ಬೆಂಗಳೂರು : ತ್ಯಾಗರಾಜನಗರದ 3ನೇ ಬ್ಲಾಕ್ ನಲ್ಲಿರುವ ಶ್ರೀ ಅಭಯ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ 'ಶ್ರೀವಜ್ರಕ್ಷೇತ್ರ'ದಲ್ಲಿ ಮೇ 4, ಭಾನುವಾರದಂದು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಜಯಂತಿ ಸಪ್ತಾಹದ ಪ್ರಯುಕ್ತ ಬೆಳಗ್ಗೆ ನರಸಿಂಹಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಪ್ರಣವಾಂಜಲಿ ಪಫಾ೯ಮಿಂಗ್ ಆಫ್ ಆರ್ಟ್ಸ್ ನ ವಿದ್ಯಾರ್ಥಿನಿಯರಾದ ಕು|| ಕೃತಿ, ಕು|| ಭಾವನಾ ಮತ್ತು ಕು|| ತ್ರಿಶಾಲಿ ಇವರಿಂದ ಸಾಮೂಹಿಕ ನೃತ್ಯ ಪ್ರದರ್ಶನ ನಡೆಯಿತು. ನಂತರ ಎಂಟು ವರ್ಷದ ಪುಟ್ಟ ಪ್ರತಿಭೆ ಕು|| ಆದ್ಯ ಮಯ್ಯ ಮಾಡಿದ ನರ್ತನ ಮುಖ್ಯ ಆಕರ್ಷಣೆಯಾಗಿತ್ತು.
ಈ ಕಾರ್ಯಕ್ರಮದ ನೇತೃತ್ವವನ್ನು ಪ್ರಣವಾಂಜಲಿ ಟ್ರಸ್ಟ್ ನ ವಿದುಷಿ ಶ್ರೀಮತಿ ಗಾಯತ್ರಿ ಮಯ್ಯ ಮತ್ತು ವಿದುಷಿ ಶ್ರೀಮತಿ ಪವಿತ್ರಾ ಪ್ರಶಾಂತ್ ವಹಿಸಿದ್ದರು. ದೇವಸ್ಥಾನದ ಸಹಾಯಕ ಅರ್ಚಕರಾದ ಶ್ರೀ ನರಹರಿ ಆಚಾರ್ಯ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಪ್ರಸಾದ ನೀಡಿ ಆಶೀರ್ವದಿಸಿದರು.