ಬಿ.ಪ್ಯಾಕ್ 9ನೇ ಆವೃತ್ತಿಯ “ನಾಗರೀಕ ನಾಯಕತ್ವ ತರಬೇತಿ ಕಾರ್ಯಗಾರ”(ಬಿ.ಕ್ಲಿಪ್)‌ ಕ್ಕೆ ಅರ್ಜಿ ಆಹ್ವಾನ

varthajala
0

 B.CLIP intends to create a pool of informed and efficient civic leaders who have the passion to actively engage in improving the city-level governance

Bengaluru, Karnataka: 8th  November 2022: Bangalore Political Action Committee (B.PAC), today announced the opening of applications for the 9th batch of B.CLIP – B.PAC Civic Leadership Incubator Programme. B.CLIP seeks to encourage honest, committed, innovative, passionate, and concerned citizens of Bengaluru to enter public service with a view to creating a new cadre of civic leaders who shall successfully drive and scale civic initiatives at the grassroots and create transformative change in our communities through good governance.

In the last eight years, B.PAC has trained more than 355 civic leaders who continue to participate passionately in the political process and bring a change to the way our city is governed. Over the years, B.PAC has intended to expand this pool of potential civic leaders on a large scale. B.CLIP program ensures this by equipping the candidates with skills in public policy analysis, and municipal administration, educating them on the political landscape and election campaign dynamics.

Addressing the media, Revathy Ashok Managing Trustee and CEO of B. PAC said “B.CLIP program is a unique initiative by B.PAC designed to create well-groomed, sensible and sensitized leaders for the city who can take up the responsibility of administering the city. We hope to create more such leaders and hope the city gets benefited by such passionate and trained leaders”.

T V Mohandas Pai, Vice President of B. PAC expressed that grass root political leaders and civic activists have to administer Bengaluru to bring better governance to the city. Thus, at B. PAC in the next 8-10 years we desire to train 1500-2000 grassroots leaders and civic activists, forming a ‘coalition of good’ who will work to build a better society from both inside and outside the political circles.

Structure of B.CLIP program

B.CLIP program is a nine-month long program consisting of Classroom Sessions and Field Projects. 

Classroom Sessions: Three months of classroom training through a customized curriculum designed by the Takshashila Institution. Three-hour classroom sessions are held every Friday and Saturday for 12 weeks.

Field Project: Follows the classroom sessions to apply theory into practice. The candidates work at the ward level for a period of six months. This is with the aim to provide candidates with an opportunity to engage in civic issues that are of pressing concern in their ward. 

B. PAC calls for citizens of Bengaluru to apply to the B. CLIP program and train themselves to be well-informed citizens of the city and join hands in building a Better Bengaluru. 

Interested citizens can apply for B.CLIP Batch 9 online by visiting https://bpac.in/civic-leadership-incubator-program-batch-9-application/ to fill the online application. Application Copies are also available at the B.PAC office. The last date for submitting the filled application is November 30th, 2022

For more information about the program and the application procedure, call on +91-63648 56147, 080-41521797 or mail us at bclip@bpac.in.   



