2021ನೇ ಸಾಲಿನ ಸಂಸ್ಕೃತ ಗ್ರಂಥ ಪುರಸ್ಕಾರ ನೀಡುವ ಬಗೆಗೆ.

varthajala
0

 ಕರ್ನಾಟಕ ರಾಜ್ಯದಲ್ಲಿ ಸಂಸ್ಕೃತ ಶಿಕ್ಷಣ ಮತ್ತು ಸಂಶೋಧನೆಗಳ ಬಲವರ್ಧನೆಗಾಗಿ ರಾಜ್ಯ ಸರ್ಕಾರವು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ವಿಶ್ವವಿದ್ಯಾಲಯವು ಪದವಿಗಳನ್ನು ನೀಡುವುದರ ಜೊತೆಗೆ ಸಂಸ್ಕೃತ ಭಾಷೆಯ ಪ್ರಸಾರ-ಅಭಿವೃದ್ಧಿಗಳ ದೃಷ್ಠಿಯಿಂದ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವುಗಳಲ್ಲಿ ಗ್ರಂಥಪುರಸ್ಕಾರ ಯೋಜನೆಯೂ ಒಂದು.


 ಕರ್ನಾಟಕ ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯ ರಚನೆ/ಗ್ರಂಥ ರಚನೆ ಮತ್ತು ಪ್ರಕಾಶನದ ಉದ್ಯಮವು ಬಹಳ ದೀರ್ಘ ಇತಿಹಾಸವನ್ನು ಹೊಂದಿದೆ. ಇಂದಿಗೂ ಅನೇಕ ವಿದ್ವಾಂಸರು ಸಂಸ್ಕೃತ ವಾಙ್ಮಯದ ಗದ್ಯ, ಪದ್ಯ ಇತ್ಯಾದಿ ಪ್ರಕಾರಗಳ ರಚನೆಯಲ್ಲಿ ತೊಡಗಿದ್ದಾರೆ. ಅನೇಕ ಯುವಪ್ರತಿಭೆಗಳೂ ಇಂಥ ಗ್ರಂಥರಚನೆಯಲ್ಲಿ ತಮ್ಮ ಕೌಶಲ್ಯ ತೋರಿಸುತ್ತಿದ್ದಾರೆ. ಪ್ರತಿವರ್ಷ ಸಂಸ್ಕೃತವಾಙ್ಮಯ ಪ್ರಪಂಚಕ್ಕೆ ಕರ್ನಾಟಕ ರಾಜ್ಯದ ಗ್ರಂಥಕರ್ತೃಗಳ ಕೊಡುಗೆಯೂ ಗಣನೀಯವಾಗಿದೆ. ಇಂತಹÀ ಸೃಜನಶೀಲರಚನೆಗಳಿಗೆ ರಾಜ್ಯಮಟ್ಟದಲ್ಲಿ ಯಾವುದೇ ಪ್ರೋತ್ಸಾಹ ಪುರಸ್ಕಾರಗಳು ದೊರಕುತ್ತಿಲ್ಲ.

 ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು 2010-11ನೇ ಸಾಲಿನಿಂದ ‘’ಗ್ರಂಥ ಪುರಸ್ಕಾರ ಯೋಜನೆ’’ ಯನ್ನು ಆರಂಭಿಸಿ, ಕಳೆದ “ಹತ್ತು ವರ್ಷಗಳಿಂದ’’ ಸಮಕಾಲೀನ ಉತ್ತಮ ಸಂಸ್ಕೃತ ಗ್ರಂಥಗಳಿಗೆÀ ಪುರಸ್ಕಾರ ನೀಡುತ್ತಾ ಬಂದಿದೆ. ಪುರಸ್ಕಾರವು ಒಂದು ಪ್ರಶಸ್ತಿಪತ್ರ, ಫಲಕ, ಶಾಲು ಮತ್ತು 10000/-ರೂ.ಗಳ ಗೌರವಧನವನ್ನು ಒಳಗೊಂಡಿದೆ. ಪ್ರಸ್ತುತ 2021ನೇ ಸಾಲಿನ ಗ್ರಂಥ ಪುರಸ್ಕಾರಕ್ಕೆ ಅರ್ಹ ಗ್ರಂಥಗಳನ್ನು ಆಹ್ವಾನಿಸಲಾಗಿದೆ. ಲೇಖಕರು ತಮ್ಮ ಕೃತಿಗಳನ್ನು 2023 ಜೂನ್ 28ರೊಳಗೆ “ಉಪ ನಿರ್ದೇಶಕರು, ಪ್ರಸಾರಾಂಗ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 18” ಈ ವಿಳಾಸಕ್ಕೆ ಕಳುಹಿಸಲು ಕೋರಿದೆ. ಕಳೆದ 2018ನೇ ಇಸವಿಯಿಂದ ಐದು ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುವುದು.

