"ಅಂತರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಉದ್ಘಾಟನೆ

varthajala
0

 ಮಾಧ್ಯಮ‌ ವೃತ್ತಿ ಜೊತೆಗೆ ರಾಜಯೋಗ ಅಧ್ಯಯನ ಮಾಡಿ: ಕೃಷ್ಣಕುಮಾರ್

ಮೌಂಟ್ ಅಬು ರಾಜಸ್ಥಾನ:  ದೇಶದ ಪ್ರತಿಯೋರ್ವ ಮಾಧ್ಯಮಿ ತನ್ನ ವೃತ್ತಿಪರತೆ ಜೊತೆಗೆ
ಪ್ರಜಾಪಿತಾ ಬ್ರಹ್ಮಾಕುಮಾರಿ  ಈಶ್ವರಿಯ  ವಿಶ್ವವಿದ್ಯಾಲಯ ರಾಜಯೋಗ ಕೇಂದ್ರಗಳಲ್ಲಿ
ಕಲಿಸಲಾಗುವ ರಾಜಯೋಗ ಶಿಬಿರದಲ್ಲಿ‌ ಭಾಗವಹಿಸಿ  ಅದನ್ನು ಅಧ್ಯಯನಗೈದು ಇತರರಿಗೂ
ತಿಳಿಸಬೇಕೆಂದು ರಾಜಸ್ಥಾನ ಸರ್ಕಾರದ  ವಾಣಿಜ್ಯ ಹಾಗೂ ಕೈಗಾರಿಕಾ ಮಂತ್ರಿ ಗಳಾದ್
ಕೃಷ್ಣಕುಮಾರ್ ವೈಷ್ಣವಿ ಕರೆ ನೀಡಿದರು.