ಬಿ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪ್ಯಾಕ್), ಇಂದು ಬಿ.ಕ್ಲಿಪ್‌ (ಸಿವಿಕ್ ಲೀಡರ್‌ಶಿಪ್ ಇನ್‌ಕ್ಯುಬೇಟರ್ ಕಾರ್ಯಕ್ರಮ) 9ನೇ ಬ್ಯಾಚ್‌ಗೆ ಅರ್ಜಿಗಳನ್ನು ಆಹ್ವಾನಿಸಿರುವುದಾಗಿ ಪ್ರಕಟಿಸಿದೆ. ಬಿ.ಕ್ಲಿಪ್‌ ಬೆಂಗಳೂರಿನ ಪ್ರಾಮಾಣಿಕ, ಬದ್ಧತೆ, ನವೀನ ಆಲೋಚನೆಗಳನ್ನುಮತ್ತು ಕಾಳಜಿಯುಳ್ಳ ನಾಗರಿಕರನ್ನು ಸಾರ್ವಜನಿಕ ಜೀವನಕ್ಕೆ ಮುಕ್ತ ಪ್ರವೇಶ ಮಾಡುವಂತೆ ಪ್ರೋತ್ಸಾಹಿಸುತ್ತದೆ. ನಾಗರಿಕ ನಾಯಕರು, ಹೊಸ ರಾಜಕೀಯ ಕಾರ್ಯಕರ್ತರನ್ನು ರೂಪಿಸುವ ಮೂಲಕ ತಳಮಟ್ಟದಲ್ಲಿ ವಿವಿಧ ಜನೋಪಯೋಗಿ ಕ್ರಮಗಳ ಮೂಲಕ ತಳಮಟ್ಟದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣರಾಗುತ್ತಾರೆ..

ಬಿ.ಪ್ಯಾಕ್‌ ಕಳೆದ ಎಂಟು ವರ್ಷಗಳಲ್ಲಿ, 355 ಕ್ಕೂ ಹೆಚ್ಚು ನಾಗರಿಕ ನಾಯಕರಿಗೆ ತರಬೇತಿ ನೀಡಿದೆ.  ಅವರ ರಾಜಕೀಯ ಬೆಳವಣಿಗೆಯಲ್ಲೂ ಮಾರ್ಗದರ್ಶನ ನೀಡುತ್ತದೆ. ಈ ಮೂಲಕ ನಮ್ಮ ನಗರದ ಆಡಳಿತದ ರೀತಿಯಲ್ಲಿ ಬದಲಾವಣೆಯನ್ನು ತರುವಲ್ಲಿ ನಾಗರಿಕ ನಾಯಕರು ಕಾರ್ಯನಿರತರಾಗುತ್ತಾರೆ. ಮುಂದಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ತರಬೇತಿ ಪಡೆದ ಬಹುದೊಡ್ಡ ನಾಗರಿಕ ನಾಯಕರ ಪಡೆಯನ್ನು ಕಟ್ಟಲು ಬಿ.ಪ್ಯಾಕ್‌ ಉದ್ದೇಶಿಸಿದೆ. ಬಿ.ಕ್ಲಿಪ್‌ ಕಾರ್ಯಕ್ರಮದ ಅಭ್ಯರ್ಥಿಗಳಿಗೆ ಸಾರ್ವಜನಿಕ ನೀತಿ ವಿಶ್ಲೇಷಣೆ ಮತ್ತು ಪುರಸಭೆಯ ಆಡಳಿತದಲ್ಲಿ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಮೂಲಕ, ರಾಜಕೀಯ ಭೂದೃಶ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಅವರಿಗೆ ಶಿಕ್ಷಣ ನೀಡಲಾಗುತ್ತದೆ.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿ.ಪ್ಯಾಕ್ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಸಿಇಒ ರೇವತಿ ಅಶೋಕ್, “ಬಿ.ಕ್ಲಿಪ್‌ ಕಾರ್ಯಕ್ರಮವು ಬಿ.ಪ್ಯಾಕ್‌ ಸಂಸ್ಥೆಯ ಒಂದು ವಿಶಿಷ್ಟ ಉಪಕ್ರಮವಾಗಿದ್ದು, ಸುಂದರ ಬೆಂಗಳೂರನ್ನು ರೂಪಿಸಲು ಹಾಗೂ ಸಂವೇದನಾಶೀಲ ನಾಯಕರನ್ನು ಸೃಷ್ಠಿಸುವಂತೆ ವಿನ್ಯಾಸಗೊಳಿಸಲಾಗಿದೆ. ನಗರದಲ್ಲಿ ದೊಡ್ಡಮಟ್ಟದಲ್ಲಿ ಅಂತಹ ಸಂವೇಧನಾಶೀಲ ನಾಯಕರನ್ನು ಸೃಷ್ಟಿಸಲು ನಾವು ಆಶಿಸುತ್ತೇವೆ. ತರಬೇತಿ ಪಡೆದ ನಾಗರಿಕ ನಾಯಕರಿಂದ ಬೆಂಗಳೂರು ನಗರ ಪ್ರಯೋಜನ ಪಡೆಯುತ್ತದೆ ಎಂದು ಭಾವಿಸುತ್ತೇವೆ ಎಂದರು.

