ಕ್ರಿಸ್ತ ಜಯಂತಿ ಕಾಲೇಜು ಸ್ವಾಯತ್ತ ಸಂಸ್ಥೆಯು ರಜತ ಮಹೋತ್ಸವಕ್ಕೆ ಚಾಲನೆ*

varthajala
0

ಬೆಂಗಳೂರು : ನಗರದ ಕೆ. ನಾರಾಯಣಪುರದ ಬಳಿಯ ಕೊತ್ತನೂರು ನಲ್ಲಿನ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ, ಎನ್ ಎ ಎ ಸಿ ನಿಂದ ಎ ++ ಗ್ರೇಡ್ ಅನ್ನು ಪಡೆದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ ಸಂಸ್ಥೆಯು ಉನ್ನತ ಶಿಕ್ಷಣದಲ್ಲಿ 25 ವರ್ಷಗಳ ಪೂರ್ಣಗೊಳಿಸುತ್ತಿರುವ ಸಾಧನೆಯನ್ನು ಆಚರಿಸಲಾಗುತ್ತಿರುವ ರಜತ ಮಹೋತ್ಸವ ಆಚರಣೆ ಸಂದರ್ಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ಪಾಲ್ಗೊಂಡು, ಬೆಳ್ಳಿಹಬ್ಬದ ಲೋಗೋವನ್ನು ಅನಾವರಣಗೊಳಿಸಿದರು. 



ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ನಿರಂಜನ್ ವಾನಳ್ಳಿ, ಕ್ರಿಸ್ತು ಜಯಂತಿ ಕಾಲೇಜಿನ ಪ್ರಾಂಶುಪಾಲರುಫಾ. ಡಾ. ಆಗಸ್ಟಿನ್ ಜಾರ್ಜ್, ಫಾ. ಡಾ. ಅಬ್ರಹಾಂ ವೆಟ್ಟಿಯಂಕಲ್, ಫಾ. ಡಾ. ಆಗಸ್ಟೀನ್ ಜಾರ್ಜ್, ಸಿ ಎಂ ಐ ಪ್ರಾಂತೀಯ,  ಸೇಂಟ್ ಜೋಸೆಫ್ ಪ್ರಾಂತ್ಯ, ಕೊಟ್ಟಾಯಂ, ಕಾಲೇಜಿನ ಸಿ ಎಂ ಐ ವೈಸ್ ಪ್ರಿನ್ಸಿಪಾಲ್ & ಸಿ ಎಫ್ ಓ ಫಾ. ಲಿಜೋ ಪಿ. ಥಾಮಸ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.




 ಕಾಲೇಜಿನ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು, ಪ್ರೊ.ಅಬ್ರಹಮ್, ಸಹಾಯಕ ಪ್ರೊ. ಅಲನ್ ಮಾರಿಯಾ ಜೋಸ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರಲ್ಲಿ ಪ್ರಮುಖರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

Post a Comment

0Comments

Post a Comment (0)