ಆಧುನಿಕ ಟ್ರೆಂಡ್‌ ಗಳ ಉಡುಪು ತೊಟ್ಟು ಹೆಜ್ಜೆ ಹಾಕಿದ ರೂಪದರ್ಶಿಯರು

varthajala
0

 ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ\

ಪ್ಯಾಷನ್‌ ಶೋ; ಚಿತ್ರನಟಿ ಶರಣ್ಯ ಶೆಟ್ಟಿ ಆಧುನಿಕ ಟ್ರೆಂಡ್‌ ಗಳ ಉಡುಪು ತೊಟ್ಟು ಹೆಜ್ಜೆ ಹಾಕಿದ ರೂಪದರ್ಶಿಯರು






ಬೆಂಗಳೂರು,ಆ 3; ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಿನ್ಸಿಸ್‌ ಶೈನ್ ಆಯೋಜಿಸಿರುವ ಮೂರು ದಿನಗಳ ವಸ್ತ್ರ ವೈಭವ ಸಮಾವೇಶದಲ್ಲಿ ಪ್ಯಾಷನ್ ಶೋ ಆಯೋಜಿಸಲಾಗಿತ್ತು.

ಚಿತ್ರನಟಿ ಶರಣ್ಯ ಶೆಟ್ಟಿ  ರೂಪದರ್ಶಿಯರು ಅತ್ಯಾಧುನಿಕ ಟೆಂಡ್‌ ನ ಹೊಸ ವಿನ್ಯಾಸಗಳ ಉಡುಪುಗಳನ್ನು ಧರಿಸಿ ಗಮನ ಸೆಳೆದರು. ಬಣ್ಣಗಳ ಸಂಯೋಜನೆ, ಟ್ರೆಂಡಿಯಾಗಿರುವ ಉಡುಪುಗಳನ್ನು ತೊಟ್ಟು ಹೆಜ್ಜೆ ಹಾಕಿದರು. ಮಕ್ಕಳು ಸಹ ವಿವಿಧ ವಿನ್ಯಾಸಗಳ ಪ್ಯಾಷನ್‌ ವಸ್ತ್ರಗಳನ್ನು ಧರಿಸಿದ್ದು ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

 ಚಿತ್ರನಟಿ ಶರಣ್ಯ ಶೆಟ್ಟಿ ಮಾತನಾಡಿ, ಈಗಿನ ಸಮೂಹದ ಆಸಕ್ತಿಗೆ ಅನುಗುಣವಾಗಿ ವಿನ್ಯಾಸಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಸಂಗ್ರಹವೂ ಅತ್ಯುತ್ತಮವಾಗಿದ್ದು,  ದಕ್ಷಿಣ ಮತ್ತು ಉತ್ತರ ಭಾರತದ ಎಲ್ಲಾ ರೀತಿಯ ಉಡುಪುಗಳ ಸಂಗ್ರಹ ಇಲ್ಲಿವೆ ಎಂದರು.

ಸೌತ್ ಇಂಡಿಯ ಗಾರ್ಮೆಂಟ್ಸ್ ಆಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಘ್ಲಾ ಟ್ರೆಂಡಿ ಉಡುಪು ವಿನ್ಯಾಸದಲ್ಲಿ ಗಮನ ಸೆಳೆದ ಐದು ಸಂಸ್ಥೆಗಳಿಗೆ ಬಹುಮಾನ ವಿತರಿಸಿ ಮಾತನಾಡಿ, 1996ರಿಂದ ಗಾರ್ಮೆಂಟ್ಸ್ ಮೇಳ ಆಯೋಜಿಸುತ್ತಿದ್ದು, ಈ ಬಾರಿ ದೇಶ ಪ್ರತಿಷ್ಟಿತ 200ಕ್ಕೂ ಹೆಚ್ಚು ಗಾರ್ಮೆಂಟ್ಸ್ ಸಂಸ್ಥೆಗಳು ಭಾಗವಹಿಸಿವೆ. ಮೂರು ದಿನಗಳ ಉತ್ಸವದಿಂದ ೧೦೦  ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದರು.

ಜೋಲಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಲ್.ಶಾ ಮಾತನಾಡಿ, ಗಾರ್ಮೆಂಟ್ಸ್ ಉದ್ಯಮಕ್ಕೆ ಕರ್ನಾಟಕ್ಕೆ ಉತ್ತಮ ವಾತವರಣವಿದ್ದು, ನೂತನ ಶೈಲಿಯ ವಸ್ತ್ರವಿನ್ಯಾಸಗಳನ್ನು ಕುರಿತು ಮಾಹಿತಿ ನೀಡಬೇಕು. ಅದರ ಪ್ರಚಾರ ಹೆಚ್ಚಾದರೆ ಜನರು ಬಂದು ಖರೀಸುತ್ತಾರೆ ಇದ್ದರಿಂದ ದೇಶದ ಆರ್ಥಿಕ ವ್ಯವಸ್ಥೆ ಸುಭದ್ರವಾಗುತ್ತದೆ ಎಂದು ಹೇಳಿದರು.ಒಕ್ಕೂಟದ ಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)