ಭಾರತ್ ಎಲೆಕ್ಟ್ರಾನಿಕ್ಸ್ ನ ಸಪ್ತ ಶಿಕ್ಷಣ ಸಂಸ್ಥೆಯ 75 ನೇ ಗಣರಾಜ್ಯೋತ್ಸವ

varthajala
0

75 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು 26-01-2024 ಶುಭ ಶುಕ್ರವಾರ ಬೆಳಗ್ಗೆ 8:45 ಕ್ಕೆ ಬಿ ಇ ಎಲ್ ನ ಡಾ|| ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಶ್ರೀ ಯುತ ಉಮೇಶ್ ಕೆ ಎಸ್ ಕಾರ್ಯನಿರ್ವಾಹಕ ನಿರ್ದೇಶಕರು, ಇ ಡಿ /ಎ ಡಿ ಎಸ್ ಎನ್, ಬಿ ಇ ಎಲ್ ಆಗಮಿಸಿ ರಾಷ್ಟ್ರ ಧ್ವಜರೋಹಣ ನಡಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ ಎಲ್ಲರೂ ಎದ್ದು ನಿಂತು ರಾಷ್ಟ್ರ ಗೀತೆ ಹಾಡಿದರು. ನಂತರ  ಮುದ್ದು ಮಕ್ಕಳಿಗೆ ದೇಶ ಪ್ರೇಮದ ಮಹತ್ವವನ್ನು ತಿಳಿಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಯುತ ಧೀರಜ್ ಠಾಕರೆ ಎಂ, (ಡಿ ಜಿ ಎಂ, ಇ ಡಬ್ಲ್ಯೂ ಅಂಡ್ ಎ) ಅಂಡ್ ಕಾರ್ಯದರ್ಶಿಗಳು ಬಿಇಇಐ ಎಂಸಿ, ಮತ್ತು ಶ್ರೀ ಯುತ ದೀಪಕ್ ಎಚ್ ಜಿ ಮ್ಯಾನೇಜರ್ (ಮಾರ್ಕೆಟಿಂಗ್ -ಎಸ್ ಸಿ )ಅಂಡ್ ಸದಸ್ಯರು  ಬಿಇಇಐ ಎಂಸಿ, ಹಾಗೂ ಕಮಿಟಿಯ ಎಲ್ಲಾ ಸದಸ್ಯರು,ಸಪ್ತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗವಹಿದ್ದರು.




ಕಾರ್ಯಕ್ರಮದಲ್ಲಿ ಎನ್ ಸಿ ಸಿ ಕೇಡಿಟ್ಸ್ ಪಥ ಸಂಚಲನ ಗಣ್ಯರುಗಳೊಂದಿಗೆ ನಡಸಿದರು. ನಂತರ ಪುಟ್ಟ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆಯುವಂತೆ ಇತ್ತು.ಬಿಇಎಲ್ ಇಂಗ್ಲಿಷ್ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ,ಆಸಾಧಾರಣ ಮನಸ್ಸುಗಳಿಂದ ಆಧ್ಯಾತ್ಮಕ ಚಿಂತನೆಯುಳ್ಳ ಯೋಗ ಕಿಡಿಗಳ ಪ್ರದರ್ಶನ ಬಿಇಎಲ್ ಆಶಾಂಕುರ ವಿಶೇಷ ಶಾಲಾ ವಿದ್ಯಾರ್ಥಿಗಳಿಂದ, ನಾರಿ ಶಕ್ತಿ ಪ್ರದರ್ಶನ ಇಂಗ್ಲಿಷ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ, ದೇಸಿಯ ವಾದ್ಯ ಬ್ಯಾಂಡ್ ಪ್ರದರ್ಶನ ಬಿಇಇಐ ನ ಬ್ಯಾಂಡ್ ತಂಡದವರಿಂದ. ಹೀಗೆ ಕಾರ್ಯಕ್ರಮವು ಎಲ್ಲಾ ರೀತಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

Post a Comment

0Comments

Post a Comment (0)