ವಜ್ರ ಉದ್ಯಮಿ ಮೆಹುಲ್ ಚೋಕ್ಸಿ ARREST

varthajala
0

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಹಣಕಾಸು ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ, ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ ಸೇರಿದಂತೆ ಭಾರತೀಯ ತನಿಖಾ ಸಂಸ್ಥೆ ಕೋರಿಕೆ ಮೇರೆಗೆ  ಬಂಧನ ನಡೆದಿದೆ.


ಭಾರತದಲ್ಲಿ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದ್ದು, ಮುಂಬೈ ನ್ಯಾಯಾಲಯದ ಆದೇಶದ ಅನ್ವಯ ಅವರನ್ನು ಬಂಧಿಸಲಾಗಿದೆ. 2018ರಿಂದ ತಲೆಮರೆಸಿಕೊಂಡಿದ್ದ ಮೆಹುಲ್ ಚೋಕ್ಸಿಯನ್ನು ಏಪ್ರಿಲ್ 11ರಂದು ಬಂಧಿಸಲಾಗಿದೆ. ಬಂಧನ ಸಮಯದಲ್ಲಿ ಅವರು ಯುರೋಪ್ ದೇಶಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ವಾಸವಿದ್ದುದು ವರದಿಯಾಗಿದೆ.

ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಗೆ ಸುಮಾರು ₹13,500 ಕೋಟಿ ರೂಪಾಯಿಗಳಷ್ಟು ವಂಚನೆ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ವಂಚನೆಯು ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಬ್ಯಾಂಕ್ ಹಗರಣಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳ ಜೊತೆ ಸಂಚು ರೂಪಿಸಿ ನಕಲಿ ಖಾತೆಗಳ ಮೂಲಕ ವಿದೇಶಿ ಸಾಲಗಳನ್ನು ಪಡೆದು ಹಣವನ್ನು ವಂಚಿಸಿದ ತನಿಖೆಗಳಲ್ಲಿ ಬೆಳಕಿಗೆ ಬಂದಿದೆ.


Post a Comment

0Comments

Post a Comment (0)