ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮರಣಾರ್ಥ ಧ್ವನಿ’ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ

varthajala
0

ವಿದುಷಿ ಪದ್ಮ ತಲ್‌ವಾಲ್‌ಕರ್ ಅವರಿಗೆ ಹಿಂದೂಸ್ಥಾನಿ ಸಂಗೀತ ದಿಗ್ಗಜ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಪ್ರಶಸ್ತಿ

ಬಿಕೆಎಫ್ ಸಂಸ್ಥೆ ಆಯೋಜನೆ - ಸೆ. 2-3 ರಂದು ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರ ಸ್ಮರಣಾರ್ಥ 18ನೇ ‘ಧ್ವನಿ’ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ

 ಹಿಂದೂಸ್ಥಾನಿ ಸಂಗೀತ ದಿಗ್ಗಜ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರ ಸ್ಮರಣಾರ್ಥ `ಧ್ವನಿ’ ಸಂಗೀತ ಕಾರ್ಯಕ್ರಮವನ್ನು ಬೆಂಗಳೂರು ಕಿಡ್ನಿ ಫೌಂಡೇಶನ್ ಸಂಸ್ಥೆ ಪ್ರತಿ ವರ್ಷವೂ ಆಯೋಜಿಸುತ್ತಾ ಬಂದಿದೆ. ಈ ವರ್ಷ 18ನೇ ‘ಧ್ವನಿ’ ಸಂಗೀತ ಸಂಭ್ರಮವನ್ನು ಇದೇ ಸೆ. 2-3 ಶನಿವಾರ-ಭಾನುವಾರದಂದು ನಗರದ ಜಯನಗರ 8ನೇ ಬ್ಲಾಕ್ ನಲ್ಲಿರುವ ಜೆಎಸ್‌ಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 






 ಬಿಕೆಎಫ್ ಸಂಸ್ಥೆಯು ಪ್ರತಿವರ್ಷ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸಂಸ್ಮರಣ ಸಂಗೀತೋತ್ಸವ ಸಂದರ್ಭದಲ್ಲಿ ನಾಡಿನ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದ ಹಾಗೂ ಗುರುವಿಗೆ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಈ ವರ್ಷ ಹಿಂದೂಸ್ತಾನಿ ಸಂಗೀತ ಪ್ರಪಂಚಕ್ಕೆ ಅನುಪಮ ಕೊಡುಗೆ ನೀಡಿರುವ ವಿದುಷಿ ಪದ್ಮ ತಲ್ವಾಲ್ಕರ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

 ಸೆ. 2 ಶನಿವಾರ ಸಂಜೆ 6.40ಕ್ಕೆ ನಡೆಯುವ ಕರ‍್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಐಜಿಪಿ ಶ್ರೀ ಗೋಪಾಲ್ ಬಿ. ಹೊಸೂರ್ ಅವರು ಮುಖ್ಯ ಅತಿಥಿಗಳಾಗಿ ಮತ್ತು ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಕರ‍್ಯಕ್ರಮದ ಆರಂಭದಲ್ಲಿ ಪಂಡಿತ್ ಸಂಜೀವ್ ಶಂಕರ್ ಮತ್ತು ಪಂಡಿತ್ ಅಶ್ವನಿ ಶಂಕರ್ ರವರಿಂದ ಶಹನಾಯ್ ಕಛೇರಿ ಏರ್ಪಾಡಾಗಿದೆ.

ಬಾಕ್ಸ್ : ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಪ್ರಶಸ್ತಿ ಪುರಸ್ಕೃತೆ - ವಿದುಷಿ ಪದ್ಮಾ ತಲ್ವಾಲ್ಕರ್ ಕಿರು ಪರಿಚಯ 

