ಮೊಟ್ಟಮೊದಲ ಬಾರಿಗೆ ಮೈಸೂರಿನಲ್ಲಿ STEM ಪ್ರಯೋಗಾಲಯ

varthajala
0

ಅಭ್ಯುದಯವು ಮೊಟ್ಟಮೊದಲ ಬಾರಿಗೆ ಮೈಸೂರಿನಲ್ಲಿ  STEM ಪ್ರಯೋಗಾಲಯವನ್ನು ಸ್ಥಾಪಿಸುತ್ತಿದ್ದು, ಮೊದಲನೇ ಹಂತದಲ್ಲಿ ಜುಲೈ 26 ರಂದು ಮೈಸೂರಿನ  ಟಿ ಎಸ್ ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಉಚಿತ STEM ಪ್ರಯೋಗಾಲಯವನ್ನು ಸ್ಥಾಪಿಸಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಗಣಪತಿ ಹೆಗ್ಡೆ (KKSS ಕಾರ್ಯದರ್ಶಿ), ಡಾ.ಚಂದ್ರಶೇಖರ್ (ಟಿ ಎಸ್ ಸುಬ್ಬಣ್ಣ ಸಾರ್ವಜನಿಕ ಶಾಲೆಯ ಧರ್ಮದರ್ಶಿ),  ಶ್ರೀ ರಾಜಣ್ಣ,ಪ್ರೊ.ವಸಂತಮ್ಮ,ಶ್ರೀ ನಾಗು ನಾಯಕ್, ಶ್ರೀ ಹರೀಶ್ ಉಪಸ್ಥಿತರಿದ್ದರು.




 ಜೊತೆಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ನಟರಾಜ್ ಹಾಗೂ ಶಾಲೆಯ ಆಡಳಿತ ಮಂಡಳಿ,ಶ್ರೀ ಸತೀಶ್, ಶ್ರೀ ಗುರು, ಶ್ರೀ ಸಿದ್ದೇ ಗೌಡ್ರು, ಶ್ರೀ ಶ್ಯಾಮಸುಂದರ್, ಶ್ರೀ ಗಣೇಶ್, ಶ್ರೀಮತಿ ಆರತಿ ಹಾಗೂ ಮೈಸೂರು ಅಭ್ಯುದಯದ ಉಸ್ತುವಾರಿ ಶ್ರೀ ಬೆಳ್ಳೂರ್‌ ಪಣೀಂದ್ರ ಮತ್ತು  ಮೈಸೂರು ಅಭ್ಯುದಯದ ಸಂಯೋಜಕರು ಶ್ರೀ ಮನೀಶ್‌, ಸ್ಟೆಮ್‌ instructor ಶ್ರೀ ಮುರಳಿ ಮತ್ತಿತರರು ಭಾಗಿಯಾಗಿದ್ದರು. 


ಈ  ಕಾರ್ಯಕ್ರಮದಲ್ಲಿ KKSS ಕಾರ್ಯದರ್ಶಿಯಾದ ಶ್ರೀ ಗಣಪತಿ ಹೆಗ್ಡೆ ರವರು ಪ್ರಕೃತಿ ಮತ್ತು ದೇಶದ ರಕ್ಷಣೆಯನ್ನು ಕುರಿತು ಮಾತನಾಡಿದರು.ಮಕ್ಕಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಪ್ರೊ.ವಸಂತಮ್ಮ ಮಾತನಾಡಿದರು. ಶ್ರೀ ಟಿ.ಎಸ್.ಸುಬಣ್ಣರವರು ಸಂಘಟಕರಾಗಿದ್ದು, ಸಮಾಜದಲ್ಲಿ ಆರ್ಥಿಕ ದುರ್ಬಲದವರು ಮತ್ತು ಹಳ್ಳಿಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು “ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಶಾಲೆ”ಯನ್ನು ನಿರ್ಮಿಸಿದರು, ಎಂದು ಹೇಳುತ್ತಾ  ಶ್ರೀ ರಾಜಣ್ಣನವರು ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜಕ್ಕೆ ಏನಾದರೂ ಸಕ್ರಿಯವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.          

ಟಿ ಎಸ್ ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯ STEM ಪ್ರಯೋಗಾಲಯಕ್ಕೆ- Compound Microscope, Telescope Brass, Solar Lunar Eclipse Model, Human Torso Model, Skeleton Model With Stand, Geometrical Box Wooden, Solar System Model, Day And Night Model, Human Model - Heart, Ear, Eye, Brain, Lungs, Digestive System, Respiratory System, Heart Pump, Newton’s 1st, 2nd, And 3rd Law Model, Junior Kit Mathematics, ಇತ್ಯಾದಿಗಳನ್ನು ನೀಡಲಾಗಿದೆ.