ಶುಕ್ರವಾರ ಮೌಂಟ್ ಅಬುದಲ್ಲಿರುವ ಜ್ಞಾನ ಸರೋವರದಲ್ಲಿ ಜರುಗುತ್ತಿರುವ ಅಂತರಾಷ್ಟ್ರೀಯ
ಮಾಧ್ಯಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
  ಬ್ರಹ್ಮಾಕುಮಾರಿ ಸಂಸ್ಥೆಯು ಮಾಡುವ ಕಾರ್ಯ ಅತ್ಯಂತ ಶ್ರೇಷ್ಠವಾಗಿದ್ದು, ಅವರ
ಸಕಾರಾತ್ಮಕ ಸತ್ಕಾರ್ಯಗಳಿಗೆ ಕೈಜೋಡಿಸಬೇಕಿದೆ ಎಂದರು.
 ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಣಿ ರಾಜುಯೋಗಿನಿ ಬ್ರಹ್ಮಾ ಕುಮಾರಿ
ಸುದೇಶ್  ದೀದೀ ಅವರು ಮಾತನಾಡಿ, ಇಂದು ಶಾಂತಿಯ ಅವಶ್ಯಕತೆ ಇದ್ದು ನಾವು ನಮ್ಮ
ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ಕೊಡಬೇಕಾಗಿದೆ . ನೀವೆಲ್ಲರೂ ಶಾಂತಿಯ ಹೂವಾಗಿ
ಪರಿಮಳ  ಹರಿಸಬೇಕು. ಈ ಪಿಸ್ ಎಂಬ ಹೂವಿನ ಪೆಟಲ್ಸ್
1.ಪಾವರ್,2.ಎಕ್ಸರ್ಸೈಜ್,3.ಎಕ್ಷನ್,4.ಕೂಲ್ 5.ಎನರ್ಜಿ,ಎನ್ಲೈಟ್ಮೆಂಟ್. ಅಗಿದೆ.ಎಂದು
ವಿವಿರಿಸಿ ಶಾಂತಿಯ ಅನುಭವ ಮಾಡಿ ಎಂದು ಕರೆ ನೀಡಿದರು.
ಸಂಸ್ಥೆಯ ಶಿಕ್ಷಣ ವಿಭಾಗದ. ಸಚಿವರಾದ ಡಾ. ಮೃತ್ಯುಂಜಯ ಭಾಯಿ ಮಾತನಾಡಿ, ಇಂದು
ವಿಶ್ವದಲ್ಲಿ  ಅಶಾಂತಿ ತುಂಬಿ ತುಳುಕಾಡುತ್ತಾ ಇದೆ. ಮನೆ ಮನಸಲ್ಲಿ ಅಶಾಂತಿ
ಹೋಗಲಾಡಿಸಲು, ದಿನಕ್ಕೆ 10 ನಿಮಿಷಗಳ ಕಾಲ ಧ್ಯಾನ ಮತ್ತು ಭಗವಂತನ ಮಹಾವಾಕ್ಯಗಳನ್ನು
ಪಠಣ ಮಾಡಬೇಕೆಂದು ಹೇಳಿದರು.
ಜೈಪೂರ ಕುಶಾಭಾವು ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಡಾ.ಮಾನಸಿಂಗ್ ಪರಮಾರ
ಮಾತನಾಡಿ, ಸುದ್ದಿಗಳಲ್ಲಿ ಸರಿಯಾದ ತಿಳುವಳಿಕೆ ನೀಡುವದು ಮೀಡಿಯಾ ಮುಖ್ಯ
ಉದ್ದೇಶವಾಗಿರಬೇಕು. ಇಲ್ಲಿ ಶ್ರೀಕೃಷ್ಣನ ಸಮಾನ ಪಾತ್ರ ಅಭಿನಯಿಸಬೇಕಾಗಿದೆ. ಎಂದು
ಮಾನ್ಸಿಂಗ್ ಪರಮಾರ್  ತಿಳಿಸಿದರು.
ಹೈದರಾಬಾದದ್ ಮೀಡಿಯಾ ವಿಂಗ್ಸ್  ಬ್ರಹ್ಮಕುಮಾರಿ ಸರಳಾ  ಅವರು ಕಾರ್ಯಕ್ರಮದ ಉದ್ದೇಶ
ತಿಳಿಸಿ ಶುಭ ಹಾರೈಸಿದರು.
ಸಂಸ್ಥೆಯ ಶಿಕ್ಷಣ ವಿಭಾಗದ ಸಹ ಸಚಿವ ಬ್ರಹ್ಮಕುಮಾರಿ ಶೀಲು ಅವರು 5 ನಿಮಿಷ ಕಾಲ
ಧ್ಯಾನದ ಮೂಲಕ ಎಲ್ಲರಿಗೂ ಶಾಂತಿಯ ಅನುಭವ ಮಾಡಿಸದರು.
ಮೌಂಟ್ ಅಬು ಮೀಡಿಯಾ ವಿಂಗನ ಮುಖ್ಯಸ್ಥರಾದ ಬಿ.ಕೆ ಕರುಣಾ ಭಾಯಿ ಪ್ರಾಸ್ತಾವಿಕ ಮಾತನಾಡಿದರು.
ಆರಂಭದಲ್ಲಿ ಬಂದಿರುವ ಅತಿಥಿಗಳಿಗೆ ಬ್ರಹ್ಮ ಕುಮಾರ್ ಕೋಮಲ್ ಅವರು  ಸ್ವಾಗತ ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಜೈಪುರ ಮೀಡಿಯಾ ವಿಂಗ್ಸ್ ನ   ಬ್ರಹ್ಮಕುಮಾರಿ ಚಂದ್ರಕಲಾ
