ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಗೆ ಸಂಕಷ್ಟ!

varthajala
0

 




ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಜ್ಯದ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ ಕೆ ಸುರೇಶ್ ಅವರಿಗೂ ಸಹ ಸಂಕಷ್ಟ ಎದುರಾಗಿದೆ, ಅಲ್ಲದೇ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೆಸರೂ ಸಹ ಇಡಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿತವಾಗಿದೆ,
ಯಂಗ್ ಇಂಡಿಯಾಗೆ ಡಿಕೆ ಸೋದರರು 2.5 ಕೋಟಿ ರೂ ದೇಣಿಗೆ ನೀಡಿದ್ದರು, ಈ ಬಗ್ಗೆ 2022 ರಲ್ಲಿ ಇ.ಡಿ ಇಬ್ಬರೂ ಸೋದರರ ವಿಚಾರಣೆ ನಡೆಸಿತ್ತು,
ಈ ಬಗ್ಗೆ ಕೋಲಾರದಲ್ಲಿ ಸ್ಪಷ್ಟೀಕರಣ ನೀಡಿರುವ ಡಿಸಿಎಂ ಡಿಕೆಶಿ ನಾವು ಹಣ ಕೊಟ್ಟಿರುವುದು ನಿಜ ಎಂದಿದ್ದಾರೆ, ನಾನೂ ಹಾಗೂ ನನ್ನ ಸೋದರ 25 ಲಕ್ಷ ಕೊಟ್ಟಿರುವುದಾಗಿ ಹೇಳಿದ್ದಾರೆ, ಅದರೆ 2.5 ಕೋಟಿ ರೂ ಕೊಟ್ಟಿದ್ದೀರಲ್ಲಾ ಎಂದು ಕೇಳಿದಾಗ ಹೌದು ನಮ್ಮ ಟ್ರಸ್ಟ್ ನಿಂದಲೂ ದುಡ್ಡು ಹೋಗಿರುವುದು ನಿಜ ಎಂದು ಹೇಳಿದ್ದಾರೆ,
ನಮ್ಮ ಪಕ್ಷ ನಡೆಸುವ ಪೇಪರ್ ಗೆ ನಾವು ಹಣ ಕೊಡುವುದರಲ್ಲಿ ತಪ್ಪೇನಿದೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ,

Post a Comment

0Comments

Post a Comment (0)