ವಿದುಷಿ ಪದ್ಮಾ ತಲ್ವಾಲ್ಕರ್, ಗ್ವಾಲಿಯರ್, ಕಿರಾಣಾ ಮತ್ತು ಜೈಪುರ ಘರಾನಾಗಳ ಗುರುಗಳ ಅಡಿಯಲ್ಲಿ ತರಬೇತಿ ಪಡೆದ ಪ್ರಸಿದ್ಧ ಶಾಸ್ತ್ರೀಯ ಗಾಯಕಿ. ಪದ್ಮಾ ತಲ್ವಾಲ್ಕರ್ ತಮ್ಮ ಹತ್ತನೇ ವಯಸ್ಸಿನಿಂದ ಉಸ್ತಾದ್ ಅಮೀರ್ ಖಾನ್, ಪಂಡಿತ್ ಭೀಮಸೇನ್ ಜೋಶಿ ಮತ್ತು ಪಂಡಿತ್ ಕುಮಾರ್ ಗಂಧರ್ವ ಅವರಂತಹ ಮಾರ್ಗದರ್ಶಕರ ಬಳಿ ಸಂಗೀತವನ್ನು ಅಭ್ಯಸಿಸಿ; ಪಂಡಿತ್ ವಿನಾಯಕಬುವಾ ಪಟವರ್ಧನ್, ಮೊಗುಬಾಯಿ ಕುರ್ಡಿಕರ್ ಅವರಲ್ಲಿ ತರಬೇತಿ ಪಡೆದಿದ್ದಾರೆ. ತಲ್ವಾಲ್ಕರ್ ಅವರ ಸಂಗೀತವು ಸಂಗೀತದ ಅಭಿಜ್ಞರ ನಡುವೆ ಗೌರವದೊಂದಿಗೆ ತೇಜಸ್ಸಿನೊಂದಿಗೆ ಭಾವನೆಯನ್ನು ಸಂಯೋಜಿಸುತ್ತದೆ. ಅವರು ಗುರು-ಶಿಷ್ಯ ಸಂಪ್ರದಾಯದಲ್ಲಿ ಹಲವಾರು ಯುವ ಪ್ರತಿಭೆಗಳನ್ನು ಪೋಷಿಸಿದ್ದಾರೆ. ಶ್ರಿಯುತರು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಫೆಲೋಶಿಪ್‌ಗಳನ್ನು ಪಡೆದಿದ್ದಾರೆ ಮತ್ತು ಅವರು ಮಾನ್ಯತೆ ಪಡೆದ ಆಲ್ ಇಂಡಿಯಾ ರೇಡಿಯೋ ಕಲಾವಿದೆಯಾಗಿದ್ದು, ಭಾರತದಲ್ಲಿ ಮತ್ತು ವಿದೇಶದಲ್ಲಿ ಹಲವು ಪ್ರಮುಖ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ.

 ಸೆ.3 ಭಾನುವಾರ ಬೆಳಿಗ್ಗೆ 10.15 ರಿಂದ ಪಂಡಿತ್ ಜಯತರ‍್ಥ ಮೇವುಂಡಿ ರವರಿಂದ ಗಾಯನ ನಡೆಯಲಿದೆ. ನಂತರ ಸಂಜೆ 5.30ರಿಂದ ವಿದುಷಿ ದಿವ್ಯ ಶೆಣೈ ರವರ ಗಾಯನ ಪ್ರಸ್ತುತಿ ; ಸಂಜೆ 6.30ರಿಂದ ಸರ್ಫಾಜ್ ಖಾನ್ ರವರಿಂದ ಸಾರಂಗಿ ವಾದನ ನಡೆಯಲಿದೆ 7.30ಕ್ಕೆ ಡಾ.ಅಲ್ಕಾ ಡಿಯೋ ಮರುಲ್ಕರ್ ರವರ ಗಾಯನದೊಂದಿಗೆ ಸಂಪನ್ನಗೊಳ್ಳಲಿದೆ. 

