ಜುಲೈ 15 ರಂದು ನಬಾರ್ಡ್‍ನ 44 ನೇ ಸಂಸ್ಥಾಪನಾ ದಿನಾಚರಣೆ

varthajala
0

ಬೆಂಗಳೂರು, ಜುಲೈ 14 (ಕರ್ನಾಟಕ ವಾರ್ತೆ) : ನಬಾರ್ಡ್‍ನ 44 ನೇ ಸಂಸ್ಥಾಪನಾ ದಿನಾಚರಣೆಯನ್ನು ಜುಲೈ 15 ರಂದು ಅಪರಾಹ್ನ 12:00 ಗಂಟೆಗೆ ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ನಬಾರ್ಡ್‍ನ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು,  ಕಾರ್ಯಕ್ರಮದಲ್ಲಿ ಹಿರಿಯ ಬ್ಯಾಂಕಿಂಗ್ ವಲಯದ ಅಧಿಕಾರಿಗಳು, ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಸಹಕಾರಿ ಮತ್ತು ಬ್ಯಾಂಕಿಂಗ್ ವಲಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ್ ಎಂ. ಭಂಡಿವಾಡ್, ಎಸ್‍ಎಲ್‍ಬಿಸಿಯ ಸಂಚಾಲಕ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಸಿಇಒ ಎಂ. ಭಾಸ್ಕರ ಚಕ್ರವರ್ತಿ ಪಾಲ್ಗೊಳ್ಳಲಿದ್ದಾರೆ.

ನಬಾರ್ಡ್‍ನ 40 ವರ್ಷಗಳಿಗೂ ಹೆಚ್ಚಿನ ಇತಿಹಾಸದಲ್ಲಿ ವಿವಿಧ ಉಪಕ್ರಮಗಳ ಮೂಲಕ ಭಾರತದ ಕೃಷಿ ಮತ್ತು ಗ್ರಾಮೀಣ ಪ್ರದೇಶದ ಸ್ವರೂಪವನ್ನು ಬದಲಾಯಿಸಿದೆ. ಸಾಲದ ಹರಿವು, ಗ್ರಾಮೀಣ ಮೂಲಸೌಕರ್ಯ ಮತ್ತು ಸ್ವಸಹಾಯ ಗುಂಪುಗಳು, ಜೆಎಲ್‍ಜಿಎಸ್, ಎಫ್‍ಪಿಒಎಸ್ ಮತ್ತು ಬುಡಕಟ್ಟು ಸಮುದಾಯಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ, ನಬಾರ್ಡ್ ಗ್ರಾಮೀಣ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೆಚ್ಚುವರಿಯಾಗಿ, ಇದು ಡಿಜಿಟಲ್ ಬ್ಯಾಂಕಿಂಗ್, ತಂತ್ರಜ್ಞಾನ ವರ್ಗಾವಣೆ, ಪ್ರದೇಶಗಳು ಮತ್ತು ಸಾಂಸ್ಥಿಕ ಬಲವರ್ಧನೆಯನ್ನು ಸಕ್ರಿಯಗೊಳಿಸಿದೆ. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಜನರ ಜೀವನವನ್ನು ಸುಧಾರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)