ಉತ್ತಮ ಜೀವನ ಶೈಲಿಯಿಂದ ಹೃದಯ ಸಂಬಂಧಿ ಕಾಯಿಲೆ ತಡೆಗಟ್ಟಬಹುದು: ಡಾ. ವಿಕ್ಟರ್ ಲೋಬೊ

varthajala
0

 ಬೆಂಗಳೂರು : ಉತ್ತಮ ಜೀವನ ಶೈಲಿಯಿಂದ ನಮ್ಮ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಡಾ. ವಿಕ್ಟರ್ ಲೋಬೊ ತಿಳಿಸಿದರು.


ಹೃದಯ ಸಂಬಂಧಿ ಕಾಯಿಲೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್, ಸ್ಪರ್ಶ ಆಸ್ಪತ್ರೆ ಹಾಗೂ ಎನ್ಎಸ್ಎಸ್ ಸಂಯುಕ್ತ ಆಶ್ರಯದಲ್ಲಿ  ವಾಕ್ ಫಾರ್ ಎ ಹೆಲ್ತಿ ಆರ್ಟ್ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಜಾಗೃತಿ ಕಾಲ್ನಡಿಗೆ ಜಾಥಕೆ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಡಾ. ವಿಕ್ಟರ್ ಲೋಬೊ, ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಸುರೇಶ್ ರಾಮು ಸ್ಪರ್ಶ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಸಮಂತ್ ಆರ್ಯ ರವರು ಚಾಲನೆ ನೀಡಿದರು. ವೇಳೆ ವೈಸ್ ಚಾನ್ಸಲರ್ ಡಾ. ವಿಕ್ಟರ್ ಲೋಬೊ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಉತ್ತಮ ಜೀವನ ಶೈಲಿಯಿಂದ ನಮ್ಮ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದರು.

ಬಳಿಕ ಲಯನ್ ಸುರೇಶ್ ರಾಮು ರವರು ಮಾತನಾಡಿ ಲಯನ್ಸ್ ಕ್ಲಬ್, 200ಕ್ಕೂ ಹೆಚ್ಚು ದೇಶಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದು ಅದರೊಂದಿಗೆ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಜಾಗೃತಿ ಜಾಥಾಗಳನ್ನು ವಿಶ್ವವಿದ್ಯಾಲಯಗಳು ಹಾಗೂ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಜೊತೆಗೂಡಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಲಯನ್ಸ್ ಕ್ಲಬ್ ನಿರಂತರವಾಗಿ ತೊಡಗಿದೆ ಎಂದರು.



ನಂತರ ಡಾ.ಸಮಂತ್ ಆರ್ಯ ರವರು ಮಾತನಾಡಿ ನಾವು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು ಇತ್ತೀಚಿನ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಧೂಮಪಾನ, ಅನುವಂಶಿಕ ಅಂಶಗಳು ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿದೆ.  ಆರೋಗ್ಯಕರ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ನಮ್ಮ ಹೃದಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಲಯನ್ ಮನೋಜ್ ಕುಮಾರ್ ಮಾತನಾಡಿ ಹೃದಯಾಘಾತದ ಸಮಸ್ಯೆಗಳ ಪ್ರಮುಖ ಕಾರಣಗಳನ್ನು ಮತ್ತು ಅದರ ತಡೆಗಟ್ಟುವ ಕ್ರಮಗಳ ಬಗ್ಗೆ ಜನರಿಗೆ ತಿಳಿಸುವುದು ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದರು.

ಈ ಜಾಥಾ ಕಾರ್ಯಕ್ರಮದಲ್ಲಿ ಸೆಂಟ್ ಜೋಸೆಫ್ ಯೂನಿವರ್ಸಿಟಿಯ ಪ್ರೊಫೆಸರ್ ಸೇಲ್ವನ್ ಪೌಲ್, ಡಾ.ಮಗೇಶ್, ಲಯನ್ ಶ್ರೀನಾಥ್, ಲಯನ್ ರಾಮಕೃಷ್ಣಪ್ಪ, ಲಯನ್ ರಾಘವೇಂದ್ರ, ಲಯನ್ ಮನೋಜ್ ಕುಮಾರ್, ಲಯನ್ ವಿಶಾಲ್, ಲಯನ್ ಜ್ಯೋತಿ ಶ್ರೀಹರಿ, ಲಯನ್ ಕೃಷ್ಣಮೂರ್ತಿ, ಲಯನ್ ಸುರೇಶ್, ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಲಯನ್ಸ್ ಸದಸ್ಯರುಗಳು ಭಾಗವಹಿಸಿದ್ದರು

Tags

Post a Comment

0Comments

Post a Comment (0)