ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅಪ್ಪು ಸ್ಮಾರಕ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಮೇ 24ರಂದು ಆಯೋಜಿಸಲಾಗಿದೆ. ಇದರ ಕುರಿತು ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾಹಿತಿ ನೀಡಿದರು.
ಎ.ಅಮೃತ್ ರಾಜ್ ರವರು ಮಾತನಾಡಿ ನಗುಮೊಗದ ಒಡೆಯ ಎಂಬ ಕೀರ್ತಿ ಇರುವ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ರವರು ನಮ್ಮ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅವರ ಸರಳತೆ, ಮಾನವೀಯತೆ, ಸಮಾಜ ಸೇವೆ, ಕ್ರೀಡಾ ಮನೋಭಾವನೆಯನ್ನು ನಮ್ಮ ಸಂಘವು ಆಳವಡಿಸಿಕೊಂಡು ಬಂದಿದೆ.
ಕ್ರೀಡೆ ಎಂದರೆ ಅಪ್ಪುವಿಗೆ ಅಚ್ಚುಮೆಚ್ಚು ಅದರಿಂದ ಅಪ್ಪು ಸ್ಮಾರಕ ಕ್ರಿಕೆಟ್ ಸ್ನೇಹಪೂರ್ವಕ ಪಂದ್ಯಾವಳಿ ಆಯೋಜಿಸಲಾಗಿದೆ.
ನಾಲ್ಕು ತಂಡಗಳ ನಡುವೆ ಪಂದ್ಯಾವಳಿಗಳು ನಡೆಯಲಿದೆ 1)ಪೊಲೀಸ್ ತಂಡ 2)ಬೆಂಗಳೂರು ವಕೀಲರ ತಂಡ 3) ಬಿಬಿಎಂಪಿ ನೌಕರರ ತಂಡ 4) ಮಾಧ್ಯಮ ಬಳಗದ ತಂಡ ನಡುವೆ ಲೆದರ್ ಬಾಲ್ ಕ್ರಿಕೆಟ್ ಪಂದ್ಯಗಳು ಜರುಗಲಿದೆ. ಪ್ರಥಮ ಬಹುಮಾನ ಒಂದು ಲಕ್ಷ ರೂ ನಗದು ಮತ್ತು ಕಪ್ ಹಾಗೂ ಆಟಗಾರರಿಗೆ ಪ್ರತ್ಯೇಕ ಪಾರಿತೋಷಕ ಹಾಗೂ ದ್ವಿತೀಯ ಬಹುಮಾನ ಐವತ್ತು ಸಾವಿರ ಹಾಗೂ ಕಪ್ ಪ್ರಶಸ್ತಿಯನ್ನು ಇಡಲಾಗಿದೆ.
ಮೇ 24ಪಂದ್ಯಾವಳಿಯನ್ನು ಗಣ್ಯ ಮಹನೀಯರಗಳಿಂದ ಉದ್ಘಾಟನೆಯಾಗಲಿದೆ. ಅಪ್ಪು ರವರ ಸಲ್ಲಿಸಿದ ಸೇವೆ ಚಿರಸ್ಥಾಯಿಯಾಗಿ ಉಳಿಯಬೇಕು, ಎಲ್ಲರು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಬೇಕು ಎಂಬ ಉದ್ದೇಶದಿಂದ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.