ಬೆಂಗಳೂರು: ಹಿರಿಯ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ, ಡಿಕೆಶಿ ಅವರ ಸದಾಶಿವನಗರದ ನಿವಾಸದಲ್ಲಿ ಶುಕ್ರವಾರ ಅವರನ್ನು ಭೇಟಿಯಾದ ಅನಿಲ್ ಕುಂಬ್ಳೆ ಕೆಲಕಾಲ ಸೌಹಾರ್ಯದಯುತ ಮಾತುಕತೆ ನಡೆಸಿದ್ದಾರೆ,
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವೈಯುಕ್ತಿಕ ಕಾರ್ಯದ ನಿಮಿತ್ತ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೆ ಎಂದು ತಿಳಿಸಿದರು, ಇದೇ ವೇಳೆ ಆರ್‌ಸಿಬಿ ತಂಡ ಬಗ್ಗೆ ಮಾತನಾಡಿದ ಅವರು ಈ ಸಲ ಕಪ್ ನಮ್ದೇ ಎಂದು ಹೇಳಬೇಡಿ, ಹಾಗೆ ಹೇಳಿದಾಗಲೆಲ್ಲಾ ನಾವು ಸೋಲುತ್ತೇವೆ ಎಂದು ನುಡಿದರು,
ಅನಿಲ್ ಕುಂಬ್ಳೆ ಭೇಟಿಯ ಬಗ್ಗೆ ಡಿ ಕೆ ಶಿವಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊAಡಿದ್ದು, ಅವರೊಡನೆ ಕಳೆದ ಸೌಹಾರ್ದಯುತ ಕ್ಷಣಗಳು ಋಷಿ ನೀಡಿತು ಎಂದಿದ್ದಾರೆ,