ಸ್ಯಾಂಡಲ್ ಸೋಪ್ ಅನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಗುರಿ- ಎಂ ಬಿ ಪಾಟೀಲ್

varthajala
0

 

ಬೆಂಗಳೂರು:MSDL ಗೆ ನಟಿ ತಮನ್ನಾಳನ್ನು ರಾಯಭಾರಿಯಾಗಿ ನೇಮಿಸದ್ದಕ್ಕೆ ಕನ್ನಡಪರ ಸಂಘಟನೆಗಳು ರೊಚ್ಚಿಗೆದ್ದಿದ್ದು ಸರ್ಕಾರದ ವಿರುದ್ಧ ಮುಗಿಬಿದ್ದಿವೆ,
ಇದೀಗ ಮೈಸೂರು ಸ್ಯಾಂಡಲ್ ಸೋಪ್ ಗೆ ತಮನ್ನಾ ಭಾಟಿಯರನ್ನು ರಾಯಬಾರಿಯನ್ನಾಗಿ ನೇಮಿಸಿದ್ದು ಎಂದು ಎಂ ಬಿ ಪಾಟೀಲ್ ಸಮರ್ಥಿಸಿದ್ದಾರೆ, ಬೆಂಗಳೂರಲ್ಲಿ ಸುದ್ದಗೋಷ್ಠಿ ನಡೆಸಿ ಮಾತನಾಡಿದ ಅವರು ಮೈಸೂರು ನಮಗೆ ಸ್ಯಾಂಡಲ್ ಸೋಪ್ ಅನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಿದೆ ಎಂದು ಹೇಳಿದ್ದಾರೆ, ಅಲ್ಲದೆ ರಾಯಭಾರಿಯನ್ನಾಗಿ ಯಾರ್ಯಾರನ್ನು ಕೇಳಲಾಗಿತ್ತು ಎಂಬ ನಟಿಯರ ಹೆಸರುಗಳನ್ನು ಬಹಿರಂಗ ಮಾಡಿದ್ದಾರೆ,

ಬಾಲಿವುಡ್ ನಟಿ ಹಾಗೂ ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ಅವರು ನಮ್ಮ ಬಜೆಟ್ ಗೆ ಸರಿ ಹೊಂದಲ್ಲ, ಹಾಲಿವುಡ್ ಬ್ರಾಂಡ್ ಅಂಬಾಸಿಡರ್ ಅನ್ನು ರಾಯಭಾರಿ ಆಗಿ ನೇಮಕ ಮಾಡುವ ಕಾಲ ಇನ್ನು ಬರಬೇಕಿದೆ, ಹಾಗಾಗಿ ತಮನ್ನಾ ಭಾಟಿಯಾ ಮೈಸೂರು ಸೋಪ್ ಗೆ ರಾಯಭಾರಿಯನ್ನಾಗಿ ಮಾಡಲಾಗಿದೆ ಎಂದಿದ್ದಾರೆ,
ಮೈಸೂರು ಸ್ಯಾಂಡಲ್ ಸೋಪ್ ಕನ್ನಡದ ಹೆಮ್ಮೆ ಸಂಸ್ಧೆಯನ್ನು ಮತ್ತೆ ಕಟ್ಟಬೇಕು ಎಂದು ಪ್ರಾಮಾಣಿಕಕ ಅಧಿಕಾರಿಯನ್ನು ನಿಗಮಕ್ಕೆ ನೇಮಕ ಮಾಡಿದ್ದೇವೆ ಎಂದರು, ನಮ್ಮ ಗುರಿ 5 ಸಾವಿರ ಕೋಟಿ ಆದಾಯ ತರಬೇಕು, ರಾಯಭಾರಿ ನೇಮಕ ಮಾಡಲು ಸಮಿತಿ ನೀಡಿದ ಸಲಹೆ ಮೇರೆಗೆ ತಮನ್ನಾರನ್ನು ಮಾಡಿದ್ದೇವೆ, ರಶ್ಮಿಕಾ ಮಂದಾಣ್ಣ, ಶ್ರೀಲೀಲಾ, ಪೂಜಾ ಹೆಗ್ಡೆ, ಕೀಯರಾ ಅಡ್ವಾಣಿ ಅವರನ್ನು ಸಂಪರ್ಕ ಮಾಡಿದ್ದೆವು, ಅವರೆಲ್ಲರೂ ಬೇರೆ ಕಂಪನಿಗಳಿಗೆ ರಾಯಬಾರಿ ಆಗಿದ್ದಾರೆ, ಹೀಗಾಗಿ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು,

Tags

Post a Comment

0Comments

Post a Comment (0)