ಮಾಡಿದರು.
ಮಧ್ಯಪ್ರದೇಶ ಎಮ್.ಎಲ್.ಸಿ.ಎನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂಜಯ ದ್ವಿವೇದಿ,
ಜೈಪುರ ಶಾಸಕರು ಹಾಗೂ ಮಹಾನಗರ ಪತ್ರಿಕೆಯ ಮುಖ್ಯ ಸಂಪಾದಕರಾದ ಡಾ.ಗೋಪಾಲ ಶರ್ಮಾ ,
ದೆಹಲಿಯ ದೈನಿಕ ಜಾಗರಣ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ವಿಷ್ಣು ಪ್ರಕಾಶ
ತ್ರಿಪಾಠಿ ಹಾಗೂ ಇತರರು ಉಪಸ್ಥಿತರಿದ್ದರು.
 ಸಮ್ಮೇಳನದಲ್ಲಿ ಇಂದು :* -ಮೇ 2 ರೀಂದ ಮೇ.5 ರ ವರೆಗೆ ಪ್ರಜಾಪಿತಾ
ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯ, ಪ್ರಧಾನ ಕೇಂದ್ರವಾದ ಮೌಂಟ್ ಅಬುವಿನ
ಜ್ಞಾನ ಸರೋವರ ದಲ್ಲಿ ಅಂತರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಆರಂಭವಾಯಿತು. ಇದರಲ್ಲಿ ದೇಶದ
ಸುಮಾರು 400, ಕರ್ನಾಟಕದ 40 ಸೇರಿ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ರಾಜಯೋಗ ಶಿಬಿರದ ಭಾಗ ಒಂದರಲ್ಲಿ ದೈನಂದಿನ ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಧ್ಯಾನ.
ಎರಡನೇ ಭಾಗದಲ್ಲಿ ಆಂತರಿಕ ಶಕ್ತಿಯನ್ನು ಗುರುತಿಸುವುದು.
ಮೂರನೇ ಭಾಗದಲ್ಲಿ ಪರಮಾತ್ಮನನ್ನು ಅರ್ಥ ಮಾಡಿಕೊಳ್ಳುವುದು.
ನಾಲ್ಕನೇ ಭಾಗದಲ್ಲಿ ರಾಜಯೋಗ ಧ್ಯಾನದ ತಂತ್ರ. ರಾಜಯೋಗದ ಐದನೇ ಭಾಗದಲ್ಲಿ ಜೀವನದಲ್ಲಿ
ಯಶಸ್ವಿಗೆ ಕರ್ಮದ ತತ್ವಶಾಸ್ತ್ರ.
ಜಾಗತಿಕ ಶಾಂತಿ ಮತ್ತು ಸಾಮರ್ಯಸ್ಯದ ಮುನ್ನಡಿಗಾಗಿ ಮಾಧ್ಯಮದ ಪಾತ್ರದ ಬಗ್ಗೆ ಹೆಚ್ಚಿನ
ವಿವರ ನೀಡಲಾ ಗುವುದು.
ಮಾಧ್ಯಮ ನೈತಿಕತೆ ಹೊಣೆಗಾರಿಕೆ ಮತ್ತು ಸ್ವಯಂ ಮೌಲ್ಯಮಾಪನ.
ಒತ್ತಡ ಮುಕ್ತ ಜೀವನ ಶೈಲಿ.
ನಕಲಿ ಸುದ್ದಿ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಯನ್ನು ಎದುರಿಸುವುದು.
ಮಾಧ್ಯಮದಲ್ಲಿನ ಬದಲಾವಣೆಯ ಸವಾಲುಗಳನ್ನು ನಿವಾರಿಸುವುದು.
ಸಮಯದ ಆಧ್ಯಾತ್ಮಿಕ ಸಶಕ್ತಿಕರಣ ಕರೆ.
ಸಾಮಾಜಿಕ ಮಾಧ್ಯಮದಲ್ಲಿ AI ಪ್ರಯೋಗ ಲಾಭ ಮತ್ತು ನಸ್ಟ್ . ಮಾಧ್ಯಮ ವೃತ್ತಿಪರರಿಗೆ
ಯಾವ ಅಧಿಕಾರ ನೀಡಬಹುದು? ಮೊದಲಾದ ವಿಷಯಗಳ ಬಗ್ಗೆ ಕಮ್ಮಟಗಳು ನಡೆಯಲಿದೆ.

Post a Comment

0Comments

Post a Comment (0)