ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭ

varthajala
0

 ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶ್ರೀ ಗೋವರ್ಧನಗಿರಿ ಕ್ಷೇತ್ರ, ಉಡುಪಿ ಶ್ರೀ ಪುತ್ತಿಗೆ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ಸುಶ್ರೀನ್ದ್ರತೀರ್ಥ ಶ್ರೀಪಾದರ ಆದೇಶದಂತೆ ಏಪ್ರಿಲ್ 13 ರಿಂದ ಏಪ್ರಿಲ್ 28 ರ ತನಕ ಒಟ್ಟು 15 ದಿನಗಳ ವಸಂತ ಧಾರ್ಮಿಕ ಶಿಬಿರವನ್ನು ಯಶಸ್ವಿಯಾಗಿ ಏರ್ಪಡಿಸಲಾಯಿತು. ಶಿಬಿರದಲ್ಲಿ ಒಟ್ಟು 70 ವಿದ್ಯಾರ್ಥಿಗಳು ಭಾಗವಹಿಸಿದರು. ಉಪನೀತ ವಟುಗಳು ಅನುಪನೀತ ಬಾಲಕರು ಮತ್ತು ಹುಡುಗಿಯರು ಭಾಗವಹಿಸಿದ್ದರು. ಶಿಬಿರದಲ್ಲಿ ಸಂಧ್ಯಾವಂದನೆ, ದೇವಪೂಜೆ, ಸ್ತೋತ್ರಗಳು, ಭಜನೆಗಳು, ಯೋಗ, ರಾಮಾಯಣ ಕಥೆಗಳು, ಭಗವದ್ಗೀತೆ, ಪಂಚಾಗ ಪರಿಚಯ, ಸಂಸ್ಕೃತ ಸಂಭಾಷಣೆ, ರಂಗೋಲಿ, ಹೂವು ಕಟ್ಟುವುದು, ಇನ್ನೂ ಅನೇಕ ಸಂಪ್ರದಾಯಗಳ ತರಬೇತಿಗಳನ್ನು ನೀಡಲಾಯಿತು. ಏಪ್ರಿಲ್ 28 ರಂದು ಶಿಬಿರದ ಸಮಾರೋಪ ಕಾರ್ಯಕ್ರಮವು ಮಠದಲ್ಲಿ ನಡೆಯಿತು. 

ಸಮಾರೋಪದ ಅಧ್ಯಕ್ಷೆತೆಯನ್ನು ಉಡುಪಿಯ ಪುತ್ತಿಗೆ ವಿದ್ಯಾಪೀಠದ ಪ್ರಾಂಶುಪಾಲರಾದ ವಿದ್ವಾನ್ ಶ್ರೀ ಸುನೀಲ ಆಚಾರ್ಯ ವಹಿಸಿದ್ದರು. ಅತಿಥಿಗಳಾಗಿ ಶಿಬಿರದ ತರಬೇತುದಾರರಾದ ಶ್ರೀ ವಿದ್ವಾನ್ ವಾದಿರಾಜ ಅಗ್ನಿಹೋತ್ರಿ, ಶ್ರೀ ಸುಬ್ರಹ್ಮಣ್ಯ ನಕ್ಷತ್ರಿ, ಶ್ರೀಮತಿ ವಿದೂಷಿ ಸಮನಾ ಕೃಷ್ಣರಾಜ್ ಭಟ್, ಶ್ರೀಮತಿ ಸೌಮ್ಯ ಜೋಶಿ, ಶ್ರೀಮತಿ ಪ್ರತಿಮಾ ಉಡುಪ, ಶ್ರೀ ಶ್ರೀಪತಿ ಉಪಾಧ್ಯಾಯ, ಶ್ರೀಮತಿ ಮಲ್ಲಿಕಾ ನಕ್ಷತ್ರಿ, ಶ್ರೀಮತಿ ಸ್ನೇಹಾ ಸಂತೋಷ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪೋಷಕರ ಮುಂದೆ ಪ್ರದರ್ಶಿಸಿದರು. 

ಅಧ್ಯಕ್ಷರು ಮತ್ತು ಅಥಿತಿಗಳು ಶಿಬಿರಾರ್ಥಿಗಳಿಗೆ ಮತ್ತು ಪೋಷಕರಿಗೆ ಹಿತವಚನಗಳನ್ನು ನೀಡಿ ಪ್ರಶಂಸಿದರು. ಪೋಷಕರು ಇನ್ನೂ ಇಂತಹ ಶಿಬಿರಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಸೂಚಿಸಿದರು. ಶಿಬಿರದ ಮತ್ತು ಮಠದ ವ್ಯವಸ್ಥಾಪಕರಾದ ಶ್ರೀ ಎ ಬಿ ಕುಂಜಾರು ಶಿಬಿರದ ಅವಲೋಕನವನ್ನು ಮಾಡಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಶಿಬಿರದ ಪ್ರಮಾಣಪತ್ರವನ್ನು ನೀಡಿ ಆಶೀರ್ವದಿಸಿದರು.  ಪುತ್ತಿಗೆ ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞದ ಸಂಕಲ್ಪದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಟಿ ಗೀತಾ ಪುಸ್ತಕಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮವು ತೌಳವ ಮಾಧ್ವ ಒಕ್ಕೂಟದ ಶ್ರೀ ಶಶಿಧರ ಆಚಾರ್ಯ, ಶ್ರೀ ಕೆ  ಪಿ ಸಂತೋಷ್ ಮತ್ತು ಸದಸ್ಯರ ಸಹಯೋಗದೊಂದಿಗೆ ನಡೆಯಿತು. ಮಠದ ವ್ಯವಸ್ಥಾಪರಾದ ಶ್ರೀ ಎ ಬಿ ಕುಂಜಾರು ಎಲ್ಲಾ ಸ್ವಯಂ ಸೇವಕರನ್ನು ಸನ್ಮಾನಿಸಿದರು.

Post a Comment

0Comments

Post a Comment (0)