ಶಾಲಾ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಐಕ್ಯಂ ವತಿಯಿಂದ ಅವಕಾಶ

varthajala
0

ಬೆಂಗಳೂರು : ಇಂದಿನ ಆಧುನಿಕ ಯುಗದಲ್ಲಿ, ಮಕ್ಕಳ ಮುಂದಿನ ಅವರ ಉಜ್ವಲ್ ಭವಿಷ್ಯ ಕಾಲಕ್ಕಾಗಿ ಶಿಕ್ಷಣದ ಕಾಲಘಟ್ಟದಿಂದಲೇ, ಪರಿಸರ ಸ್ನೇಹಿ ಚಿಂತನೆ, ವೈಜ್ಞಾನಿಕ ಆಯಾಮ, ನೈತಿಕತೆ, ಸಾಮಾಜಿಕ ಕಾಳಜಿ ಹಾಗೂ ಇನ್ನೂ ಹತ್ತು ಹಲವು ಗುಣಗಳೊಂದಿಗೆ ನಾಡು- ನುಡಿ ದೇಶವನ್ನು ಪ್ರತಿನಿಧಿಸುವ ಬಾವಿ ಸತ್ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶಾಲೆಗಳ ಪಾತ್ರ ಮಹತ್ತರವಾದದ್ದು.

   ಇದೇ ದಿಸೆಯಲ್ಲಿ ರಾಜರಾಜೀಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ್ತೀಕೆರೆಯಲ್ಲಿರುವ ಪ್ರಸಿದ್ಧ ವಿದ್ಯಾ ವೈಭವ್ ಪಬ್ಲಿಕ್ ಶಾಲೆಯಲ್ಲೂ, ತಮ್ಮ ಶಾಲಾ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಯಶಸ್ಸಿನ ಸಾಧನೆಗಳನ್ನು ಮಾಡುವಂತಾಗಲು ಅಣಿಗೊಳಿಸಲು, ಹೊಸ ಅವಕಾಶಗಳನ್ನು ಬಳಸುವ ಪ್ರಯತ್ನ ಶಾಲೆಯ ಆಡಳಿತ ಮಂಡಳಿಯಿಂದ  ನಡೆಯುತ್ತಿದ್ದು, ಈ ಸಂಬಂಧವಾಗಿ  ಅಮೇರಿಕಾ ದೇಶದ ಕ್ಯಾಲಿಫೋರ್ನಿಯಾ ಮೂಲದ ಐಕ್ಯಂ ಸಂಸ್ಥೆಯ ಸಹಭಾಗಿತ್ವದಲ್ಲಿ,  'ವಿದ್ಯಾರ್ಥಿಗಳಲ್ಲಿ ಸ್ವಚ್ಛ ಪರಿಸರ ರಕ್ಷಣೆಯ ಕುರಿತು ಚರ್ಚೆ, ಆಧುನಿಕ ತಂತ್ರಜ್ಞಾನದ ಬಗ್ಗೆ ಜಾಗೃತಿ, ಅಭಿಪ್ರಾಯಗಳ ಮಂಡನೆ, ವ್ಯಕ್ತಿಗತವಾದ ಯೋಜನೆಗಳ ಪ್ರಸ್ತುತಿ' ಕಾರ್ಯಗಾರವನ್ನು ಅಂತರಾಷ್ಟ್ರೀಯ ಸ್ತರದಲ್ಲಿ ಪ್ರಚುರಪಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮದಲ್ಲಿ, ರಾಜ್ಯದ ನಾನಾ ಭಾಗಗಳ ಹಾಗೂ ಹೈದರಾಬಾದಿನ  ಒಂದು ಶಾಲೆ ಸೇರಿದಂತೆ ಒಟ್ಟಾರೆ 10 ಶಾಲೆಗಳ 6 ರಿಂದ 9ನೇ ತರಗತಿಯ ಸುಮಾರು 200 ವಿದ್ಯಾರ್ಥಿಗಳು ಆನ್ ಲೈನ್ ನ ಮುಖಾಂತರ ಭಾಗವಹಿಸಿ ಪಾಲ್ಗೊಳ್ಳುವುದರೊಂದಿಗೆ ಚಾಲನೆ ನೀಡಲಾಯಿತು.

    ವಿದ್ಯಾ ವೈಭವ್ ಪಬ್ಲಿಕ್ ಶಾಲೆಯಲ್ಲಿ ನಡೆದ ಕ್ಲಬ್‌ನ ಉದ್ಘಾಟನೆಯಲ್ಲಿ ಯುಎಸ್ಎ   ಯಿಂದ ಆಗಮಿಸಿದ್ದ ಐಕ್ಕಂ ಸಂಸ್ಥೆಯ ಶ್ರೀಮತಿ ಪದ್ಮಾ  ಸನಂಪುಡಿ, ಡೇವಿಡ್ ಗಿಲ್ಸನ್ ವಿದ್ಯಾ ವೈಭವ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಕಿರಣ್ ಪ್ರಸಾದ್, ಶಾಲೆಯ ಟ್ರಸ್ಟಿ ಶ್ರೀಮತಿ ಶುಭಾ ಪ್ರಸಾದ್ ರವರೊಂದಿಗೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಈ ವೇಳೆ ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಈ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದ್ದರು. ಈ ಕಾರ್ಯಕ್ರಮದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ, ಯಶಸ್ವಿಯಾಗಲು ಸಹಕರಿಸಿದರು.

Post a Comment

0Comments

Post a Comment (0)