ಕೇರಳದಲ್ಲಿನ `ಶಿವೋಹಂ ಟೆಂಪಲ್ ಆಫ್ ಕಾನ್ಶಿಯಸ್ನೆಸ್ ' ವತಿಯಿಂದ ಪುರಸ್ಕಾರ ! ಸನಾತನ ಸಂಸ್ಥೆಯ ಶ್ರೀಚಿತ್ ಶಕ್ತಿ ( ಸೌ.) ಅಂಜಲಿ ಗಾಡಗೀಳ ಇವರಿಗೆ 'ಓಂ ಶಿವಶಕ್ತಿ ಓಂ' ಪ್ರಶಸ್ತಿ ಪ್ರದಾನ !

varthajala
0


 ಕಣ್ಣೂರು (ಕೇರಳ) - ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಹಾಗೂ ಮಹರ್ಷಿಗಳ ಆಜ್ಞೆಯಂತೆ ದೇಶವಿದೇಶದ ಲಕ್ಷಾಂತರ ಕಿಲೋ ಮೀಟರ್ ಪ್ರವಾಸ ಮಾಡುವ, ಹಸಿವೆ ಬಾಯಾರಿಕೆ, ಮಳೆ ಬಿಸಿಲು ಇವುಗಳನ್ನು ಲೆಕ್ಕಿಸದೆ ಧರ್ಮಪ್ರಸಾರ ಮಾಡುವ ಶ್ರೀಚಿತ್ ಶಕ್ತಿ ( ಸೌ.) ಅಂಜಲಿ ಗಾಡಗೀಳ ಇವರಿಗೆ 'ಓಂ ಶಿವಶಕ್ತಿ ಓಂ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೇರಳದಲ್ಲಿನ 'ಶಿವೋಹಂ ಟೆಂಪಲ್ ಆಫ್ ಕಾನ್ಶಿಯಸ್ನೆಸ್ ಟ್ರಸ್ಟ್' ವತಿಯಿಂದ ಈ ಪ್ರಶಸ್ತಿ ನೀಡಲಾಯಿತು. ಆಂತರಿಕ ಶಕ್ತಿ, ದೃಢ ನಿಶ್ಚಯ ಮತ್ತು ಕೃಪಾಶೀರ್ವಾದದ ಮೂಲಕ ನೇತೃತ್ವ ವಹಿಸಿ ಮಾರ್ಗದರ್ಶನ ಮಾಡುವ ಮಹಿಳೆಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

'ಸನಾತನ ಏಕಲ ವಾಸ್ತುರತ್ನ'ದ ಕುಲಪತಿ ಬ್ರಹ್ಮರ್ಷಿ ಡಾ. ಸೋಮನಾಥ ರಾಘವನ್ ಆಚಾರ್ಯ ಇವರು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಪ್ರಶಸ್ತಿ ನೀಡಿದರು. 'ಶಿವೋಹಂ ಸ್ಪಿರಿಚುವಲ್ ವೆಲನೆಸ್ ಸೆಂಟರ್'ನ ಮುಖ್ಯ ಚಿಕಿತ್ಸಾ ತಜ್ಞ ಡಾ. ಜ್ಯೋತಿ ಶಮಿತ ಇವರು ಪ್ರಮಾಣ ಪತ್ರ ನೀಡಿದರು, ಹಾಗೂ ಸುಧಾ ರವೀಂದ್ರನಾಥ ಇವರು ಶಾಲು ನೀಡಿ ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಗೌರವಿಸಿದರು. 'ಶಿವೋಹಂ ಟೆಂಪಲ್ ಆಫ್ ಕಾನ್ಶಿಯಸ್ನೆಸ್ ಟ್ರಸ್ಟ್' ಅಧ್ಯಾತ್ಮ, ಸಂಸ್ಕೃತಿ, ಧ್ಯಾನ, ಯೋಗ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಸಂಸ್ಥೆಯಾಗಿದ್ದು ಅದು ವಿಶ್ವಸಂಸ್ಥೆಯ ‘ಯುಎನ್ ಗ್ಲೋಬಲ್ ಕಾಂಪ್ಯಾಕ್ಟ್' ಜೊತೆಗೆ ಸಂಬಂಧ ಹೊಂದಿದೆ.

