ಎಲ್ಲಾ ಸಮಾಜದವರು ಸೌಹಾರ್ದತೆಯಿಂದ ಇರಲು ಅಗತ್ಯ ಕ್ರಮ*: ಸಿಎಂ ಬೊಮ್ಮಾಯಿ

varthajala
0

ಹುಬ್ಬಳ್ಳಿ, ಡಿಸೆಂಬರ್ 23 :ಎಲ್ಲಾ  ಸಮಾಜದವರು  ಅಣ್ಣ ತಮ್ಮಂದಿರಂತೆ ಸೌಹಾರ್ದತೆಯಿಂದ ಇರಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು  ಬೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. 

ದರ್ಗಾ ಸ್ಥಳಾಂತರ ವೀಕ್ಷಿಸಲು  ಬಂದಿದ್ದು, ದರ್ಗಾ ಮುಖ್ಯಸ್ಥರಾದ ಅಲ್ತಾಫ್ ಅವರು ಸಹಕಾರ ನೀಡಿ, ಸ್ಥಳಾಂತರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಿದೆ ಎಂದು ಅವರಿಗೆ ಧನ್ಯವಾದಗಳನ್ನು ತಿಳಿಸಿದ ಮುಖ್ಯಮಂತ್ರಿಗಳು, ಹೊಸ ಮಸೀದಿ ಕಟ್ಟಲು ತೀರ್ಮಾನಿಸಿದ ನಂತರ ಎಲ್ಲ ಸಹಕಾರ ನೀಡುವುದಾಗಿ ಅವರಿಗೆ  ತಿಳಿಸಲಾಗಿದೆ ಎಂದರು. 

*ಅನಿವಾರ್ಯ*

 ನಾಗರೀಕತೆ, ಅವಶ್ಯಕತೆಗಳು ಬೆಳೆದಂತೆ ಇಂಥ ಹಲವಾರು ಪ್ರಕರಣಗಳು ಬಂದಿವೆ. ಕೆಲವು ದೇವಸ್ಥಾನಗಳು ಇವೆ. ಇದೇ  ರಸ್ತೆಯಲ್ಲಿ 13 ದೇವಸ್ಥಾನ ಗಳನ್ನು ಕೆಡದವಲಾಗಿದೆ. ಇದು ನೋವಿನ ಸಂಗತಿಯಾದರೂ ಅನಿವಾರ್ಯ ವಾಗಿದೆ. ಎಲ್ಲರ ಸಹಕಾರದೊಂದಿಗೆ ಮಾಡಬೇಕಾಗುತ್ತದೆ. ಸುಪ್ರೀಂ ಕೋರ್ಟ್ ನ ಕಟ್ಟುನಿಟ್ಟಿನ ಆದೇಶದ ಮೇರೆಗೆ  ಇಡೀ ರಾಜ್ಯದಲ್ಲಿ ಈ ರೀತಿ ಕ್ರಮ ಕೈಗೊಳ್ಳಲಾಗಿದೆ. ಆದಷ್ಟೂ ಉಳಿಸುವ ಪ್ರಯತ್ನ. ಮೊದಲನೇ ಆದ್ಯತೆ. ಇಲ್ಲದಿದ್ದರೆ ಸ್ಥಳಾಂತರ ಕ್ಕೆ ಅವಕಾಶ ನೀಡಬೇಕು. ಮೈಸೂರಿನ ಲ್ಲಿಯೂ ಇದೆ ರೀತಿ ರಕ್ಷಣೆ ನೀಡಲಾಗಿತ್ತು.   ರಸ್ತೆಯೊಳಗೆ ಬರುವ ದೇವಸ್ಥಾನಗಳನ್ನು ಹಂತ ಹಂತವಾಗಿ ತೆರವು ಮಾಡಿಸಲಾಗುವುದು  ಎಂದು ಹೇಳಿದರು.

Post a Comment

0Comments

Post a Comment (0)