ರಾಜಾಸ್ಧಾನ: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶಾಸಕರೊಬ್ಬರನ್ನು ವಿಶಿಷ್ಟ ಕಾರಣವೊಂದಕ್ಕೆ ಬಂಧಿಸಿದ್ದಾರೆ, ಭಾರತ ಆದಿವಾಸಿ ಪಾರ್ಟಿಯ ಶಾಸಕ ಜೈಕ್ರಿಶ್ನ್ ಪಟೇಲ್ ಸದನದಲ್ಲಿ ಪ್ರಶ್ನೆ ಕೇಳಲು ಮೂರು ಪ್ರಶ್ನೆಗೆ 20 ಲಕ್ಷ ರೂ ಲಂಚ ಪಡೆಯುತ್ತಿದ್ದರೆಂದು ಆರೋಪಿಸಲಾಗಿದ್ದು, ಭಾನುವಾರ ಎಸಿಬಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ,
ಈ ರೀತಿಯ ಪ್ರಕರಣದಲ್ಲಿ ಶಾಸಕರೊಬ್ಬರನ್ನು ಬಂಧಿಸುತ್ತಿರುವುದು ಇತಿಹಾಸದಲ್ಲಿಯೇ ಮೊದಲ ಪ್ರಕರಣವಾಗಿದೆ ಎಂದು ರಾಜಾಸ್ಧಾನದ ಎಸಿಬಿ ಮುಖ್ಯ ನಿರ್ದೇಶಕ ಪ್ರಕಾಶ್ನ ಮೆಹರ್ದ ತಿಳಿಸಿದ್ದಾರೆ,
ಬಾನಾಸ್ವರ ಜಿಲ್ಲೆಯ ಬಗಿಢೋರ ಎಸ್‌ಟಿ ಮೀಸಲು ಕ್ಷೇತ್ರದಿಂದ ಜೈಕ್ರಿಶ್ನ್ ಪಟೇಲ್ ಆರಿಸಿ ಬಂದಿದ್ದರು,
ಗಣಿಗಾರಿಕೆಯ ಬಗ್ಗೆ ಪ್ರಶ್ನೆ ಕೇಳಲು 10 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದು ಶಾಸಕ ಮುಂಗಡವಾಗಿ 2.5 ಕೋಟಿ ರೂ ಪಡೆದಿದ್ದರು, ಇದರ ಕಂತಿನಲ್ಲಿ 20 ಲಕ್ಷ ರೂ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸಾಕ್ಷಿ ಸಮೇತ ಬಂಧಿಸಿದ್ದಾರು,