ಪ್ರಶಸ್ತಿ ಸ್ವೀಕರಿಸುವಾಗ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, ಈ ಪ್ರಶಸ್ತಿ ನನಗೆ ದೊರೆತಿಲ್ಲ, ಇದು ನಮ್ಮ ಗುರುಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ದೊರೆತಿದೆ. ನಾನು ಕೇವಲ ಮಾಧ್ಯಮವಾಗಿದ್ದೇನೆ. ಗುರುಗಳ ಕೃಪೆಯಿಂದಲೇ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಗುರುದೇವರ ಕೃಪೆಯಿಂದ ನಮ್ಮ ಜೀವನ ಸಾತ್ತ್ವಿಕವಾಗುತ್ತದೆ ಮತ್ತು ನಮ್ಮ ಜೀವನಕ್ಕೆ ಒಂದು ಅರ್ಥ ದೊರೆಯುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು 'ಮನುಷ್ಯ ಜನ್ಮದ ಮುಖ್ಯ ಉದ್ದೇಶ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಾಗಿದೆ, ಇದನ್ನು ಮನಸ್ಸಿನ ಮೇಲೆ ಬಿಂಬಿಸಿ ಸಮಾಜವನ್ನು ಅಧ್ಯಾತ್ಮ ಮತ್ತು ಸಾಧನೆಯ ಕಡೆಗೆ ಹೊರಳಿಸಿದ್ದಾರೆ. ಸಾಧನೆಯಿಂದ ವ್ಯಕ್ತಿಯ ಜೀವನದಲ್ಲಿ ಪ್ರತಿಯೊಂದು ಕರ್ಮ ಸಾತ್ವಿಕವಾಗುತ್ತದೆ, ಆಗ ಈಶ್ವರಪ್ರಾಪ್ತಿ ದೂರ ಇರುವುದಿಲ್ಲ. ಸಮಾಜದಲ್ಲಿ ಸಾಧನೆಯ ಪ್ರಚಾರ ಮಾಡುವುದು ಮತ್ತು ಸಮಾಜಕ್ಕೆ ಸಮಷ್ಟಿ ಸಾಧನೆಯ ಬಗ್ಗೆ ತಿಳಿಸುವುದು ನಮ್ಮ ಧರ್ಮವಾಗಿದೆ. ಆದ್ದರಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವುದರಿಂದ ನಮ್ಮ ರಾಷ್ಟ್ರ ಸಾತ್ವಿಕವಾಗುವುದು, ಎಂದೂ ಅವರು ಹೇಳಿದರು.
ಈ ಸಮಯದಲ್ಲಿ ಬ್ರಹ್ಮಶ್ರೀ ಡಾ. ಸೋಮನಾಥ ರಾಘವನ್ ಆಚಾರ್ಯ ಇವರು, ನಮ್ಮ ಗುರುಗಳ ಕೃಪಾಶೀರ್ವಾದ ಲಭಿಸಿರುವುದರಿಂದ ನಾವು ಅಧ್ಯಾತ್ಮದ ಮಾರ್ಗದಲ್ಲಿ ಮಾರ್ಗಕ್ರಮಣ ಮಾಡಲು ಸಾಧ್ಯವಾಗುತ್ತದೆ ಹಾಗೂ, ಜಾಗತಿಕ ಶಾಂತಿ ಸಂಘಟನೆಯ 'ಅಂತರಾಷ್ಟ್ರೀಯ ಮಹಾಸಚಿವ ಪ್ರಾ. ಡಾ. ಸುರೇಶ ಕೆ ಗುಪ್ತನ್ ಇವರು, ಜಗತ್ತಿನಲ್ಲಿ ಶೇಕಡ ೬೫ ರಷ್ಟು ಜನರಲ್ಲಿ ಖಿನ್ನತೆ ಕಂಡು ಬರುತ್ತದೆ. ಈ ಎಲ್ಲಾ ಖಾಯಿಲೆಗಳಿಗೆ ಮಾನಸಿಕ ಭಾವನೆಯೇ ಕಾರಣವಾಗಿದೆ. ಈ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಆವಶ್ಯಕವಾಗಿದೆ. ಶಿವೋಹಂ ಟೆಂಪಲ್ ಆಫ್ ಕಾನ್ಶಿಯಸ್ನೆಸ್ ಟ್ರಸ್ಟಿನ ಆಡಳಿತ ಸಂಚಾಲಕ ಡಾ. ಸಿ. ವಿ. ರವೀಂದ್ರನಾಥ್ ಇವರ ಸುಪುತ್ರಿ ಶುಭ  ರವಿಂದ್ರನಾಥ ಇವರು ಕಾರ್ಯಕ್ರಮದ ಆರಂಭದಲ್ಲಿ ಎಲ್ಲರಿಗೂ ಸ್ವಾಗತ ಕೋರಿದರು. ಅದರ ನಂತರ 'ನಿರ್ವಾಣ ಶಟ್ಕಂ’ ಹೇಳಲಾಯಿತು. ಕೃಷ್ಣ ಬೀಚ್ ರೆಸಾರ್ಟ್ ನ ಶ್ರೀ. ಸುಮಲ ಇವರು ಆಭಾರ ಮನ್ನಿಸಿದರು.                          

ತಮ್ಮ ಸವಿನಯ,
                                                                                                       
ಶ್ರೀ. ಚೇತನ ರಾಜಹಂಸ ,
ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 7775858387)

Post a Comment

0Comments

Post a Comment (0)