ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ: ನ್ಯಾ. ಕೃಷ್ಣ ಎಸ್. ದೀಕ್ಷಿತ್ ಕರೆ.

varthajala
0

 ಬೆಂಗಳೂರು : ವ್ಯಾಜ್ಯಗಳನ್ನು ಅನವಶ್ಯಕವಾಗಿ ನ್ಯಾಯಾಲಯಕ್ಕೆ ತಂದು ಸುದೀರ್ಘವಾಗಿ ಬೆಳೆಸುವ ಬದಲು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹೇಳಿದ್ದಾರೆ. ಸೌಂದರ್ಯ ನಗರದ ಸೌಂದರ್ಯ ಕಾನೂನು ಕಾಲೇಜಿನಲ್ಲಿ ವಕೀಲರ ವಾಹಿನಿ ಪತ್ರಿಕೆಯ ಸಹಯೋಗದೊಂದಿಗೆ ಕಾಲೇಜಿನ ಕಾನೂನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರ್ಯಾಯ ವಿವಾದ ಪರಿಹಾರ ಕುರಿತು ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿ, ವ್ಯಾಜ್ಯ ತೀರ್ಮಾನಗಳನ್ನು ನಂಬಿಕೆಯ ಚೌಕಟ್ಟಿನಲ್ಲಿ ಮಾಡುವ ಮೂಲಕ ಸಮಾನ ನ್ಯಾಯ ಪಾಲಿಸಬೇಕು ಎಂದರು.

                            

ಪ್ರಸ್ತುತ ದೇಶದಲ್ಲಿ ಸಾಕಷ್ಟು ಪ್ರಕರಣಗಳು ಹಲವು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿವೆ. ಇದಕ್ಕೆ ವಕೀಲರು ಮತ್ತು ನ್ಯಾಯಾಧೀಶರು ಮಾತ್ರ ಕಾರಣವಲ್ಲ. ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಹೆಚ್ಚುತ್ತಿರುವ ವಿವಾದಮನಸ್ತಾಪಗಳೂ ಕಾರಣ. ಯಾವುದೇ ವ್ಯಾಜ್ಯದ ಮೇಲೆ ಮೇಲ್ಮನವಿಎರಡನೇ ಮೇಲ್ಮನವಿ... ಹೀಗೆ ವರ್ಷಗಟ್ಟಲೆ ಕಾಲಹರಣ ಮಾಡುವುದರಿಂದ ಪ್ರಕರಣಗಳು ಇತ್ಯರ್ಥಗೊಳ್ಳುವುದು ವಿಳಂಬವಾಗುತ್ತಿವೆ. ಹೀಗಾಗಿ ವ್ಯಾಜ್ಯವನ್ನು ಒಂದು ಚೌಕಟ್ಟಿನೊಳಗೆ ಬಗೆಹರಿಸುವ ಅಗತ್ಯವಿದೆ. ಅದಕ್ಕಾಗಿ ವಕೀಲರು ತಮ್ಮ ಬಳಿ ಬರುವ ಕಕ್ಷೀದಾರರಿಗೆ ಈ ಬಗ್ಗೆ ತಿಳಿಹೇಳಿ ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಸಹಕರಿಸಬೇಕು ಎಂದು ತಿಳಿಸಿದರು.

                        

 

ವ್ಯಕ್ತಪಡಿಸುವ ಕಲೆ ಕರಗತವಾಗಬೇಕು: ಜೀವನದಲ್ಲಿಅದರಲ್ಲೂ ಮುಖ್ಯವಾಗಿ ವಕೀಲಿ ವೃತ್ತಿಯಲ್ಲಿ ತಮ್ಮ ವ್ಯಕ್ತಪಡಿಸುವಂತಹ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಕಾನೂನಿನ ವ್ಯಾಖ್ಯಾನದ ಮೇಲೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಇತ್ಯರ್ಥಗೊಳ್ಳುತ್ತವೆ. ಸೂಕ್ತ ವ್ಯಾಖ್ಯಾನದೊಂದಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ವಕೀಲರು ತಮ್ಮ ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು ಎಂದು ಭವಿಷ್ಯದ ವಕೀಲರಿಗೆ ಕಿವಿಮಾತು ಹೇಳಿದರು.

                     

 

ಮಾಹಿತಿಜ್ಞಾನ ಮತ್ತು ಜಾಣ್ಮೆಯ ಬಗ್ಗೆ ಎಲ್ಲರಲ್ಲೂ ಸ್ಪಷ್ಟತೆ ಇರಬೇಕು. ನಮ್ಮ ಜೀವನದ ಉದ್ದೇಶ ಕೇವಲ ಮಾಹಿತಿ ಸಂಗ್ರಹಕ್ಕೆ ಮಾತ್ರ ಸೀಮಿತವಲ್ಲ. ಆ ಮಾಹಿತಿಯನ್ನು ಜಾಣ್ಮೆಯಿಂದ ಜ್ಞಾನವಾಗಿ ಪರಿವರ್ತಿಸಿಕೊಳ್ಳುವ ಮೂಲಕ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದ ನ್ಯಾಯಮೂರ್ತಿಗಳುಇದಕ್ಕೆ ಹಲವು ಕವಿಲೇಖಕರ ಕವಿತೆಲೇಖನಗಳ ಸಾಲುಗಳನ್ನು ಪ್ರಸ್ತಾಪಿಸಿ ಉದಾಹರಣೆ ಮೂಲಕ ವಿವರಿಸಿದರು.