 ಕರ್ನಾಟಕದ ಬೆಂಗಳೂರು ಕಿಡ್ನಿ ಫೌಂಡೇಶನ್ ಸಂಸ್ಥೆಯು ಮೂತ್ರಜನಕಾಂಗ, ಮೂತ್ರಪಿಂಡಗಳಿಗೆ ಸಂಬAಧಿಸಿದ ಕಾಯಿಲೆಗಳ ಚಿಕಿತ್ಸೆಗಾಗಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. (ಕಿಡ್ನಿ ಫೌಂಡೇಶನ್ ಟ್ರಸ್ಟ್) 1979 ರಲ್ಲಿ ಪ್ರಾರಂಭವಾದ ಸಂಸ್ಥೆಯು ಮೂತ್ರಜನಕಾಂಗ ಸಂಬAಧಿತ ರೋಗಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ಕೇಂದ್ರಸ್ಥಾನವಾಗಿ ರೂಪಗೊಂಡಿದೆ. ಬೆಂಗಳೂರು ಕಿಡ್ನಿ ಫೌಂಡೇಶನ್ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಈ ಪ್ರತಿಷ್ಠಿತ ಸಂಸ್ಥೆಯ ನೂತನ ಡಯಾಲಿಸಿಸ್ ಕೇಂದ್ರದ ನಿರ್ಮಾಣ ಪೂರ್ಣಗೊಂಡು ಕಾರ್ಯಾರಂಭ ಮಾಡುತ್ತಲಿದ್ದು. ಈ ನೂತನ ಕೇಂದ್ರವು 85 ಡಯಾಲಿಸಿಸ್ ಯಂತ್ರಗಳನ್ನು ಹೊಂದಿದ್ದು, ಆರ್ಥಿಕವಾಗಿ ಕೆಳಸ್ತರದ ರೋಗಗಳಿಗೆ ಅನುಕೂಲಕರವಾಗಿದೆ. ಈ ನೂತನ ಡಯಾಲಿಸಿಸ್ ಕೇಂದ್ರವು ಡಯಾಲಿಸಿಸ್ ತಂತ್ರಜ್ಞರಿಗೆ ತರಬೇತಿಯನ್ನು ಸಹ ನೀಡಲಾಗುವುದು. ಕಳೆದ 2 ವರ್ಷದಿಂದ ಗ್ರ‍್ರಾಮೀಣ ಪ್ರದೇಶದ ರೋಗಿಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ 10 ಗ್ರಾಮೀಣ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲಾಗಿದೆ. ಕಳೆದ ಹದಿನಾರು ವರ್ಷಗಳಿಂದ ಈ ಸಂಗೀತ ಉತ್ಸವ ಯಶಸ್ವಿಯಾಗಿ ನಡೆದು ಬರಲು ದಾನಿಗಳ, ಸಂಗೀತ ಕಲಾರಾಧಕರ, ಸಮಾಜ ಶ್ರೇಯೋಭಿಲಾಷಿಗಳ ಒತ್ತಾಸೆಯೇ ಕಾರಣವಾಗಿದೆ. ಸಂಗೀತ ಉತ್ಸವವಗಳ ಮೂಲಕ ಸಂಗ್ರಹವಾದ ಹಣ ಬಡರೋಗಿಗಳ ಉಚಿತ ಡಯಾಲಿಸಿಸ್ ವೆಚ್ಚವನ್ನು ಭರಿಸಲು ಹಾಗೂ ಬಿಕೆಎಫ್‌ನ ಮೂಲಧನ ಕ್ರೋಢೀಕರಣಕ್ಕೆ ಸಹಾಯಕವಾಗಿದ್ದು, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಸಹಾಯಕವಾಗುತ್ತದೆ. ಎಂದು ಸಂಸ್ಥೆಯ ಅಧ್ಯಕ್ಷ ಶ್ರೀರಾಮ್ ರವರು ತಿಳಿಸಿರುತ್ತಾರೆ. ವಿವರಗಳಿಗೆ : 9901788354 

