ಸ್ತ್ರೀಯರಿಗೆ ಜಗತ್ತಿನಲ್ಲಿ ಗೌರವ ನೀಡುವುದು‌ ಪರಂಪರೆಯ ಲಕ್ಷಣ : ಡಾ.ವೂಡೇ.ಪಿ. ಕೃಷ್ಣ

varthajala
0

ಸ್ತ್ರೀಯರಿಗೆ ಸ್ವಾತಂತ್ರ್ಯ, ಸಮಾನತೆ, ಗೌರವ ನೀಡುವುದರಿಂದ ಜಗತ್ತಿನ ಪರಂಪರೆ ಶ್ರೇಷ್ಠತೆಯನ್ನು  ಕಂಡಂತಾಗುತ್ತದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ.ವೂಡೇ ಪಿ ಕೃಷ್ಣ ಅವರು ಅಭಿಪ್ರಾಯಪಟ್ಟರು. ಅವರು ‌ಬುದ್ದ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್  ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಲೇಖಕಿ, ಹಿಂದಿ ಅಧ್ಯಾಪಕಿ ಡಾ.ಚಿ.ದೇ.ಸೌಮ್ಯ ಅವರು " ಕನ್ನಡದ ಕನ್ನಡಿಯಲ್ಲಿ ಮತ್ತು ಮಧ್ಯಕಾಲೀನ ಭಾರತದ ಸಂತ ಮಹಿಳೆಯರು " ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. 



ಮಹಿಳೆಯರು‌ ಪುರುಷ ಪ್ರಧಾನ ಸಮಾಜದಲ್ಲಿ ಲೌಕಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಹೆಚ್ಚು ಒತ್ತು ನೀಡಿದವರು. ಅವರ ಕಷ್ಟ ಸುಖದಲ್ಲಿ ಪ್ರತಿಯೊಂದು ಕುಟುಂಬವೂ ಸ್ವಾತಂತ್ರ್ಯ, ಸಮಾನತೆ ಮತ್ತು ಗೌರವ ನೀಡುವ ಮೂಲಕ ಶಿಕ್ಷಣ, ದುಡಿಮೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಆಕೆ ಯಾರಿಗಿಂತಲೂ ಕಡಿಮೆಯಿಲ್ಲದಂತೆ ಬದುಕಿ ಮಾದರಿಯಾಗುವಳು. ಹಾಗಾಗಿ ಸೌಮ್ಯ ಅವರ ಈ ಎರಡು ಕೃತಿಗಳಲ್ಲಿ ತಮ್ಮತನವನ್ನು ಉಳಿಸಿಕೊಳ್ಳುತ್ತಲೇ ಸಮಾಜದಲ್ಲಿ ಬಾಳಿದ‌ ಸಂತ ಮಹಿಳೆಯರ ಆದರ್ಶಗಳನ್ನು ನಮಗೆ ಪರಿಚಯಿಸಿದ್ದಾರೆಂದು ಲೇಖಕಿಯರನ್ನು  ಅಭಿನಂದಿಸಿ ಗೌರವಿಸಿ ಶುಭಕೋರಿದರು.  ‌ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಅವರು ಭಾರತೀಯ ಕೌಟುಂಬಿಕ ವ್ಯವಸ್ಥೆ ಮಹಿಳೆಯರಿಂದ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ  ,   ಡಾ.ಚಿ.ದೇ.ಸೌಮ್ಯ ಅವರ‌ಲ್ಲಿ   ಸತಿಪತಿಗಳೊಂದಾಗದ  ಭಕ್ತಿ ಹಿತವೆನಿಸುವುದಿಲ್ಲ ಎಂದು ಎಂಟುನೂರ ಐವತ್ತು ವರ್ಷಗಳ ಹಿಂದೆಯೇ ಬಸವಣ್ಣನವರು ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿದ್ದಾರೆ.

