ವಸತಿ ಶಾಲೆಯ ವಿದ್ಯುತ್ ಶಾಕ್‍, ಮೃತಪಟ್ಟ ವಿದ್ಯಾರ್ಥಿಗೆಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ

varthajala
0

ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ: ಗೋವಿಂದ ಕಾರಜೋಳ

ಬೆಳಗಾವಿ ಸುವರ್ಣಸೌಧ,ಡಿ.28(ಕರ್ನಾಟಕ ವಾರ್ತೆ): ಡಿಸೆಂಬರ 25ರ ಭಾನುವಾರ ವಿದ್ಯುತ್ ಶಾಖ್‍ನಿಂದ ಮೃತಪಟ್ಟ ನಂಜನಗೂಡು ವಸತಿ ಶಾಲೆ ವಿದ್ಯಾರ್ಥಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಹಾರ ವಿತರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದರು.
ವಿಧಾನ ಮಂಡಳದಲ್ಲಿ ಬುಧವಾರ ಶಾಸಕ ಡಾ. ಯತೀಂದ್ರ ಅವರು ನಂಜನಗೂಡು ವಸತಿ ಶಾಲೆಯ ಯುವಿನ ಎಂಬ ವಿಧ್ಯಾರ್ಥಿ, ದೈಹಿಕ ಶಿಕ್ಷಕರಿಗೆ ಕುಡಿಯುವ ನೀರು ತರಲು ಹೋದಾಗ  ವಿದ್ಯುತ್ ತಂತಿ ತಾಕಿ ಅಸುನೀಗಿದ್ದಾನೆ. ಆ ವಿಧ್ಯಾರ್ಥಿ ಕುಟುಂಬಕ್ಕೆ ಪರಿಹಾರ ನೀಡಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಕ್ರೈಸ್ ಸಂಸ್ಥೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದಾಗ
  ಪ್ರತಿಕ್ರಿಯಿಸಿದ ಸಚಿವರು ಶೀಘ್ರವೇ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ವಿತರಿಸಲಾಗುವುದು ಈಗಾಗಲೇ ಈ ಸಂಬಂಧ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದ್ದು ನಿರ್ಲಕ್ಷ್ಯದ ಬಗೆಗೆ ತನಿಖೆ ನಡೆಸಲಾಗುತ್ತಿದೆ. ಹಾಗೂ ವಸತಿ ಶಾಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚಿಸಲಾಗಿದೆ ಎಂದರು.

Post a Comment

0Comments

Post a Comment (0)