ಶಿಕ್ಷಕ ಸಮೂಹಕ್ಕೆ ಸ್ವಾಭಿಮಾನದ ಬದುಕುಕಟ್ಟಿಕೊಟ್ಟವರು ಹೊರಟ್ಟಿಯವರು - ಸಚಿವೆ ಶಶಿಕಲಾ ಜೊಲ್ಲೆ

varthajala
0

ಬೆಂಗಳೂರು, ಡಿಸೆಂಬರ್ 26 (ಕರ್ನಾಟಕ ವಾರ್ತೆ) : 1970-80ರ ದಶಕದ ಹಿಂದೆ ಶಿಕ್ಷಕರ ಸಮೂಹ ಸೇವಾಭದ್ರತೆಯಿಲ್ಲದೆ ದೈನಂದಿನ ಬದುಕನ್ನು ಕಳೆಯುವಂತಹ ಕಾಲ ಆ ಕಾಲದಲ್ಲಿ ಉದಯಿಸಿ ಬಂದವರೇ ಬಸವರಾಜ ಹೊರಟ್ಟಿಯವರು. ತಮ್ಮ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಶಿಕ್ಷಕರಿಗಾಗಿಯೇ ಹೋರಾಡುವ ಮೂಲಕ ಶಿಕ್ಷಕ ಸಮೂಹಕ್ಕೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟವರು ಸಭಾಪತಿ ಬಸವರಾಜ ಹೊರಟ್ಟಿಯವರು. ಇವರ ಹೋರಾಟವೇ ನಮಗೆಲ್ಲ ಸ್ಪೂರ್ತಿ ಇಂತಹವರನ್ನು ಗೌರವಿಸುವುದು ಎಂದರೆ ನಮಗೆಲ್ಲ ಹೆಮ್ಮೆ ಹಾಗೂ ಅಭಿಮಾನ ಎಂದು ಹೇಳಿದ ಮುಜರಾಯಿ, ಹಜ್ ಮತ್ತು ವಕ್ಫ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಹೊರಟ್ಟಿಯವರನ್ನು ಗೌರವಿಸಿ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಡಾ.ಬಸವರಾಜ ಧಾರವಾಡ, ಶಂಕ್ರೇಗೌಡ, ಅಶೋಕ ಜೈನ್, ಜಿ.ಆರ್.ಭಟ್, ಶ್ಯಾಮ ಮಲ್ಲನಗೌಡ್ರ ಎಸ್.ಎಂ.ಹುದ್ದಾರ, ರಾಜೇಂದ್ರರೆಡ್ಡಿ ರಾಜಣ್ಣ ಕೊರವಿ, ರಾಮಣ್ಣ ಮುಳ್ಳೂರ, ಪ್ರಾಣೇಶ, ವಿಜಯ ಹಬೀಬ, ಎಚ್.ಟಿ.ಬಣಕಾರ, ಬೆಟ್ಟಳ್ಳಿಯವರ ಸೇರಿದಂತೆ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದ ವರೆಗಿನ ವಿವಿಧ ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Post a Comment

0Comments

Post a Comment (0)