ಅಭ್ಯುದಯವು STEM ಪ್ರಾಜೆಕ್ಟ್ ಗಳನ್ನು ಮಾಡಲಾಗುತ್ತಿದ್ದು, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತವನ್ನು STEM ಎನ್ನಲಾಗುತ್ತದೆ, STEM ಶಿಕ್ಷಣವು ವಿದ್ಯಾರ್ಥಿಗಳ ಕೌಶಲ್ಯಗಳನ್ನು ಅಭಿವೃದ್ದಿಪಡಿಸುವುದು ಮತ್ತು ಈ ವಿಷಯ ಕ್ಷೇತ್ರಗಳನ್ನು ಸಂಪರ್ಕಿಸುವುದು, ಭವಿಷ್ಯದ ವೃತ್ತಿ ಮತ್ತು ನೈಜ ಪ್ರಪಂಚಕ್ಕಾಗಿ ಅವರನ್ನು ಸಿದ್ಧಪಡಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಇಲ್ಲಿ ಅಟಲ್ ಟಿಂಕರಿಂಗ್, ರೊಬೊಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ಇತ್ಯಾದಿ ಮೌಲ್ಯಯುತ  ಪ್ರಯೋಗಗಳನ್ನು ಮಾಡಲಾಗುತ್ತದೆ. 

ಅಭ್ಯುದಯವು ಭಾರತದಾದ್ಯಂತ, ಜಮ್ಮು&ಕಾಶ್ಮೀರ್, ಮಣಿಪುರ, ಅರುಣಾಚಲ ಪ್ರದೇಶ, ಕೇರಳ ಮತ್ತು ಕರ್ನಾಟಕ ಸೇರಿದಂತೆ 42 ಶಾಲೆಗಳಲ್ಲಿ STEM ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಈ ಒಂದು ಲ್ಯಾಬ್ ಗಳಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಬಳಸಿಕೊಂಡು ವಿಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು, ಗುಣಮಟ್ಟದ ಶಿಕ್ಷಣವನ್ನು ಸಾಧಿಸುವುದೇ ಅಭ್ಯುದಯದ ಮುಖ್ಯ ಉದ್ದೇಶವಾಗಿದೆ.

ಕೇಶವ ಕೃಪಾ ಸಂವರ್ಧನ ಸಮಿತಿ(KKSS) 1963ರಲ್ಲಿ  ಕರ್ನಾಟಕದ ಸೊಸೈಟೀಸ್ ಆಕ್ಟ್ ಅಡಿಯಲ್ಲಿ ನೋಂದಾಯಿಸಲಾಗಿದೆ, NGO ನಂತೆ ವಿವಿಧ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಅಭ್ಯುದಯವು, KKSSನ ಒಂದು ಪ್ರಕಲ್ಪವಾಗಿದ್ದು, 2004 ರಲ್ಲಿ 12 ವಿದ್ಯಾರ್ಥಿಗಳೊಂದಿಗೆ ತನ್ನ ಮೊದಲ ಉಚಿತ ಕಲಿಕಾ ಕೇಂದ್ರವನ್ನು(FLC) ಪ್ರಾರಂಭಿಸಿತು. ಪ್ರತೀ ವರ್ಷ, ಅಭ್ಯುದಯವು 4000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ  ತರಬೇತಿಯನ್ನು ನೀಡುತ್ತಿದೆ. ಸುಸ್ಥಿರ ಸಮಾಜ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಹಳ್ಳಿಗಳಲ್ಲಿ ಮತ್ತು ಸೇವಾ ಬಸತಿಗಳಲ್ಲಿ 160ಕ್ಕೂ ಹೆಚ್ಚು ಕಲಿಕಾಕೇಂದ್ರಗಳಲ್ಲಿ(FLC) ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಜೀವನದ ಕೌಶಲ್ಯ-ಮೌಲ್ಯಗಳ ಹಾಗೂ ಆರೋಗ್ಯ ಮತ್ತು ಸ್ವಚ್ಚತೆಯ ಬಗ್ಗೆ ಜಾಗೃತಿಯನ್ನು ಮೂಡಿಸಿ ಸಮಗ್ರ ಶಿಕ್ಷಣವನ್ನು ನೀಡಲಾಗುತ್ತಿದೆ. ಶಿಕ್ಷಣವನ್ನುಸಮಗ್ರವಾಗಿ ನೀಡಬೇಕಾಗಿರುವುದರಿಂದ ಸಾಮಾಜಿಕವಾಗಿ ವಂಚಿತರಾದ ಮಕ್ಕಳು, ಅವರ ಕುಟುಂಬಗಳು ಮತ್ತು ಸಮುದಾಯಗಳೇ ಅಭ್ಯುದಯದ ಕೇಂದ್ರಬಿಂದು. ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ ಎಂದು ನಾವು ನಂಬುತ್ತೇವೆ.

Tags

Post a Comment

0Comments

Post a Comment (0)