ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವದಲ್ಲಿ "ನರ್ತನ ಸೇವೆ"
ಬೆಂಗಳೂರು : ಬೆಂಗಳೂರಿನ ಹೆಸರಾಂತ ನೃತ್ಯ ದಿಶಾ ಟ್ರಸ್ಟ್ ಸಂಸ್ಥೆಯ ನಿರ್ದೇಶಕಿ ಡಾ|| ದರ್ಶಿನಿ ಮಂಜುನಾಥ್ ಅವರ ನೇತೃತ್ವದಲ್ಲಿ ತಮ್ಮ ವಿದ್ಯಾರ್ಥಿಗಳಿಂದ ನಾಗದೇವನಹಳ್ಳಿಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಜೂನ್ 14ರಂದು ನೃತ್ಯ ಕಾರ್ಯಕ್ರಮದ ಆಯೋಜನೆ ಹಾಗೂ ಸೇವೆಯನ್ನು ಮಾಡಿ ಕಲಾರಸಿಕರ ಅಭಿನಂದನೆಗೆ ಪಾತ್ರರಾದರು.