ಬಿ.ಪ್ಯಾಕ್‌ ಉಪಾಧ್ಯಕ್ಷರಾದ ಟಿ ವಿ ಮೋಹನ್ ದಾಸ್‌ ಪೈ ಮಾತನಾಡಿ, “ನಗರದಲ್ಲಿ ಉತ್ತಮ ಆಡಳಿತ ನೀಡಲು ತಳಮಟ್ಟದಿಂಧ ಬಂದ ರಾಜಕೀಯ ಮುಖಂಡರು ಹಾಗೂ ನಾಗರಿಕ ನಾಯಕರ ಅಗತ್ಯವಿದೆ. ಅಂತಹವರು ಬೆಂಗಳೂರಿನ ಚುಕ್ಕಾಣಿ ಹಿಡಿಯಬೇಕಿದೆ. ಹೀಗಾಗಿ, ಮುಂದಿನ 8-10 ವರ್ಷಗಳಲ್ಲಿ ಬಿ.ಪ್ಯಾಕ್‌ ನಲ್ಲಿ ನಾವು 1500-2000 ತಳಮಟ್ಟದ ನಾಯಕರು ಮತ್ತು ನಾಗರಿಕ ಕಾರ್ಯಕರ್ತರಿಗೆ ತರಬೇತಿ ನೀಡಲು ಬಯಸುತ್ತೇವೆ. ರಾಜಕೀಯ ವಲಯಗಳ ಒಳಗೆ ಮತ್ತು ಹೊರಗಿನಿಂದ ಉತ್ತಮ ಸಮಾಜವನ್ನು ನಿರ್ಮಿಸಲು ಕೆಲಸ ಮಾಡುವ 'ಒಳ್ಳೆಯ ಒಕ್ಕೂಟ'ವನ್ನು ರಚಿಸುತ್ತೇವೆ ಎಂದು ಹೇಳಿದರು. 

ಬಿ.ಕ್ಲಿಪ್‌ ಕಾರ್ಯಕ್ರಮದ ರಚನೆ

ಬಿ.ಕ್ಲಿಪ್‌ ಕಾರ್ಯಕ್ರಮವು ತರಗತಿ ಸೆಷನ್‌ಗಳು ಮತ್ತು ಫೀಲ್ಡ್ ಪ್ರಾಜೆಕ್ಟ್‌ಗಳನ್ನು ಒಳಗೊಂಡಿರುವ ಒಂಬತ್ತು ತಿಂಗಳ ಅವಧಿಯ ಕಾರ್ಯ ಕ್ರಮವಾಗಿದೆ.

ತರಗತಿಯ ಅವಧಿಗಳು: ತಕ್ಷಶಿಲಾ ಸಂಸ್ಥೆಯು ವಿನ್ಯಾಸಗೊಳಿಸಿದ ಪಠ್ಯಕ್ರಮದ ಮೂಲಕ ಮೂರು ತಿಂಗಳ ತರಗತಿ ತರಬೇತಿ. ಪ್ರತಿ ಶುಕ್ರವಾರ ಮತ್ತು ಶನಿವಾರ 12 ವಾರಗಳವರೆಗೆ ಮೂರು ಗಂಟೆ (ಗಳ ತರಗತಿಯ ಅವಧಿಗಳನ್ನು ನಡೆಸಲಾಗುತ್ತದೆ. (ಶುಕ್ರವಾರ ಸಂಜೆ 6 ರಿಂದ 9 ಗಂಟೆಯ ವರೆಗೆ ಮತ್ತು ಶನಿವಾರ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ )

ಕ್ಷೇತ್ರಧಾರಿತ ಕಾರ್ಯಾನುಭವ: ತರಗತಿ ಸೆಷನ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಕಲಿತ ಜ್ಞಾನವನ್ನು ತಮ್ಮ ವಾರ್ಡಿನ ಅಭಿವೃದ್ಧಿಗಾಗಿ ಒಂದು ಧ್ಯೇಯ, ದೃಷ್ಠಿಯೊಂದಿಗೆ ವಿನಿಯೋಗಿಸಬೇಕು.ಆಸಕ್ತ ನಾಗರಿಕರು ಆನ್‌ಲೈನ್ ಅರ್ಜಿಯನ್ನುಭರ್ತಿಮಾಡಲು https://bpac.in/civic-leadership-incubator-program-batch-9-application/
ಗೆ ಭೇಟಿ ನೀಡುವ ಮೂಲಕ ಬಿ.ಕ್ಲಿಪ್‌ 9 ನೇ ಆವೃತ್ತಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿಯ ಪ್ರತಿಗಳು ಬಿ.ಪ್ಯಾಕ್‌ ಕಚೇರಿಯಲ್ಲಿಯೂ ಲಭ್ಯವಿದೆ. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30, 2022

ಕಾರ್ಯಕ್ರಮ ಮತ್ತು ಅರ್ಜಿಸಲ್ಲಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ, +91-63648 56147, 080-41521797 ಗೆ ಕರೆ ಮಾಡಿ ಅಥವಾ bclip@bpac.in ನಲ್ಲಿ ನಮಗೆ ಮೇಲ್ ಮಾಡಿ.  


ಬಿ. ಪ್ಯಾಕ್ ಕುರಿತು 

ಬೆಂಗಳೂರು ರಾಜಕೀಯ ಕಾರ್ಯಕಾರಿ ಸಮಿತಿಯು ಪಕ್ಷಾತೀತ ನಾಗರಿಕರ ವೇದಿಕೆಯಾಗಿದ್ದು, ಬೆಂಗಳೂರಿನ ಆಡಳಿತ ಮತ್ತು ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಬಿ.ಪ್ಯಾಕ್ ನ ಮುಖ‍್ಯ ಉದ್ದೇಶಗಳೇನೆಂದರೆ, ಬೆಂಗಳೂರಿನಲ್ಲಿ ಉತ್ತಮ ಆಡಳಿತ ಪದ್ಧತಿ, ಸರ್ಕಾರದ ಎಲ್ಲಾ ಹಂತಗಳಲ್ಲಿ ಸಮಗ್ರತೆ ಮತ್ತು ಪಾರದರ್ಶಕತೆ ತರುವಂತೆ ಮಾಡುವುದು. ನಗರದಲ್ಲಿ ಮೂಲಸೌಕರ್ಯಗಳ ಗುಣಮಟ್ಟ ಸುಧಾರಣೆ, ಪ್ರತಿಯೊಬ್ಬ ಪ್ರಜೆಗೆ ಕಾನೂನಾತ್ಮಕ ರಕ್ಷಣೆ ಒದಗಿಸುವಂತಹ ಸುರಕ್ಷಿತ ನಗರವನ್ನಾಗಿ ಬೆಂಗಳೂರನ್ನು ರೂಪಿಸುವುದು. ಪ್ರಜಾಸಕ್ತತೆಯ ಎಲ್ಲಾ ಹಂತಗಳಲ್ಲಿ ಸೂಕ್ತ ಅಭ್ಯರ್ಥಿಳನ್ನು ಗುರುತಿಸಿ ಬೆಂಬಲಿಸುವುದಾಗಿದೆ. https://bpac.in/kannada/


Post a Comment

0Comments

Post a Comment (0)