ಹಲ್ಮಿಡಿ ಶಾಸನದ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಶೇಷ ಕಾರ್ಯಕ್ರಮ – ನಾಡೋಜ ಡಾ. ಮಹೇಶ ಜೋಶಿ

varthajala
0

ಬೆಂಗಳೂರು: ಕನ್ನಡ ಸಾಹಿತ್ಯಇತಿಹಾಸ, ಸೇರಿದಂತೆ ಭಾಷೆ ಸಂಸ್ಕೃತಿಯ ಮೂಲ ತಿಳಿಯುವ ಅವಶ್ಯಕತೆ ಇದೆ. ಅವುಗಳೆಲ್ಲವೂ ದಾಖಾಲಾಗಿರುವುದು ನಮ್ಮಲ್ಲಿಯ ಶಾಸನಗಳಲ್ಲಿ. ಅದನ್ನು ಅರಿಯಲು ಕನ್ನಡ ಶಾಸನಗಳ ಅಧ್ಯಯನ ಮುಖ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು.

            ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಶಾಸನಶಾಸ್ತ್ರ ಡಿಪ್ಲೋಮಾ ತರಗತಿಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಕನ್ನಡ ಶಾಸನಗಳ ಅಧ್ಯಯನ ಹಾಗೂ ಶೋಧ ಕಾರ್ಯಕ್ಕೆ ಪರಿಷತ್ತು ಹೆಚ್ಚಿನ ಒತ್ತು ನೀಡಲಿದೆ. ಕನ್ನಡ ಮೊದಲ ಶಾಸನವಾಗಿರುವ ಹಲ್ಮಿಡಿ ಶಾಸನದ ಕುರಿತು  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲ್ಲಿದ್ದೇವೆ. ಇತಿಹಾಸ ಸಂಶೋಧನೆಗೆ ಶಾಸನಗಳ ಅಧ್ಯಯನ ತುಂಬಾ ಅಗತ್ಯವಾಗಿದೆ. ಅದಕ್ಕಾಗಿ ಪರಿಷತ್ತು ಶಾಸನ ಶಾಸ್ತ್ರ ಅಧ್ಯಯನ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಮುಂದುವರೆಯಲಿದ್ದಾರೆ ಎನ್ನುವ ಭರವಸೆ ಇದೆ ಎಂದ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟರು.



            ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಡಿಪ್ಲೋಮಾ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ವಿದ್ಯಾರ್ಥಿ ಶ್ರೀ ಕೃಷ್ಣ ಖಾನಾಪೂರ ಅವರು ಇಲ್ಲಿರುವ ಅಧ್ಯಾಪಕರೆಲ್ಲರೂ ಶಾಸನಗಳ ಹುಡುಕಾಟ, ಅಧ್ಯಯನಗಳಲ್ಲಿ ನಿರತರಾಗಿರುತ್ತಾರೆ. ಈ ಮಧ್ಯ  ಆಸಕ್ತ ವಿದ್ಯಾರ್ಥಿಗಳಿಗೆ ಶಾಸನ  ಲಿಪಿಗಳ ಬಗ್ಗೆ ಹಾಗೂ ಶಾಸನಗಳ ಬಗ್ಗೆ ಕೂಲಂಕುಷವಾಗಿ  ಕಲಿಸಿದ್ದಾರೆ. ಅವರು ಕೊಟ್ಟ ಜ್ಞಾನವನ್ನು ಮುಂದುವರೆಸಿಕೊಂಡು  ಶಾಸನ ಅಧ್ಯಯನಗಳ ಮೂಲಕ ಇತಿಹಾಸವನ್ನು ಮುಂದಿನ ಪಿಳಿಗೆಗೆ ತಿಳಿಸುವ ಕೆಲಸವನ್ನು ನಾವೇಲ್ಲಾ ಮಾಡಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

            `ಮಧುರ ಮಧರ ವೀ ಮಂಜುಳ ಗಾನ ನಿರೂಪಕರಾಗಿದ್ದ ಕಿರಣಕುಮಾರ ಪಿ.ಎಲ್‌. ಅವರು ಕಾರ್ಯಕ್ರಮ ನಿರೂಪಸಿದರುಶ್ರೀಮತಿ ಶಾರದಾ ಕಾಟೋಟಿಯವರು ಸ್ವಾಗತ ಗೀತೆಯನ್ನು ಹಾಡಿದರು. ಶ್ರೀಮತಿ ನಂದಾ ಪ್ರಕಾಶ್ಅಮರೇಶ ಹಾಗೂ ರಂಗನಾಥ ಅವರು ಕಾರ್ಯಕ್ರಮವನ್ನು ನಿರ್ವಹಿಸದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗಶೆಟ್ಟಿಯವರುಗೌರವಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡುಶಾಸನ ಶಾಸ್ತ್ರದ ವಿದ್ಯಾಥಿಗಳುಶಾಸನ ಆಸಕ್ತರು ಗುರುವಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.. ವಿದ್ಯಾರ್ಥಿ ನಾಗರಾಜ ವಂದಿಸಿದರು.


Tags

Post a Comment

0Comments

Post a Comment (0)