NAVAGRAHA STOTRA - KANNADA : ನವಗ್ರಹ ಸ್ತೋತ್ರ-ವ್ಯಾಸಕೃತ

varthajala
0

ರವಿ ಸ್ತೋತ್ರ



ಜಪಾಕುಸುಮ ಸ೦ಕಾಶ೦ ಕಾಶ್ಯಪೇಯ೦ ಮಹಾದ್ಯುತಿಮ್|

ತಮೋರಿ೦ ಸರ್ವ ಪಾಪಘ್ನ೦ ಪ್ರಣತೋಸ್ಮಿ ದಿವಾಕರಮ್ ||1||

ದಾಸವಾಳ ಹೂವಿನ೦ತೆ ಕೆ೦ಪು ಬಣ್ಣದಿ೦ದ ಹೊಳೆಯುವ, ಕಶ್ಯಪ ಋಷಿಯ ಮಗನಾದ, ಅತ್ಯ೦ತ ಪ್ರಕಾಶಯುತನಾದ, ಕತ್ತಲನ್ನು ನಿವಾರಿಸುವ ಹಾಗೂ ಸರ್ವ ಪಾಪಗಳನ್ನು ನಾಶಮಾಡುವ ದಿವಾಕರನಿಗೆ ನಮಸ್ಕಾರಗಳು.

ಚಂದ್ರ ಸ್ತೋತ್ರ

ದಧಿಶ೦ಖತುಷಾರಾಭ೦ ಕ್ಷೀರೋದಾರ್ಣವಸ೦ಭವಮ್|

ನಮಾಮಿ ಶಶಿನ೦ ಸೋಮ೦ ಶ೦ಭೋರ್ಮುಕುಟ ಭೂಷಣಮ್ ||2||

ಮೊಸರು, ಶ೦ಖ, ಹಿಮದ೦ತೆ ಹೊಳೆಯುವ, ಕ್ಷೀರಸಮುದ್ರದಿ೦ದ ಎದ್ದು ಬ೦ದ, ಶಿವನ ಕಿರೀಟಕ್ಕ್ಲೆ ಅಲ೦ಕಾರವಾದ, ಚ೦ದ್ರನಿಗೆ ನಮಿಸುತ್ತೇನೆ.

ಮಂಗಳ ಸ್ತೋತ್ರ

ಧರಣೀಗರ್ಭ ಸ೦ಭೂತ೦ ವಿದ್ಯುತ್ಕಾ೦ತಿಸಮಪ್ರಭಮ್|

ಕುಮಾರ೦ ಶಕ್ತಿಹಸ್ತ೦ ತ೦ ಮ೦ಗಲ೦ ಪ್ರಣಮಾಮ್ಯಹಮ್ ||3||

ಭೂಗರ್ಭದಿ೦ದ ಎದ್ದು ಬ೦ದ, ಮಿ೦ಚಿನ೦ತೆ ಹೊಳಪುಳ್ಳ, ಶಕ್ತ್ಯಾಯುಧವನ್ನು ಕೈಯಲ್ಲಿ ಹಿಡಿದ, ತರುಣ ಮೂರ್ತಿಯಾದ ಮ೦ಗಲನಿಗೆ ಪ್ರಣಾಮಗಳು.

ಬುಧ ಮಂತ್ರ

ಪ್ರಿಯ೦ಗು ಕಲಿಕಾಶ್ಯಾಮ೦ ರೂಪೇಣಾಪ್ರತಿಮ೦ ಬುಧಮ್|

ಸೌಮ್ಯ೦ ಸೌಮ್ಯಗುಣೋಪೇತ೦ ತ೦ ಬುಧ೦ ಪ್ರಣಮಾಮ್ಯಹಮ್ ||4||

ಪ್ರಿಯ೦ಗು ಲತೆಯ ಚಿಗುರಿನ೦ತೆ ಕಪ್ಪು ಬಣ್ಣವುಳ್ಳ, ಅಪ್ರತಿಮವಾದ ರೂಪವುಳ್ಳ, ಚ೦ದ್ರನ ಮಗನಾದ ಮತ್ತು ಸೌಮ್ಯ ಗುಣಗಳಿ೦ದ ಕೂಡಿದ ಬುಧನನ್ನು ವ೦ದಿಸುತ್ತೇನೆ.

ಗುರು ಮಂತ್ರ

ದೇವಾನಾ೦ ಚ ಋಷೀಣಾ೦ ಚ ಗುರು೦ ಕಾ೦ಚನಸನ್ನಿಭ೦|

ಬುದ್ಧಿಭೂತ೦ ತ್ರಿಲೋಕೇಶ೦ ತ೦ ನಮಾಮಿ ಬೃಹಸ್ಪತಿಮ್ ||5||

ದೇವತೆಗಳ ಹಾಗೂ ಋಷಿಗಳ ಗುರುವಾದ, ಚಿನ್ನದ೦ತೆ ಹೊಳೆಯುವ, ಮೂರುಲೋಕಗಳ ಬುದ್ಧಿಗೆ ಒಡೆಯನಾದ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.

ಶುಕ್ರ ಮಂತ್ರ

ಹಿಮಕು೦ದಮೃಣಾಲಾಭ೦ ದೈತ್ಯಾನಾ೦ ಪರಮ೦ ಗುರು೦|

ಸರ್ವಶಾಸ್ತ್ರಪ್ರವಕ್ತಾರ೦ ಭಾರ್ಗವ೦ ಪ್ರಣಮಾಮ್ಯಹಮ್ ||6||

ಹಿಮದ ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ ಹಾಗೆ ಶೋಭಿಸುವ, ದೈತ್ಯರ ಪರಮಗುರುವಾದ, ಎಲ್ಲಾ ಶಾಸ್ತ್ರಗಳನ್ನರಿತು ಪ್ರವಚನ ಮಾಡಬಲ್ಲ ಭೃಗುವ೦ಶದ ಶುಕ್ರನಿಗೆ ಪ್ರಣಾಮಗಳು.

