ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರಿಂದ ಸಿದ್ದರಾಮಯ್ಯನವರಿಗೆ ವರದಿ

varthajala
0

 ಬೆಂಗಳೂರು : 2024 `ಲೋಕ' ಚುನಾವಣೆಯ ಹೊಸ್ತಿಲಲ್ಲಿ ಮತ್ತು ಕಳೆದ ಕೆಲವು ತಿಂಗಳಿನಿಂದ ಭಾರೀ ಚರ್ಚೆಗೆ ಗ್ರಾಸವಾಗಿರುವ ಜಾತಿಗಣತಿ ಗುರುವಾರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ನೀಡಿದ ಕಾಂತರಾಜ್ ಆಯೋಗದ ವರದಿಯನ್ನು -ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2015ರ ದತ್ತಾಂಶಗಳ ಅಧ್ಯಯನ 2024-  ಸ್ವೀಕರಿಸಿದ್ದಾರೆ

" ಕಾಂತರಾಜ್ ವರದಿಯ ದತ್ತಾಂಶದ ಮೇಲೆ ಶಿಕ್ಷಕರು ಮತ್ತು ಅಧಿಕಾರಿಗಳು ವರದಿಯನ್ನು ಸಿದ್ದ ಪಡಿಸಿದ್ದಾರೆ, ವರದಿಯಲ್ಲಿ ಯಾವುದೇ ತಿದ್ದುಪಡಿಯನ್ನು ಮಾಡಿಲ್ಲ. ತಾಂತ್ರಿಕ ಕಾರಣದಿಂದ ಕಾಂತರಾಜ್ ವರದಿಯನ್ನು ಸಲ್ಲಿಸಿರಲಿಲ್ಲ, ಜಾತಿಗಣತಿ ವರದಿ ಸೋರಿಕೆ ಗಿದೆ ಎನ್ನುವ ಆರೋಪ ಸುಳ್ಳು, ಎಲ್ಲೋ ಕೆಲವು ಅಂಶಗಳು ಸೋರಿಕೆಯಾಗಿರಬಹುದು ದೆ0ದು ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಕೆಲವು ಕಾಂಗ್ರೆಸ್ ಮುಖಂಡರೇ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ.  ಇದೊಂದು ಅವೈಜ್ಞಾನಿಕ ವರದಿ ಇದನ್ನು ಒಪ್ಪಲು ಸಾಧ್ಯವೇ ಇಲ್ಲ" ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಆಕ್ರೋಶ ಹೊರಹಾಕಿದ್ದಾರೆ. " ನಾವು ಹಿಂದುಳಿದ ವರ್ಗಗಳ ವಿರೋಧಿಗಳೇನೂ ಅಲ್ಲ, ಆದರೆ ಕಾಂತರಾಜು ಅವರಿಗೆ ಜಾತಿಗಣತಿ ಮಾಡಲು ಆದೇಶವನ್ನು ನೀಡಿರಲಿಲ್ಲ, ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆಯ ಹಂತದಲ್ಲಿದೆ" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಮಡಿಲಿಗೆ ಸಲ್ಲಿಕೆಯಾಗಿರುವ ಈ ವರದಿ ಪ್ರಕಾರ, ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು 51% ಹೆಚ್ಚಿಸುವ ಶಿಫಾರಸನ್ನು ಮಾಡಲಾಗಿದೆ. ವರದಿಯ ಪ್ರಕಾರ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಪ. ಜಾತಿ ( ಎಸ್‌ ಸಿ ) ಸಮುದಾಯ ಅತಿಹೆಚ್ಚು ಜನಸಂಖ್ಯೆ ಹೊಂದಿದೆ ಎಂದು ಹೇಳಲಾಗುತ್ತಿದೆ.

  • ಸಮೀಕ್ಷೆಗೆ ಒಳಪಟ್ಟ ಜಾತಿಗಳ ಸಂಖ್ಯೆ : 1,351
  • ಒಟ್ಟು ಸಮೀಕ್ಷೆ ನಡೆಸಲಾದ ಜನಸಂಖ್ಯೆ : 5,98,00,000
  • ಸಮೀಕ್ಷೆಯಿಂದ ಹೊರಗುಳಿದವರ ಜನಸಂಖ್ಯೆ : 32,00,000
  • ಸರ್ಕಾರ ಗುರುತಿಸಿದ ಇತರ ಹಿಂದುಳಿದ ಜಾತಿಗಳು (OBC) : 192
  • ಕ್ರೈಸ್ತ, ಬೌದ್ದ, ವೈಶ್ಯ ಸಮುದಾಯ ಸೇರಿ ಇತರರು : 95,00,000
  • ಪರಿಶಿಷ್ಟ ಜಾತಿ ( Schedule Caste ) : 1,08,00,000
  • ಮುಸ್ಲಿಮರು : 75,00,000
  • ಲಿಂಗಾಯತರು : 65,00,000
  • ಒಕ್ಕಲಿಗರು : 62,00,000
  • ಕುರುಬರು : 45,00,000
  • ಪರಿಶಿಷ್ಟ ಪಂಗಡ ( Schedule Tribe ) : 40,50,000
  • ಈಡಿಗರು : 15,00,000
  • ವಿಶ್ವಕರ್ಮ 15,00,000
  • ಉಪ್ಪಾರರು 15,00,000
  • ಬೆಸ್ತರು 15,00,000
  • ಬ್ರಾಹ್ಮಣರು 14,00,000
  • ಗೊಲ್ಲ ಯಾದವರು 10,00,000
  • ಅರೆ ಅಲೆಮಾರಿ 6,00,000
  • ಮಡಿವಾಳರು 6,00,000
  • ಸವಿತಾ ಸಮಾಜ  5,00,000
  • ಕುಂಬಾರರು  5,00,00

Post a Comment

0Comments

Post a Comment (0)