ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ

varthajala
0

ವಾರ್ತಾಜಾಲ,ಶಿಡ್ಲಘಟ್ಟ : ಸಮರ್ಪಕವಾಗಿ ಬಸ್ ಸೇವೆ ಇಲ್ಲದೇ ಇರುವುದರಿಂದ ತಾಲೂಕಿನ ಹಲವು ಗ್ರಾಮಗಳಿಂದ ನಗರಕ್ಕೆ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾದ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಮಾನವ ಹಕ್ಕುಗಳ ಕಮಿಟಿ ವತಿಯಿಂದ ರಸ್ತೆ ತಡೆದು ಪ್ರತಿಭಟಿಸಿದರು.

ನಗರದ ಪ್ರವಾಸಿ ಮಂದಿರದಿಂದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದವರೆಗೂ ವಿದ್ಯಾರ್ಥಿಗಳು ಹಾಗೂ ಮಾನವ ಹಕ್ಕಗಳ ಕಮಿಟಿಯ ರಾಜ್ಯ ಸಂಸ್ಥಾಪಕ, ಅಧ್ಯಕ್ಷ ಸಿ.ಎಂ ಭೈರೇಗೌಡ ಕಾಲ್ನಡಿಗೆ ಮೂಲಕ ಜಾಥಾ ಮಾಡಿ ಸಾರಿಗೆ ಸಂಸ್ಥೆ ವಿರುದ್ದ ಭುಗಿಲೆದ್ದರು.
ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ದಿಬ್ಬೂರಹಳ್ಳಿಯಿಂದ ಅನೆಮೊಡಗು,ಚೌಡರೆಡ್ಡಿಹಳ್ಳಿ,ಟಿ.ಪೆದ್ದನಹಳ್ಳಿ ಹಾಗೂ ಚಿಕ್ಕತೇಕಹಳ್ಳಿ ಗ್ರಾಮಗಳ  ಬಡ ವಿದ್ಯಾರ್ಥಿಗಳು, ರೈತರ ಮಕ್ಕಳಿಗೆ ಪ್ರತಿನಿತ್ಯ ಪಿಕಪ್-ಡ್ರಾಪ್ ಸೌಲಭ್ಯ ಕನಸಲ್ಲೂ ಕಾಣಲು ಸಾದ್ಯವಾಗುತ್ತಿಲ್ಲ. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೆಳಗ್ಗೆ 8:30 ಹಾಗೂ 10:30 ಕ್ಕೆ ಈ ಎರಡು ಸಮಯ ಬಿಟ್ಟರೆ, ಸಾರಿಗೆ ಸಂಪರ್ಕವೇ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ, ಅವರ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯೂ ಅಡಚಣೆಯಾಗಬಾರದು, ಅವರ ಓದಿಗೆ ಹಾಗೂ ಶಾಲಾ ಕಾಲೇಜಿಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಸೂಕ್ತವಾದ ಸರ್ಕಾರಿ ಬಸ್ ಸೇವೆ ಒದಗಿಸಿಕೊಡಲು ನಾವು ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವು. ಅಧಿಕಾರಿಗಳಾದ ಲಕ್ಷ್ಮೀಪತಿ ಅವರು ನಗರದ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಪ್ರದೇಶಗಳಾದ ಬಶೆಟ್ಟಹಳ್ಳಿ ಹಾಗೂ ಆನೆಮೊಡಗು ಸುತ್ತಮುತ್ತಲಿನ ಗ್ರಾಮಗಳಿಗೂ ಬೇಟಿ ನೀಡಿ ಸಮಸ್ಯೆಗಳಿಗೆ ಸೋಮವಾರದಿಂದ ಸರಿಯಾದ ಸಮಯಕ್ಕೆ ಹಾಗೂ ಹೆಚ್ಚುವರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಒಂದು ಅಂದು ಬಸ್ ಬರಲಿಲ್ಲವೆಂದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಮಾನವ ಹಕ್ಕಗಳ ಕಮಿಟಿಯ ರಾಜ್ಯ ಸಂಸ್ಥಾಪಕ, ಅಧ್ಯಕ್ಷ ಸಿ.ಎಂ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ದೇವನಹಳ್ಳಿಯ ಸಾದಹಳ್ಳಿ ಗೇಟ್ ಬಳಿ ಪ್ರತಿಯೊಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸುವಂತೆ, ಗ್ರಾಮೀಣ ಪ್ರದೇಶದ ಭಾಗಗಳಿಗೆ ಸಮಯಕ್ಕೆ ಸರಿಯಾಗಿ ಹಾಗೂ ಹೆಚ್ಚಿನ ಬಸ್ ಸೇವೆಗಳನ್ನು ಒದಗಿಸಿಕೊಡುತ್ತೇನೆ.
ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಲಕ್ಷ್ಮೀಪತಿ

Post a Comment

0Comments

Post a Comment (0)