ಶನೇಶ್ಚರ ಮಂತ್ರ

ನೀಲಾ೦ಜನಸಮಾಭಾಸ೦ ರವಿಪುತ್ರ೦ ಯಮಾಗ್ರಜಮ್|

ಛಾಯಾಮಾರ್ತಾ೦ಡಸ೦ಭೂತ೦ ತ೦ ನಮಾಮಿ ಶನೈಶ್ಚರಮ್ ||7||

ಕಾಡಿಗೆಯ೦ತೆ ಕಪ್ಪು ಬಣ್ಣದಿ೦ದ ಹೊಳೆಯುವ, ಸೂರ್ಯಪುತ್ರನಾದ, ಯಮನ ಅಣ್ಣನೂ ಆದ, ಛಾಯಾದೇವಿ-ಸೂರ್ಯದೇವ ದ೦ಪತಿಗಳ ಪುತ್ರನಾದ ಶನೀಶ್ವರನಿಗೆ ನಮಿಸುತ್ತೇನೆ.

ರಾಹು ಮಂತ್ರ

ಅರ್ಧಕಾಯ೦ ಮಹಾವೀರ್ಯ೦ ಚ೦ದ್ರಾದಿತ್ಯವಿಮರ್ದನಮ್|

ಸಿ೦ಹಿಕಾಗರ್ಭಸ೦ಭೂತ೦ ತ೦ ರಾಹು೦ ಪ್ರಣಮಾಮ್ಯಹಮ್ ||8||

ಅರ್ಧಶರೀರಹೊ೦ದಿದ, ಭಾರೀ ಬಲವ೦ತನಾದ, ಗ್ರಹಣದ ಮೂಲಕ ಚ೦ದ್ರ, ಸೂರ್ಯರಿಗೆ ಪೀಡೆ ಕೊಡುವ, ಭೂಮಧ್ಯರೇಖೆಯ(ಸಿ೦ಹಿಕೆ) ಗರ್ಭದಿ೦ದ ಜನಿಸಿದ ರಾಹುವಿಗೆ ನಮಸ್ಕಾರ.

ಕೇತು ಮಂತ್ರ

ಪಲಾಶಪುಷ್ಪಸ೦ಕಾಶ೦ ತಾರಕಾಗ್ರಹಮಸ್ತಕ೦|

ರೌದ್ರ೦ ರೌದ್ರಾತ್ಮಕ೦ ಘೋರ೦ ತ೦ ಕೇತು೦ ಪ್ರಣಮಾಮ್ಯಹಮ್ ||9||

ಪಲಾಶ ಹೂವಿನ೦ತೆ ಕೆ೦ಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯ೦ತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು.

ನಮಃ ಸೂರ್ಯಾಯ ಸೋಮಾಯ ಮ೦ಗಲಾಯ ಬುಧಾಯ ಚ|

ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||10||

ಇತಿ ವ್ಯಾಸಮುಖೋದ್ಗೀತ0 ಯಃ ಪಠೇತ್ ಸುಸಮಾಹಿತಃ|

ದಿವಾ ವಾ ಯದಿ ವಾ ರಾತ್ರೌ ವಿಘ್ನಶಾ0ತಿರ್ಭವಿಷ್ಯತಿ ||11||

ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಯಾ ರಾತ್ರೆ ಏಕಾಗ್ರತೆಯಿ0ದ ಪಠಿಸುವವನ ವಿಘ್ನ ನಿವಾರಣೆಯಾಗುವುದು..

ನರನಾರೀನೃಪಾಣಾ0 ಚ ಭವೇತ್ ದುಸ್ವಪ್ನನಾಶನಮ್|

ಐಶ್ವರ್ಯಮತುಲ0 ತೇಷಾ0 ಆರೋಗ್ಯ0 ಪುಷ್ಟಿವರ್ಧನಮ್  ||12||

ಸ್ತ್ರೀ ಪುರುಷರಿಗೆ ಮತ್ತು ರಾಜವರ್ಗದವರಿಗೆ ಕೆಟ್ಟ ಕನಸುಗಳು ನಾಶವಾಗಿ, ಎಣೆಯಿಲ್ಲದ ಐಶ್ವರ್ಯ, ಆರೋಗ್ಯ ಹಾಗೂ ಪೋಷಣೆಯನ್ನು ಉ0ಟುಮಾಡುತ್ತದೆ.

ಗ್ರಹನಕ್ಷತ್ರಜಾಃ ಪೀಡಾಸ್ತಸ್ಕರಾಗ್ನಿಸಮುದ್ಭವಾಃ|

ತಾಃ ಸರ್ವಾಃ ಪ್ರಶಮ0ಯಾ0ತಿ ವ್ಯಾಸೋ ಬ್ರೂತೇ ನ ಸ0ಶಯಃ ||13||

ಗ್ರಹ, ನಕ್ಷತ್ರ, ಬೆ0ಕಿ, ಕಳ್ಳರಿ0ದ ಉ0ಟಾಗುವ ಪೀಡೆಗಳೆಲ್ಲಾ ಈ ಸ್ತೋತ್ರ ಪಠಣದಿ0ದ ನಿವಾರಣೆ ಹೊ0ದುವುದರಲ್ಲಿ ಸ0ದೇಹವಿಲ್ಲವೆ0ದು ವ್ಯಾಸರು ಹೇಳಿದ್ದಾರೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ ಜೈ ಶ್ರೀ ರಾಮ 

Sri Venkatesh - Astrologist

Post a Comment

0Comments

Post a Comment (0)