ಬೆಂಗಳೂರು, ಜುಲೈ 10 (ಕರ್ನಾಟಕ ವಾರ್ತೆ):
ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ ಅಂಚೆ, ವಿದ್ಯಾರಣ್ಯಪುರ- ಯಲಹಂಕ ರಸ್ತೆ, ಬೆಂಗಳೂರಿನಲ್ಲಿ 2025 ರ ಜುಲೈ 11 ರಿಂದ 13 ರ ವರೆಗೆ "ಸಸ್ಯ ಸಂತೆ" ಯನ್ನು ಏರ್ಪಡಿಸಲಾಗಿದೆ.
ಈ ಸಸ್ಯ ಸಂತೆಯಲ್ಲಿ ಹಣ್ಣಿನ ಕಸಿ ಸಸಿಗಳು, ತರಕಾರಿ ಬೀಜ, ಔಷಧೀಯ & ಸುಗಂಧಿ ಸಸಿಗಳು ಮತ್ತು ಅಲಂಕಾರಿಕ ಸಸಿಗಳು, ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ, ಇತರೆ ಸಾವಯವ ಪರಿಕರಗಳು, ಪೀಡೆನಾಶಕ, ಕೃಷಿ ಉಪಕರಣಗಳು, ಗಾರ್ಡನ್ ಪರಿಕರಗಳು ಮತ್ತು ಹೂವಿನ ಕುಂಡಗಳನ್ನು ಹಾಗೂ ಸಾವಯವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಇಚ್ಚಿಸುವವರು ಮಾರಾಟ ಮಳಿಗೆ ನೋಂದಾಯಿಸಿಕೊಳ್ಳಲು 7795072699/ 7892057925/ 9538771475ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.