ನೇಪಾಳದಲ್ಲಿ ಚಿನ್ನದ ಪದಕ ವಿಜೇತ ಕಬ್ಬಡಿ ತಂಡಕ್ಕೆ ಸ್ವಾಗತ - SHIKSHANA RATNA

Breaking

Post Top Ad

Responsive Ads Here

Tuesday, 22 November 2022

ನೇಪಾಳದಲ್ಲಿ ಚಿನ್ನದ ಪದಕ ವಿಜೇತ ಕಬ್ಬಡಿ ತಂಡಕ್ಕೆ ಸ್ವಾಗತ

ಬೆಂಗಳೂರು : ನೇಪಾಳದ ಪೊಕರದಲ್ಲಿ ಇದೇ ನವೆಂಬರ್‌ 16 ರಿಂದ  19 ರವರೆಗೂ ನಡೆದ ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ 40-50 ವರ್ಷಗಳ ವಯೋಮಾನದವರ ವಿಭಾಗದಿಂದ ನಮ್ಮ ಬೆಂಗಳೂರಿನ ಮಹಿಳಾ ತಂಡವು ಭಾರತವನ್ನು ಪ್ರತಿನಿಧಿಸಿ ಕಬ್ಬಡಿ ಪಂದ್ಯಾವಳಿಯಲ್ಲಿ ನೇಪಾಳ ತಂಡವನ್ನು ಮಣಿಸಿ ಚಿನ್ನದ ಪದಕವನ್ನು ಗೆದ್ದು ಮರಳಿದ ತರಭೇತುದಾರ ಎಸ್. ಮಂಜುನಾಥ್ ನೇತೃತ್ವದ  ತಂಡದ ಸದಸ್ಯರನ್ನು  ಬೆಂಗಳೂರಿನ ಕೆಂಪೇಗೌಡ  ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯರು ಹಾಗೂ ಮಾತಾ ಸ್ಪೋರ್ಟ್ಸ್  ಕ್ಲಬ್‌ ಅಧ್ಯಕ್ಷರು ಆಗಿರುವ ಡಾ.ಜಿ.ಎಸ್.ಚೌಧರಿರವರ ನೇತೃತ್ವದಲ್ಲಿ  ಹೂಗುಚ್ಛಗಳನ್ನು ನೀಡಿ  ಬರಮಾಡಿಕೊಂಡರು. ಈ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಆರ್ಥಿಕ ನೆರವನ್ನು ಖ್ಯಾತ  ಚಿತ್ರನಿರ್ಮಾಪಕರು ಹಾಗೂ ಸಮಾಜ ಸೇವಕರಾದ ಸುರೇಶ್ ಗೌಡರು ಹಾಗೂ ಅವರ ಅಭಿಮಾನಿಗಳು ಪ್ರಾಯೋಜಿಸಿದ ತಂಡದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸೇವಾನಿರತರಾಗಿರುವ ಸಿ.ಶೋಭಾ, ದಾಕ್ಷಾಯಿಣಿ, ಸುಧಾಮಣಿ, ಇಂದ್ರಮ್ಮ, ಸುಮಿತ್ರ, ರಜಿಯಾ, ನೂರಜಹಾನ್, ಖಾಸಗಿ ಸಂಸ್ಥೆಗಳಲ್ಲಿ ಸೇವಾನಿರತ ಸಿ.ಮಮತ, ಮಂಜುಳ, ಲಕ್ಷ್ಮೀಬಾಯಿ, ಜ್ಯೋತಿ,  ರೇಖಾ  ಮುಂತಾದ ಆಟಗಾರರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸದಸ್ಯರಲ್ಲಿ ಆನಂದಜ್ಯೋತಿ ಸೇವಾ ಟ್ರಸ್ಟ್‌ ನ ಸಂಸ್ಥಾಪಕರು ಶಿವಾಜಿರಾವ್,

ಮಂಜುನಾಥ್, ಮಂದೀಪ್, ಧನಂಜಯ್, ಸುನೀಲ್ ಮುಂತಾದವರಿದ್ದರು.

No comments:

Post a Comment

Post Bottom Ad

Responsive Ads Here

Pages