್ತಿಯಲ್ಲಿ  ಭಾಗಿಯಾಗಿದ್ದು , ನಮ್ಮ ಶಾಲೆಯ ಮಕ್ಕಳು ಭಾಗಿಯಾಗಿ 17 ಚಿನ್ನದ ಪದಕ, 7 ಬೆಳ್ಳಿ, ಪದಕಗಳನ್ನು ಪಡೆದುಕೊಂಡಿರುವುದು ನಮ್ಮ ಶಾಲೆಗೆ ಗೌರವವನ್ನು ತಂದುಕೊಟ್ಟಿದೆ . ಕರಾಟೆ ವಿದ್ಯೆ ಕಲಿಯುವುದರಿಂದ ಮನುಷ್ಯನಲ್ಲಿ ಧರ‍್ಯ ಮತ್ತು ಆತ್ಮಸ್ಥರ‍್ಯ ಹೆಚ್ಚುತ್ತದೆ . ಎಲ್ಲಾ ಮಕ್ಕಳು ಕರಾಟೆಯನ್ನು ಕಲಿತು ಜೀವನದಲ್ಲಿ ಉತ್ತಮ  ಆರೋಗ್ಯ   ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವುದರ ಜೊತೆಗೆ    ಯೋಗ ಅಭ್ಯಾಸ ಮಾಡುವುದರಿಂದ  ಉತ್ತಮ ಆರೋಗ್ಯ  ಏಕಾಗ್ರತೆ  ದೊರೆಯುತ್ತದೆ  ಹಾಗೂ ಕುಸ್ತಿ ಮಾಡುವುದರಿಂದ ಸದೃಢವಾದ ಮೈಕಟ್ಟು ಬುದ್ಧಿಶಕ್ತಿ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ಮಕ್ಕಳು ತಮ್ಮ ವಿದ್ಯರ‍್ಥಿ ಜೀವನದ ಜೊತೆಜೊತೆಯಲ್ಲಿ ಕರಾಟೆ, ಕುಸ್ತಿ, ಯೋಗ ಕಲೆಯನ್ನು ಕಲಿತು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಮಕ್ಕಳು ಪ್ರೇರಣೆಯಾಗಬೇಕು .
ಇತ್ತೀಚೆಗೆ ಕೋವಿಡ್ ಸಮಯದಲ್ಲಿ ವ್ಯಾಯಾಮ ಮತ್ತು ಕರಾಟೆ, ಯೋಗ ಅಭ್ಯಾಸ ಕಲಿತು ದೇಹವನ್ನು ಸಮತೋಲನವಾಗಿ ಇಟ್ಟುಕೊಂಡಿದ್ದರಿಂದ  ಕೊರೊನಾ ಮಾರಣಾಂತಿಕ ರೋಗವು ಯಾವುದೇ ರೀತಿ ಪ್ರಭಾವ ಬೀರದಂತೆ ನೋಡಿಕೊಂಡು ಆರೋಗ್ಯಕಾಪಾಡಿಕೊಳ್ಳಬಹುದು, ಪ್ರತಿಯೊಬ್ಬರು ಕರಾಟೆ, ಯೋಗ, ಕುಸ್ತಿ ಪಟುಗಳಾಗಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.  

ತಾಲ್ಲೂಕು ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಕರಾಟೆ ಸ್ರ‍್ಧೆಯಲ್ಲಿ   ದೀಕ್ಷಿತ್, ಪ್ರಥಮ ಸ್ಥಾನ, ಜಯಂತ, ಪ್ರಥಮ ಸ್ಥಾನ, ಸುಜನ್ ದ್ವಿತೀಯ ಸ್ಥಾನ, ಬೃಂದ ದ್ವಿತೀಯ ಸ್ಥಾನ, ಸ್ಪೂರ್ತಿ ದ್ವಿತೀಯ ಸ್ಥಾನ, ಕುಸ್ತಿ ಕ್ರೀಡೆಯಲ್ಲಿ ಸಂಜು ಪ್ರಥಮ ಸ್ಥಾನ, ಸುಮಂತ್ ದ್ವಿತೀಯ ಸ್ಥಾನ, ದಿಗಂತ್ ದ್ವಿತೀಯ ಸ್ಥಾನ, ಮೋನಿಷ್ ದ್ವಿತೀಯ ಸ್ಥಾನ, ದರ್ಶನ್ ದ್ವಿತೀಯ ಸ್ಥಾನ, ಹಾಗೂ ಯೋಗ ಸ್ಪರ್ಧೆಯಲ್ಲಿ ಕೃತಿಕ ಪ್ರಥಮ ಸ್ಥಾನ, ಕೀರ್ತನ ಪ್ರಥಮ ಸ್ಥಾನ, ಯವ್ವನಿಕ ಪ್ರಥಮ ಸ್ಥಾನ, ಗುಣಶ್ರೀ ಪ್ರಥಮ ಸ್ಥಾನ,  ಅಪೂರ್ವ ಪ್ರಥಮ ಸ್ಥಾನ, ವಿಶ್ವಾಸ್ ಪ್ರಥಮ ಸ್ಥಾನ, ಕೌಶಿಕ್ ಪ್ರಥಮ ಸ್ಥಾನ,  ಪ್ರತೀಕ್ ಪ್ರಥಮ ಸ್ಥಾನ,  ನಿತಿನ್ ಪ್ರಥಮ ಸ್ಥಾನ,  ಪವನ್ ಪ್ರಥಮ ಸ್ಥಾನ,  ಆರ್‌ಜೂ ಪ್ರಥಮ ಸ್ಥಾನ, ದೀಪ್ತಿ ಪ್ರಥಮ ಸ್ಥಾನ,  ಸಂಪ್ರೀತ್ ಪ್ರಥಮ ಸ್ಥಾನ, ಹಾಗೂ ಹೇಮಂತ್ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಶೈಲಾ ಧನಂಜಯ್, ಕರಾಟೆ ತರಬೇತಿದಾರರಾದ ಮುತ್ತಣ್ಣ ಪಿ.ಬಿ., ಯೋಗ ತರಬೇತುದಾರರಾದ ಪಿ.ಶ್ರೀಕಾಂತ್, ಕುಸ್ತಿ ತರಬೇತುದಾರರಾದ ಎಂ.ಮಹೇಂದ್ರ, ಮುಖ್ಯ ಉಪಶಿಕ್ಷಕ ಎಸ್.ನಿಜಲಿಂಗಪ್ಪ, ನೃತ್ಯ ತರಬೇತುದಾರರಾದ ಸುರೇಶ್ ಹಾಗೂ ಎಲ್ಲಾ ಬೋಧಕ ಸಿಬ್ಬಂದಿಯವರು ಹಾಜರಿದ್ದರು.

-ವರದಿ ಮಧು ದೇವನಹಳ್ಳಿ....

Post a Comment

0Comments

Post a Comment (0)