 

ವಕೀಲರ ವಾಹಿನಿ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕ ಡಾ.ಡಿ.ಎಂ.ಹೆಗ್ಡೆ ಮಾತನಾಡಿನ್ಯಾಯದಾನಕ್ಕೆ ಸಂಬಂಧಿಸಿದಂತೆ ಗೆದ್ದವ ಸೋತಸೋತವ ಸತ್ತ ಎಂಬ ಮಾತಿದೆ. ಆದರೆಯಾವುದೇ ಪ್ರಕರಣ ಇರಲಿಇಬ್ಬರಿಗೂ ಸಮಾಧಾನವಾಗುವಂತೆ ಬಗೆಹರಿಸುವ ವ್ಯವಸ್ಥೆ ಹೆಚ್ಚಾಗಬೇಕು. ಅದಕ್ಕಾಗಿ ಈಗ ಪರ್ಯಾಯ ವಿವಾದ ಪರಿಹಾರ ಎಂಬ ವ್ಯವಸ್ಥೆ ಜಾರಿಯಲ್ಲಿದೆ. ನ್ಯಾಯಾಲಯಗಳೂ ಅದಕ್ಕೆ ಸಹಕರಿಸುತ್ತವೆ. ಆದ್ದರಿಂದ ಪರ್ಯಾಯ ವಿವಾದ ಪರಿಹಾರಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.

                               

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ತೀರ್ಪಿನ ಕುರಿತಂತೆ ಮಾತನಾಡಿದ ಡಿ.ಎಂ.ಹೆಗ್ಡೆಪ್ರಪಂಚದ ಎಲ್ಲಾ ನ್ಯಾಯಾಲಯಗಳ 100 ಅತ್ಯಂತ ಶ್ರೇಷ್ಠ ನ್ಯಾಯಮೂರ್ತಿಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ನ್ಯಾ. ದೀಕ್ಷಿತ್ ಅವರು 10ರಲ್ಲಿ ಒಬ್ಬರಾಗಿರುತ್ತಾರೆ. ಅವರ ತೀರ್ಪುಗಳು ಕೇವಲ ಕಾನೂನಿನ ಅಂಶಗಳನ್ನು ಒಳಗೊಂಡಿರುವುದಿಲ್ಲ. ಅವುಗಳಲ್ಲಿ ಜೀವನಾನುಭವಅವರ ಓದಿನ ಜ್ಞಾನ ಅಡಕವಾಗಿರುತ್ತದೆ. ಅವರ ತೀರ್ಪುಗಳನ್ನು ಪುಸ್ತಕ ಮಾಡುವ ಅವಕಾಶ ಕೊಟ್ಟರೆ ವಕೀಲರ ವಾಹಿನಿ ಮೂಲಕ ಪುಸ್ತಕ ಹೊರತರಲು ತಾವು ಸಿದ್ಧ ಎಂದರು.

 

ಸೌಂದರ್ಯ ಕಾಲೇಜಿನ ಅಧ್ಯಕ್ಷ ಸೌಂದರ್ಯ ಪಿ. ಮಂಜಪ್ಪ ಮಾತನಾಡಿ, ನರ್ಸರಿಯಿಂದ ಕಾನೂನು ಕಾಲೇಜಿನವರೆಗೆ ಎಲ್ಲಾ ರೀತಿಯ ಶಿಕ್ಷಣವನ್ನು ತಮ್ಮ ಶಿಕ್ಷಣ ಸಂಸ್ಥೆ ಮೂಲಕ ನೀಡಲಾಗುತ್ತಿದೆ. ವಿಶ್ವದಲ್ಲಿ ಭಾರತದ ಮಕ್ಕಳಿಗೆ ಮತ್ತು ಅವರ ಜ್ಞಾನಕ್ಕೆ ಒಳ್ಳೆಯ ಬೇಡಿಕೆ ಇದೆ. ಹೀಗಾಗಿಯೇ ಸಾಕಷ್ಟು ಮಂದಿ ವಿದೇಶಗಳಿಗೆ ಹೋಗುತ್ತಾರೆ. ಅದರ ಬದಲು ಅವರು ಇಲ್ಲಿಯೇ ಉಳಿದು ದೇಶಕ್ಕಾಗಿ ಸೇವೆ ಸಲ್ಲಿಸುವಂತಹ ವ್ಯವಸ್ಥೆ ಸೃಷ್ಟಿಯಾಗಬೇಕು. ಇದಕ್ಕೆ ನಮ್ಮ ಸಂಸ್ಥೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ಹೇಳಿದರು.

                        

 ಕಾರ್ಯಕ್ರಮದಲ್ಲಿ ಸೌಂದರ್ಯ ಎಜುಕೇಷನಲ್ ಟ್ರಸ್ಟ್ ನ ಸಿಇಒ ಕೀರ್ತನ್ ಕುಮಾರ್ಸೌಂದರ್ಯ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ.ಮಹೇಶ್ಲೀಗಲ್ ಸೆಲ್ ಕ್ಲಿನಿಕ್ ನ ಫ್ಯಾಕಲ್ಟಿ ಕೋ-ಆರ್ಡಿನೇಟರ್ ಹನುಂತಗೌಡ ಎನ್.ಎ.ವಕೀಲರ ವಾಹಿನಿ ಪತ್ರಿಕೆಯ ಪ್ರಶಾಂತ್ ಚಂದ್ರಚಂದ್ರಕಾಂತ್ ಕನೂರ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)