ಭಾರತದ ಎಷ್ಟು ವಿಮಾನ ಧ್ವಂಸಗೊಂಡಿದೆ- ಮಾಹಿತಿ ಎಂದ ರಾಗಾ!

varthajala
0

 



ನವದೆಹಲಿ: ಆಪರೇಷನ್ ಸಿಂದೂರ್ ನಲ್ಲಿ ಎಷ್ಟು ಯುದ್ಧ ವಿಮಾನಗಳನ್ನು ಭಾರತ ಕಳೆದುಕೊಂಡಿದೆ ಅನ್ನೋದನ್ನು ವಿದೇಶಾಂಗ ಸಚಿವ ಜೈ ಶಂಕರ್ ಸ್ಪಷ್ಟಪಡಿಸಬೇಕು ಎಂದು ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ,
ಮಾಧ್ಯಮಗಳ ಜೊತೆ ಮಾತಾಡಿರುವ ರಾಗಾ ಭಾರತ ಸೇನೆ ಅಪ್ರತಿಮ ಸಾಧನೆ ಮಾಡಿದೆ, ಶತ್ರುಗಳನ್ನು ಹೊಡೆದುಹಾಕಿದೆ, ಆದ್ರೆ ಪೂರ್ತಿ ದಾಳಿಗೆ ನಿರ್ದಿಷ್ಟ ಗುರಿಯೆ ಇಲ್ಲದಂತಾಗಿದ್ದು ಅನೇಕ ಯುದ್ಧ ಉಪಕಾರಣಗಳು ನಾಶವಾಗಿದೆ, ಇದೆಲ್ಲಕ್ಕೂ ಜೈ ಶಂಕರ್ ಉತ್ತರ ಕೊಡಬೇಕು ಅಂತ ಹೇಳಿದ್ದಾರೆ,
ಆಪರೇಷನ್ ಸಿಂಧೂರ್ ಮುಗಿಯುವವರೆಗೂ ಕಾದು ನಂತರ ಪಾಕಿಸ್ತಾನಕ್ಕೆ ವಿಷಯ ತಿಳಿಸಬಹುದಾಗಿತ್ತು ಆರಂಭಿಕ ಹಂತದಲ್ಲೇ ತಿಳಿಸಿದ್ದರಿಂದ ನಮ್ಮ ಸೇನಾಪಡೆಯ ಸೈನಿಕರು ಯುದ್ಧ ವಿಮಾನಗಳಿಗೆ ಸಂಕಷ್ಟ ಎದುರಾಗಿದೆ ಎಂದು ರಾಹುಲ್ ಹೇಳಿದ್ದಾರೆ, ಹಾಗೆಯೇ ಇಡೀ ಸಂಸತ್ ಆಪರೇಷನ್ ಸಿಂದೂರ್ ನ ಕಂಪ್ಲಿಟ್ ಮಾಹಿತಿಯನ್ನು ನಿರೀಕ್ಷೆಯಲ್ಲಿದೆ ಎಂದು ರಾಹುಲ್ ಹೇಳಿದ್ದಾರೆ,

Post a Comment

0Comments

Post a Comment (0)