18ನೇ ‘ಧ್ವನಿ’ ಪ್ರಸ್ತುತ ಪಡಿಸುವ ಕಲಾವಿದರು – ಕಿರು ವಿವರ

ಪಂಡಿತ್ ಸಂಜೀವ್ ಮತ್ತು ಪಂಡಿತ್ ಅಶ್ವನಿ ಶಂಕರ್: ‘ಬನಾರಸ್ ಘರಾನಾ’ದ ಶೆಹನಾಯಿ ಕಲಾವಿದರಾದ ಪಂಡಿತ್ ಸಂಜೀವ್ ಮತ್ತು ಪಂಡಿತ್ ಅಶ್ವನಿ ಶಂಕರ್ ಅವರ ಪ್ರತಿಭೆಯನ್ನು ಅವರ ತಂದೆ ಹಿರಿಯ ಶೆಹನಾಯಿ ವಾದಕ ಪಂಡಿತ್ ದಯಾ ಶಂಕರ್ ಪೋಷಿಸಿದರು. ನಂತರ ಅವರ ಅಜ್ಜ ದಿವಂಗತ ಪಂಡಿತ್ ಅನಂತ್ ಲಾಲ್ ಅವರ ಬಳಿ ಶೆಹನಾಯಿ ಕಲಿತರು. ಸಿತಾರ್‌ನ ತಂತ್ರ ಮತ್ತು ಜೋಡ್, ಝಾಲಾ ಮತ್ತು ದ್ರುಪದ್ ಶೈಲಿಯಲ್ಲಿ ರಾಗಗಳನ್ನು ನಿರ್ಮಿಸುವಂತಹ ವೈಶಿಷ್ಟ್ಯಗಳ ಪರಿಚಯದೊಂದಿಗೆ ಶೆಹನಾಯಿ ನುಡಿಸುವÀ ಅವರು 2010-11ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ “ಯುವ ಪುರಸ್ಕಾರ” ಮತ್ತು 2015 ರಲ್ಲಿ ಆದಿತ್ಯ ಬಿರ್ಲಾ ಪುರಸ್ಕಾರವನ್ನು ಪಡೆದಿದ್ದಾರೆ. ಪಂಡಿತ್ ಸಂಜೀವ್ ಮತ್ತು ಪಂಡಿತ್ ಅಶ್ವನಿ ಶಂಕರ್ ಅವರು 300 ವರ್ಷಗಳ ಹಳೆಯ ಕುಟುಂಬ ಸಂಪ್ರದಾಯ ಮತ್ತು ಕಲೆಯನ್ನು ಹೊಂದಿರುವ ದೇಶದ ಪ್ರತಿಷ್ಠಿತ ಕುಟುಂಬದವರಾಗಿದ್ದಾರೆ

ಪAಡಿತ್ ಜಯತೀರ್ಥ ಮೇವುಂಡಿ: ಶ್ರೀ ಮೇವುಂಡಿಯವರು ಕರ್ನಾಟಕದ ಹುಬ್ಬಳ್ಳಿ-ಧಾರವಾಡದ ಸಂಗೀತ ಕುಟುಂಬದಿAದ ಬಂದವರು. ಅವರು ಸಂಗೀತದ ವಾತಾವರಣದಲ್ಲಿ ಬೆಳೆದರು ಮತ್ತು ಅವರ ತಾಯಿ ಶ್ರೀಮತಿ ಸುಧಾಬಾಯಿ ಮೇವುಂಡಿ ಮತ್ತು ಅವರ ತಂದೆ ಶ್ರೀ ವಸಂತರಾವ್ ಮೇವುಂಡಿ ಅವರು ಪುರಂದರ ದಾಸಕೃತಿಗಳನ್ನು ಹಾಡಲು ಇಷ್ಟ¥ ಸುಮಧುರ ಕಂಠದ ದಕ್ಷ ಗಾಯಕ, ಶ್ರೀ ಮೇವುಂಡಿ ಅವರು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಿಂದ 'ಎ ಟಾಪ್' ಶ್ರೇಣಿಯನ್ನು ಪಡೆದಿದ್ದಾರೆ. ದೇಶದ ಅತ್ಯಂತ ಬೇಡಿಕೆಯ ಕಲಾವಿದರಲ್ಲಿ ಒಬ್ಬರಾದ ಶ್ರೀ.ಮೇವುಂಡಿ ಅವರು ಹಿಂದೂಸ್ತಾನಿ ಶಾಸ್ತ್ರೀಯ, ಸಂತವಾಣಿ ಮತ್ತು ದಾಸವಾಣಿ ಮುಖಾಂತರ ಚಿರಪರಿಚಿರಾಗಿದ್ದಾರೆ. 