 ವಿಶ್ವವಿದ್ಯಾಲಯದ ಅಂತರ್ಜಾಲತಾಣ ತಿತಿತಿ.ಞsu.ಚಿಛಿ.iಟಿನಲ್ಲಿ ‘ಸಂಸ್ಕೃತ ಗ್ರಂಥ ಪುರಸ್ಕಾರ ಯೋಜನೆ’ ಯ ಸಂಪೂರ್ಣ ವಿವರ ಲಭ್ಯವಿದೆ.

ವಾಙ್ಮಯ ಪ್ರಕಾರಗಳು

1. ಕಾದಂಬರಿ/ಕಥಾ ಸಾಹಿತ್ಯ

2. ಗದ್ಯ/ಪದ್ಯ/ಕಾವ್ಯ. ನಾಟಕ ಸಾಹಿತ್ಯ

3. ಗ್ರಂಥಸ0ಪಾದನ ಸಾಹಿತ್ಯ

4. ಪ್ರಬಂಧ ವಿಮರ್ಶನ ಸಾಹಿತ್ಯ ವಿಜ್ಞಾನ ಸಾಹಿತ್ಯ

5. ಇತರ ಭಾಷೆಗಳಿಂದ ಸಂಸ್ಕೃತಕ್ಕೆ ಅನುವಾದ

6. ಶಾಸ್ತಿçಯ ಗ್ರಂಥದ ಕನ್ನಡ ಅನುವಾದ 

7. ಸಂಸ್ಕೃತದ ಅತ್ಯುತ್ತಮ ಸಂಶೋಧನಾ ಪ್ರಬಂಧ (ಪಿಹೆಚ್‌ಡಿ) ವಿದ್ಯಾವಾರಿಧಿ

8. ಅತ್ಯುತ್ತಮ ಇಂಡಾಲಜಿ ವಿಮರ್ಶ ಗ್ರಂಥ ಅಥವಾ ಲೇಖನ ಸಂಗ್ರಹ

9. ಸಂಶೋಧನಾ ವಿದ್ಯಾರ್ಥಿಗಳ ಅತ್ಯುತ್ತಮ ಸಂಶೋಧನಾ ಲೇಖನ (ಸುದೀರ್ಘ-100 ಪುಟಗಳು)

10. ಶಿಕ್ಷಕರ ಅತ್ಯುತ್ತಮ ಸಂಶೋಧನಾ ಲೇಖನ(100 ಪುಟಗಳು) 

ಈ ಅರ್ಹ ಗ್ರಂಥಗಳನ್ನು ವಿದ್ವಾಂಸರು ಅಥವಾ ಯಾವುದೇ ಸಂಸ್ಥೆಯ ಪದಾಧಿಕಾರಿಗಳು ನಾಮ ನಿರ್ದೇಶನ ಮಾಡಿ ಗ್ರಂಥದ ಮೂರು ಪ್ರತಿಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸುವುದು.

• ಈ ಹಿಂದೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಗ್ರಂಥ ಪುರಸ್ಕಾರವನ್ನು ಸ್ವೀಕರಿಸಿದವರು ಪುನಃ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

• ಗ್ರಂಥ ಪುರಸ್ಕಾರಕ್ಕೆ ಸಲ್ಲಿಸುವ ಗ್ರಂಥವು 100 ಪುಟಗಳಿಗಿಂತ ಹೆಚ್ಚಿರಬೇಕು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಡಾ. ಗೋವಿಂದ ಬಿ. ಉಪ ನಿರ್ದೇಶಕರು ಪ್ರಸಾರಾಂಗ, ಕಸಂವಿ, ಬೆ-18. ಮೊಬೈಲ್ ನಂಬರ್: 9632079891 

ಡಾ. ಮಲ್ಲನ ಗೌಡ ಎಸ್., ಸಹಾಯಕ ನಿರ್ದೇಶಕರು, ಪ್ರಸಾರಾಂಗ, ಕಸಂವಿ, ಬೆ-18. ಮೊಬೈಲ್ ನಂಬರ್: 9341090772

ಇ-ಮೆಲ್:- prasarangaksu@gmail.com

ದೂರವಾಣಿ:- 080 26701303, 26705387, ಮೊಬೈಲ್ ನಂಬರ್: 9632079891

Tags

Post a Comment

0Comments

Post a Comment (0)