ಸಾನಿಯಾ ಅಂಜುಮ್ ಎಂಕಾಂ ಪದವಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ

varthajala
0

ಶಿಡ್ಲಘಟ್ಟ ನಗರದ 7ನೇ ವಾರ್ಡಿನಲ್ಲಿ ವಾಸವಿರುವ ಸಾನಿಯಾ ಅಂಜುಮ್ ಎಂಬ ವಿದ್ಯಾರ್ಥಿನಿ ಎಂಕಾಂ ಪದವಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದು, ಶಾಸಕ ಬಿಎನ್ ರವಿಕುಮಾರ್ ರವರು ವಿದ್ಯಾರ್ಥಿನಿಯ ಸ್ವಗೃಹಕ್ಕೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಮುಖಂಡರಾದ ಬಂಕ್ ಮುನಿಯಪ್ಪ,ತಾದೂರು ರಘು,ಪುರಸಭಾ ಮಾಜಿ ಉಪಾಧ್ಯಕ್ಷ ಚಿಕ್ಕಮುನಿಯಪ್ಪ,ಮೇಲೂರು ಉಮೇಶ್,ಸಾಧೀಕ್, ಶಂಕರ್, ಪೋಷಕರು ಹಾಗೂ ಮುಖಂಡರು ಇದ್ದರು.

Post a Comment

0Comments

Post a Comment (0)