ಬೆಂಗಳೂರು, ಜುಲೈ 10 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರಿ ನೌಕರರ ಕುಟುಂಬದ 80 ವರ್ಷ ಪೂರೈಸಿರುವ ಹಾಗೂ ಅದಕ್ಕೂ ಮೇಲ್ಮಟ್ಟ ವಯಸ್ಸನ್ನು ಪೂರ್ಣಗೊಳಿಸಿರುವ ಪಿಂಚಣಿದಾರರಿಗೆ ಹೆಚ್ಚುವರಿ ಕುಟುಂಬ ಪಿಂಚಣಿಯನ್ನು ಮಂಜೂರು ಮಾಡಲು ಪಿಂಚಣಿ ಪಾವತಿ ಆದೇಶ (ಪಿಪಿಒ) ದಲ್ಲಿ ಜನ್ಮ ದಿನಾಂಕವು ಲಭ್ಯವಿಲ್ಲದಿದ್ದಲ್ಲಿ ಸರ್ಕಾರದ ಆದೇಶ ಸಂಖ್ಯೆ: ಆಇ-ಪಿಇಎನ್/262/2024, ದಿನಾಂಕ:28.08.2024 ರ ಕಂಡಿಕೆ 11.1 ರಲ್ಲಿ ಸೂಚಿಸಿರುವಂತೆ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಜೊತೆಯಾಗಿ ಲಭ್ಯವಿರುವ ಪಿಂಚಣಿದಾರರ ಪ್ರಕರಣಗಳಲ್ಲಿ ಸಂದರ್ಭಾನುಸಾರ ದಿನಾಂಕ:11.01.2019ರ ಆದೇಶದನ್ವಯ ಲಭ್ಯವಿರುವ ಹೆಚ್ಚುವರಿ ಪಿಂಚಣಿಯ ಸೌಲಭ್ಯವು ಜೀವಂತ ಸದಸ್ಯನ ಪರಿಷ್ಕøತ ನಿವೃತ್ತಿ ವೇತನಕ್ಕೆ ಮಾತ್ರ ಸೀಮಿತಗೊಳಿಸತಕ್ಕದ್ದು.
ಕುಟುಂಬ ಪಿಂಚಣಿಯನ್ನು ಮಾತ್ರ ಪಡೆಯುತ್ತಿರುವ ಕುಟುಂಬ ಪಿಂಚಣಿದಾರರ ಜನ್ಮ ದಿನಾಂಕವು ಪಿಂಚಣಿ ಪಾವತಿ ಆದೇಶ (ಪಿ.ಪಿ.ಓ.)ದಲ್ಲಿ ಲಭ್ಯವಿಲ್ಲದಿದ್ದಲ್ಲಿ ಅವರು ಕುಟುಂಬ ಪಿಂಚಣಿ ಪಡೆಯುತ್ತಿರುವ ಸಾರ್ವಜನಿಕ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಬ್ಯಾಂಕುಗಳು ನಿರ್ವಹಿಸಿರುವ ಕೆವೈಸಿಯಲ್ಲಿ ಸರ್ಕಾರದ ಅಧಿಕೃತ ಅಧಿಕೃತ ಜ್ಞಾಪನ ಪತ್ರ ಸಂ ಆಇ (ವಿ) 27 ಪಿಇಎನ್ 2007 ದಿನಾಂಕ 06.01.2011 ಸೂಚಿಸಿರುವ ದಾಖಲೆಗಳು ಲಭ್ಯವಿದ್ದಲ್ಲಿ ಸದರಿ ದಾಖಲೆಗಳಲ್ಲಿ ಲಭ್ಯವಿರುವ ಜನ್ಮ ದಿನಾಂಕವನ್ನು ಪರಿಗಣಿಸಿ, ಮಾಹಿತಿಯನ್ನು ಖಜಾನೆಗಳಿಗೆ ನೀಡಲು ಬ್ಯಾಂಕುಗಳು ಕ್ರಮ ಕೈಗೊಳ್ಳುವುದು.
ಖಜಾನೆಗಳು, ಖಜಾನೆ-2ರ ಪಿಂಚಣಿ ಡೇಟಾಬೇಸ್‍ನಲ್ಲಿ ಹಾಗೂ ಖಜಾನೆಗಳ ಕೆ.ಟಿ.ಸಿ. ವಹಿ-45 ರಲ್ಲಿ ವಿವರಗಳನ್ನು ದಾಖಲಿಸಿ ಮತ್ತು ದೃಢೀಕರಿಸಿ ಮಾಹಿತಿಯನ್ನು ಮಹಾಲೇಖಪಾಲರಿಗೆ ನೀಡುವುದು.
ಈ ವಿಷಯಗಳಿಗೆ ಅವಕಾಶ ಅನ್ವಯವಾಗದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಖಜಾನೆಗಳು ದಿನಾಂಕ: 06.01.2011ರ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ಸೂಚಿಸಿರುವ ವಿಧಾನವನ್ನು ಅನುಸರಿಸುವಂತೆ ಆರ್ಥಿಕ ಇಲಾಖೆಯ (ವಿಶ್ರಾಂತಿ ವೇತನ) ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.