ನವೀಕೃತ ಕುವೆಂಪು ಸಭಾಂಗಣದ ಉದ್ಘಾಟನೆ - ಕುವೆಂಪು ಜನ್ಮದಿನೋತ್ಸವ

varthajala
0

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ 119ನೆಯ ಜನ್ಮದಿನದ ಪ್ರಯಕ್ತ ಕನ್ನಡ ಸಾಹಿತ್ಯ ಪರಿಷತ್ತು ಇಡೀ ದಿನದ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. 29ನೆಯ ಡಿಸಂಬರ್ 2023ರ ಶುಕ್ರವಾರ ಪೂರ್ತಿ ದಿನ  ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ರಾಜ ಪರಿಷತ್ತಿನ ಮಂದಿರ ಮತ್ತು ಕುವೆಂಪು ಸಭಾಂಗಣದಲ್ಲಿ ಈ ಕಾರ್ಯಕ್ರಮವು ನೆರವೇರಲಿದೆ.

ಈ ಆಚರಣೆಯ ವಿಶೇಷತೆ ಎಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣವು ಸಂಪೂರ್ಣವಾಗಿ ಪರಂಪರೆಯ ಹಿರಿಮೆಯನ್ನು ಉಳಿಸಿ ಕೊಂಡು ಆಧುನಿಕತೆಯ ಅವಶ್ಯಕತೆಗೆ ತಕ್ಕಂತೆ ನವೀಕರಣಗೊಂಡಿದ್ದು ಅದರ ಉದ್ಘಾಟನಾ ಕಾರ್ಯಕ್ರಮವು ಅಂದೇ ನೆರವೇರಲಿದೆ. ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ಕಾರ್ಯಕ್ರಮವನ್ನು ನಂತರ ನವೀಕರಣಗೊಂಡ ಕುವೆಂಪು ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಹಿಸಲಿದ್ದು ಅಖಿಲ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವೈ.ಕೆ.ಮುದ್ದಕೃಷ್ಣ ಅವರು ಮುಖ್ಯ ಅತಿಥಿಗಳಾಗಿದ್ದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರ ಗೌರವ ಉಪಸ್ಥಿತಿ ಇರುತ್ತದೆ. ಖ್ಯಾತ ವಿರ್ಮರ್ಶಕರೂ ಮತ್ತು ಸಂಸ್ಕೃತಿ ಚಿಂತಕರೂ ಆದ ಡಾ.ಎಚ್.ಎಸ್.ಸತ್ಯನಾರಾಯಣ ಅವರು ಇಡೀ ದಿನದ ಕಾರ್ಯಕ್ರಮಕ್ಕೆ ದಿಕ್ಯೂಚಿಯಾಗ ಬಲ್ಲ ಮಾರ್ಗದರ್ಶಿ ಆಶಯ ನುಡಿಗಳನ್ನು ಆಡುತ್ತಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮೊದಲು ಖ್ಯಾತ ಗಮಕಿ ಶ್ರೀ ಎಂ.ಆರ್.ಸತ್ಯನಾರಾಯಣ ಅವರಿಂದ ಕುವೆಂಪು ವಿರಚಿತ  ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಆಯ್ದ ಭಾಗಗಳ ವಾಚನ ಇರುತ್ತದೆ.

ಮಧ್ಯಾಹ್ನ ಎರಡು ಗಂಟೆಯ ನಂತರ ಶ್ರೀ ಇಸ್ಮಾಯಿಲ್ ತಳಕಲ್ ಅವರಿಂದ ‘ಕುವೆಂಪು ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವಿದ್ದು ಈ ಗೋಷ್ಟಿಯ ಅಧ್ಯಕ್ಷತೆಯನ್ನು ಖ್ಯಾತ ಚಿಂತಕರಾದ ಶ್ರೀ ಕೆ.ಗಂಗಪ್ಪ ಗೌಡರು ವಹಿಸಲಿದ್ದಾರೆ. ಇದರ ನಂತರ ಮಧ್ಯಾಹ್ನ 2.45ಕ್ಕೆ  ಕುವೆಂಪು ಕವಿತಾ ವಾಚನ ಕಾರ್ಯಕ್ರಮವಿದ್ದು ಡಾ.ಎಂ.ಎಸ್.ಮೂರ್ತಿ, ಡಾ.ಎಂ.ಎಸ್.ವಿದ್ಯಾ, ಎಂ.ವಿಜಯ ಕುಮಾರ್, ಕವಿರತ್ನ ಡಾ.ನಾಗೇಂದ್ರ ಪ್ರಸಾದ್, ಚಾಂದಿನಿ, ವಿಶಾಖ.ಎನ್, ಮಂಜುನಾಥ ದಡ್ಡಿಮನಿ, ಕೆ.ವಿ.ಅನಿತ, ಸೂರ್ಯ ಕೀರ್ತಿ ಮತ್ತು ಚೈತ್ರ ಶಿವಯೋಗಿಮಠ ಕುವೆಂಪು ಅವರ ಕವಿತೆಗಳನ್ನು ಓದಲಿದ್ದಾರೆ. ಸಂಜೆ 4.00ಗಂಟೆಗೆ ಶ್ರೀಮತಿ ನಾಗಚಂದ್ರಿಕಾ ಭಟ್ ಮತ್ತು ತಂಡದವರಿಂದ ಕುವೆಂಪು ಅವರ ಗೀತಗಾಯನದ ಕಾರ್ಯಕ್ರಮವಿರುತ್ತದೆ.

ಸಂಜೆ 5.15ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ  ಡಾ.ಜೆ.ಎಸ್.ಉಷಾ ಅವರು ಸಮಾರೋಪ ಭಾಷಣವನ್ನು ಮಾಡಲಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ,ಮಹೇಶ ಜೋಶಿಯವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕರ್ನಾಟಕ ಮಾನವ ಹಕ್ಕುಗಳ ಅಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿಯವರು ಮುಖ್ಯ ಅತಿಥಿಗಳಾಗಿರುತ್ತಾರೆ.

ಇಡೀ ದಿನ ನಡೆಯುವ ಈ ಕುವೆಂಪು ನಮನ ಮತ್ತು ನವೀಕೃತ ಕುವೆಂಪು ಸಭಾಂಗಣದ ಉದ್ಘಾಟನೆಯ ವಿವರಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದರ ಜೊತೆಗೆ ಕಾರ್ಯಕ್ರಮಕ್ಕೆ ನಿಮ್ಮ ವರದಿಗಾರರನ್ನು ಮತ್ತು ಛಾಯಾಗ್ರಾಹಕರನ್ನು ಕಳುಹಿಸಿ ಕೊಡ ಬೇಕಾಗಿ ವಿನಂತಿ.


Post a Comment

0Comments

Post a Comment (0)