ಮಕ್ಕಳನ್ನ ಶಾಲೆ ಬಿಡಿಸುವಂತಹ ಕೃತ್ಯ ಮಾಡಬೇಡಿ : ತಹಶೀಲ್ದಾರ್ ಬಿ.ಎನ್ ಸ್ವಾಮಿ

varthajala
0

ವಾರ್ತಾಜಾಲ, ಶಿಡ್ಲಘಟ್ಟ  : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 75 ನೇ ಗಣರಾಜ್ಯೋತ್ಸವದ ರಾಷ್ಟ್ರಧ್ವಜದ ಕಂಬಕ್ಕೆ ಪೂಜೆ ಸಲ್ಲಿಸಿ, ಶಾಸಕ ಬಿ.ಎನ್.ರವಿಕುಮಾರ್ ಧ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳು ನಡೆಸಿಕೊಟ್ಟ ಆಕರ್ಷಕ ಪಥಸಂಚಲನದ ತೆರದ ವಾಹನದಲ್ಲಿ ಸಾಗಿ ಗೌರವ ಸ್ವೀಕರಿಸಿದರು. 


ನಂತರ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಭಾರತದ ಸಂವಿಧಾನವನ್ನು 1949ರ ನವೆಂಬರ್​ 26ರಂದು ಅಂಗೀಕರಿಸಲಾಗಿತ್ತು. ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ನಮ್ಮ ರಾಷ್ಟ್ರ ತನ್ನದೇ ಆದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯನ್ನು ರೂಢಿಸಿಕೊಂಡು ಸಂವಿಧಾನವನ್ನು ಜಾರಿಗೆ ತಂದ ದಿನವನ್ನು ನಾವು ಗಣರಾಜ್ಯೋತ್ಸವವಾಗಿ ಆಚರಿಸುತ್ತಿದ್ದೇವೆ. ಭಾರತದ ಸಂವಿಧಾನವು ವಿಶ್ವದ ಅತಿ ದೊಡ್ಡ ಸಂವಿಧಾನವಾಗಿದೆ. ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಅರಿತು ನಡೆದಾಗ ಈ ದೇಶ  ಇಡೀ ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದರು.

ತಹಶೀಲ್ದಾರ್ ಬಿ.ಎನ್ ಸ್ವಾಮಿ ಮಾತನಾಡಿ,ನಮ್ಮ ಸಂವಿಧಾನದ ಅಂಶಗಳು ನಮಗೆ ತಿಳಿಯಬೇಕು ಅಂದ್ರೆ ಎಲ್ಲಾ ನಾಗರೀಕರು ತಮ್ಮ ಮಕ್ಕಳನ್ನ ಶಾಲೆಗೆ ಕಡ್ಡಾಯವಾಗಿ ಕಳಿಸಬೇಕು. ವಿದ್ಯಾರ್ಥಿಗಳು ಹೆಚ್ಚಿನ ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವಂತೆ ಮಾಡಬೇಕು. ನಾಗರೀಕರು ಯಾವುದೇ ಕಾರಣಕ್ಕೂ ಮಕ್ಕಳನ್ನ ಶಾಲೆ ಬಿಡಿಸುವಂತಹ ಒಂದು ದೃಷ್ಟ ಕೃತ್ಯಕ್ಕೆ ಕೈ ಹಾಕಬೇಡಿ ಮತ್ತು ಅವರ ಭವಿಷ್ಯಕ್ಕೆ ಕೊಳ್ಳಿ ಇಡಬೇಡಿ. ಇದೇ ನನ್ನ 75ನೇ ಗಣರಾಜ್ಯೋತ್ಸವದ ಪ್ರಮುಖ ಸಂದೇಶ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿ. ಮುನಿರಾಜು, ನಗರಸಭೆ ಪೌರಾಯುಕ್ತ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾ‌ರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಬಂಕ್ ಮುನಿಯಪ್ಪ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಮೇಲೂರು ಮಂಜುನಾಥ್, ಸಿಪಿಐ ಶ್ರೀನಿವಾಸ್ ಎಂ,  ತಾದೂರು ರಘು, ಎಸ್ ಎಂ ರಮೇಶ್, ಟಿಪ್ಪು ಮೌಲ, ರೈತ ಸಂಘದ ಮುನಿಕೆಂಪಣ್ಣ, ರವಿ ಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ಸು.ಕ.ಜ.ವೇ.ಅಧ್ಯಕ್ಷ ರಾಮಾಂಜಿನೇಯ, ಸುನಿಲ್,ಅಂಬಾರಿ ಮಂಜುನಾಥ್, ಸೇರಿದಂತೆ ಇತರರು ಹಾಜರಿದ್ದರು.

Post a Comment

0Comments

Post a Comment (0)