ಶ್ರೀ ಸರ್ಫರಾಜ್ ಖಾನ್:: ಶ್ರೀ ಸರ್ಫರಾಜ್ ಖಾನ್, ಮೈಸೂರು ಅರಮನೆಯಲ್ಲಿ ಆಸ್ಥಾನ ಸಂಗೀತಗಾರರಾಗಿದ್ದ ಅವರ ತಾತ ಉಸ್ತಾದ್ ಶೇಕ್ ಅಬ್ದುಲ್ಲಾ ಖಾನ್ ಮತ್ತು ಅವರ ತಂದೆ ಉಸ್ತಾದ್ ಫೈಯಾಜ್ ಖಾನ್, ಹೆಸರಾಂತ ಗಾಯಕ ಮತ್ತು ಸಾರಂಗಿ ವಾದಕರಿಂದ ಸಂಗೀತವನ್ನು ಶಿಕ್ಷಣ ಪಡೆದರು. ಸರ್ಫರಾಜ್ ಖಾನ್ ಂIಖ ನಿಂದ ಂ ದರ್ಜೆಯ ಕಲಾವಿದರು. ಅವರು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ

ಶ್ರೀಮತಿ ದಿವ್ಯಾ ಶೆಣೈ: ಶ್ರೀಮತಿ ದಿವ್ಯಾ ಶೆಣೈ ಅವರು ಉತ್ತರ ಕ್ಯಾಲಿಫೋರ್ನಿಯಾದ ಡ್ಯೂಕ್ ವಿಶ್ವವಿದ್ಯಾನಿಲಯದಿಂದ ಬಯೋಮೆಡಿಕಲ್ ಇಂಜಿನಿಯರಿAಗ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆದು ನ್ಯೂಯಾರ್ಕನಲ್ಲಿ ಕರ್ಡಿಯಾಕ್ ಎಲೆಕ್ಟೊçÃಫಿಸಿಯಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರು ಪಂಡಿತ್ ಡಾ.ನಾಗರಾಜ್ ರಾವ್ ಹವಾಲ್ದಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಅವರು ಶ್ರೀ ಓಂಕಾರನಾಥ ಹವಾಲ್ದಾರ್ ಅವರಿಂದ ಕಲಿಯುತ್ತಿದ್ದಾರೆ ಮತ್ತು ಬೆಂಗಳೂರಿನಲ್ಲಿ ಸಂಗೀತವನ್ನೂ ಕಲಿಸುತ್ತಿದ್ದಾರೆ.




ಡಾ.ಅಲ್ಕಾ ಡಿಯೋ ಮರುಲ್ಕರ್: ಡಾ.ಅಲ್ಕಾ ಡಿಯೋ ಮರುಲ್ಕರ್ ಬಹುಮುಖ ಪ್ರತಿಭೆಯ ಗಾಯಕಿ ಆಕೆಗೆ ಸಂಗೀತಾಚಾರ್ಯ ಪದವಿ - ಸಂಗೀತದಲ್ಲಿ ಡಾಕ್ಟರೇಟ್ ನೀಡಲಾಗಿದೆ. ಅವರು ತಮ್ಮ ತಂದೆ, ಗ್ವಾಲಿಯರ್, ಕಿರಣ ಮತ್ತು ಜೈಪುರ ಘರಾನಾಗಳ ರಾಜಭಾವು ಅವರ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು ಮತ್ತು ನಂತರ ಶ್ರೀ.ಮಧುಸೂದನ್ ಕಾನೇಟ್ಕರ್ ಅವರಿಂದ ತರಬೇತಿ ಪಡೆದರು. ಬನಾರಸ್ ಶೈಲಿಯಲ್ಲಿ ಠುಮ್ರಿ, ದಾದ್ರಾ, ಕಜ್ರಿ, ಚೈತಿ ನಾಡ್ ಹೋರಿಯಂತಹ ಅರೆ-ಶಾಸ್ತ್ರೀಯ ರೂಪಗಳ ಮೇಲೆ ಪ್ರಭುತ್ವಹೊಂದಿದ್ದಾರೆ. ಸಂಗೀತ ಶಿರೋಮಣಿ, ಗಾನ ಸರಸ್ವತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಹೊಂದಿದ್ದಾರೆ.

Post a Comment

0Comments

Post a Comment (0)