ಏರ್‌ಟೆಲ್ ಫೋನ್, ಬ್ರಾಡ್‌ಬ್ಯಾಂಡ್ ಇಂಟರ್ನೆಟ್ (ಏರ್‌ಟೆಲ್ ಟೆಲಿಮೀಡಿಯಾ), ಮೊಬೈಲ್ ಫೋನ್, ಮೊಬೈಲ್ ಇಂಟರ್ನೆಟ್ ಮತ್ತು ಟೆಲಿವಿಷನ್ ಸೇರಿದಂತೆ ಮೊಬೈಲ್ ಮತ್ತು ಫೈ ಸಂವಹನ ಸೇವೆಗಳನ್ನು ನೀಡುತ್ತದೆ. ನಿನ್ನೆ ರಾತ್ರಿಯಿಂದ ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ದೇಶದ ವಿವಿಧೆಡೆ ಏರ್‌ಟೆಲ್ ಸಿಗ್ನಲ್ ಫುಲ್ ಡೌನ್ ಆಗಿದೆ. ಬಳಕೆದಾರರು ಏರ್‌ಟೆಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ದೂರುಗಳನ್ನು ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ ನೋ ಸಿಗ್ನಲ್ ಜೊತೆ ಇನ್ನು ಅನೇಕ ಸಮಸ್ಯೆಗಳ ಬಗ್ಗೆ ಡೌನ್‌ಡೆಕ್ಟರ್ ವರದಿ ಮಾಡಿದೆ.
ಟೆಲಿಕಾಂ ದೈತ್ಯ ಏರ್‌ಟೆಲ್ ಕಳೆದ ರಾತ್ರಿಯಿಂದ ವ್ಯಾಪಕ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಭಾರತದಲ್ಲಿ ಸಾವಿರಾರು ಗ್ರಾಹಕರು ಸಿಗ್ನಲ್ ಮತ್ತು ಇಂಟರ್ನೆಟ್ ಸಂಪರ್ಕ ಕಳೆದುಕೊಂಡರು. ಏರ್‌ಟೆಲ್‌ನ ಮೊಬೈಲ್ ನೆಟ್‌ವರ್ಕ್ ಸೇವೆಗಳಲ್ಲಿನ ಪ್ರಮುಖ ವ್ಯತ್ಯಯದಿಂದಾಗಿ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ ಮತ್ತು ದೆಹಲಿ ಸೇರಿದಂತೆ ಕೆಲವು ಭಾಗಗಳಲ್ಲಿ ನೋ ಸಿಗ್ನಲ್ ಮತ್ತು ಇಂಟರ್ನೆಟ್ ವ್ಯತ್ಯಯ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿವೆ. ಈ ಬಗ್ಗೆ ಡೌನ್‌ಡೆಕ್ಟರ್ ಸಹ ವರದಿ ಮಾಡಿದೆ.
ಗ್ರಾಹಕರ ಸಮಸ್ಯೆಗಳು ದಿನವಿಡೀ ವರದಿಯಾಗುವುದು ಸಾಮಾನ್ಯ. ಸಮಸ್ಯೆ ಉಲ್ಬಣಗೊಂಡಾಗ ಮಾತ್ರ ಡೌನ್‌ಡೆಕ್ಟರ್ ಘಟನೆಯನ್ನು ವರದಿ ಮಾಡುತ್ತದೆ. ಸದ್ಯ ಡೌನ್‌ಡೆಕ್ಟರ್ ಪ್ರಕಾರ, ಶೇ.47ರಷ್ಟು ಏರ್‌ಟೆಲ್ ಸಿಗ್ನಲ್ ಸಮಸ್ಯೆ ಕಂಡು ಬಂದ್ರೆ, ಶೇ.36 ರಷ್ಟು ಮೊಬೈಲ್ ಇಂಟರ್ನೆಟ್ ಸಮಸ್ಯೆ ಎದುರಾಗಿದೆ. ಇನ್ನು ಶೇ.17 ರಷ್ಟು ಟೋಟಲ್ ಬ್ಲ್ಯಾಕೌಟ್ ಆಗಿದೆ ಎಂದು ಡೌನ್‌ಡೆಕ್ಟರ್ ವರದಿ ಮಾಡಿದೆ.
ಹೆಚ್ಚು ಪರಿಣಾಮ ಬೀರಿದ ನಗರಗಳಲ್ಲಿ ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದ್ದು, ಮುಖ್ಯವಾಗಿ ಉತ್ತರ ಭಾರತದ ನಗರಗಳು ಮತ್ತು ದೆಹಲಿಯ ಕೆಲವು ಭಾಗಗಳು ಎಂದು ವರದಿಯಾಗಿದೆ. ರಿಯಲ್ ಟೈಂ ಔಟ್ರೇಜ್ ಟ್ರ್ಯಾಕರ್ ಡೌನ್‌ಡೆಕ್ಟರ್ ಪ್ರಕಾರ, ಪ್ಲಾಟ್‌ಫಾರ್ಮ್ ಏರ್‌ಟೆಲ್ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವರದಿಗಳನ್ನು ದಾಖಲಿಸಿದೆ. ಔಟ್ರೇಜ್ ನಿನ್ನೆ ರಾತ್ರಿಯಿಂದ ಪ್ರಾರಂಭವಾಗಿದ್ದು, ಇಂದು ಬೆಳಗ್ಗೆವರೆಗೆ ಸಮಸ್ಯೆ ಮುಂದುವರಿದಿದೆ. ಏರ್‌ಟೆಲ್ ಔಟ್ರೇಜ್ ಹಿನ್ನೆಲೆ ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸೇವೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಇಲ್ಲಿವರೆಗೆ ಏರ್‌ಟೆಲ್ ಕಂಪನಿಯವರು ಯಾವುದೇ ರೀತಿಯಾಗಿ ಪ್ರತಿಕ್ರಿಯಿಸಿಲ್ಲ.