ಈ ನಿಟ್ಟಿನಲ್ಲಿ ಕುಟುಂಬದಲ್ಲಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳುವೆ ನಡೆಸುವುದೇ  ಭಾರತೀಯ ಸಂಸ್ಕೃತಿಯ ಪ್ರತೀಕ ಎಂದುರು. ಸೌಮ್ಯ ಅವರು ಕೌಟುಂಬಿಕ ವ್ಯವಸ್ಥೆ, ವೃತ್ತಿ ಜೀವನದ ಜೊತೆ ಜೊತೆಗೆ ಸಾಹಿತ್ಯ ಪ್ರೀತಿಯನ್ನು ಕುಟುಂಬದವರ ಸಹಕಾರದಿಂದ ಕನ್ನಡ ಸಾರಸ್ವತ ಲೋಕಕ್ಕೆ ಎರಡು ಒಳ್ಳೆಯ ಕೃತಿಗಳನ್ನು  ನೀಡಿದ್ದಾರೆ ಎಂದು ಶ್ಲಾಘಿಸಿದರು. ಕಳೆ 25 ವರ್ಷಗಳಿಂದ ಉದಯೋನ್ಮುಖ ಲೇಖಕರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುತ್ತಿರುವ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಕಾರ್ಯ‌ನಿಜಕ್ಕೂ  ಸಂತೋಷದಾಯಕವಾದುದೆಂದರು. ಕನ್ನಡದ ಕನ್ನಡಿಯಲ್ಲಿ ಕೃತಿ ಕುರಿತು ಲೇಖಕಿ ಜಯಶ್ರೀ ರಾಜು ಮತ್ತು  ಮಧ್ಯಕಾಲೀನ ಭಾರತದ ಸಂತ ಮಹಿಳೆಯರು ಕೃತಿ ಕುರಿತು ‌ಕನ್ನಡ ಪ್ರಾಧ್ಯಾಪಕರಾದ ಡಾ.ಎಸ್.ಪೂರ್ಣಿಮಾ ಅವರುಗಳು ಬಹಳ ಸೊಗಸಾಗಿ ಪರಿಚಯಿಸಿದರು. 

ಡಾ.ಸೌಮ್ಯ ತಮ್ಮ ಸಾಹಿತ್ಯದ ಬೆಳವಣಿಗೆಗೆ ಸಹಕರಿಸಿ ಪ್ರೋತ್ಸಾಹಿಸಿದ ತನ್ನ ತಂದೆ, ಪತಿ, ಕುಟುಂಬದವರ ಪ್ರೀತಿಯನ್ನು ಸ್ಮರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ ಇಂದು‌ ಸ‌ರ್ಕಾರ, ಪ್ರತಿಷ್ಠಿತ ಸಂಘ ಸಂಸ್ಥೆಗಳ‌ಲ್ಲಿ, ‌ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳೂ ಉಳ್ಳವರು‌, ಜಾತೀಯತೆ, ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗುತ್ತಾ ನಲುಗುತ್ತಿರುವ ಬಗ್ಗೆ ವಿಷಾದಿಸಿದರು. ನಿಜವಾದ ಪ್ರತಿಭೆಗಳಿಗೆ ಪ್ರಶಸ್ತಿ, ಗೌರವ, ವಿವಿಧ ಅಕಾಡೆಮಿಗಳಲ್ಲಿ ಶಿಫಾರಸು ಗಳ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಂಡು ಅಧಿಕಾರ ಅನುಭವಿಸುತ್ತಿರುವ ಬಗ್ಗೆ  ಪ್ರಸ್ತಾಪಿಸಿದರು. ವೇದಿಕೆಯನ್ನು ಕವಿಗಳಾದ‌ ಡಾ.ಕೃಷ್ಣ ಹಾನ್ ಬಾಳ್, ಲತಾ ಚಿಕ್ಕ ಬಾಣಾವರ, ಸುಮನ ಸೊರಬ, ಡಾ.ಜಗದೀಶ್  ಅಚ್ಚುಕಟ್ಟಾಗಿ ನಿರ್ವಹಿಸಿದರು. ಗಾಯಕರಾದ ಭೀಮ್ ಜೀ, ಅಮೋಘ ಮೈಸೂರು, ರಾಜಣ್ಣ ಕನ್ನಡ ಗೀತೆಗಳನ್ನು ಹಾಡಿ ಮನರಂಜಿಸಿದರು. 


Post a Comment

0Comments

Post a Comment (0)